ಜಿ.ಪಂ ಸದಸ್ಯರ ಸರ್ವಾಧಿಕಾರ ಧೋರಣೆಗೆ ಬೆಸತ್ತ ಗ್ರಾ.ಪಂ ಸದಸ್ಯರು

Source: sonews | By sub editor | Published on 8th August 2018, 11:31 PM | Coastal News |

ಮುಂಡಗೋಡ : ತಮ್ಮ ಗಮನಕ್ಕೆ ತಾರದೇ ಪಿಡಿಒ ಮೇಲೆ ಅಧಿಕಾರ ಚಲಾಯಿಸಿ ಜಿ.ಪಂ ಸದಸ್ಯ ಬಸವವಸತಿಯ ಫಲಾನುಭವಿಗಳ 37 ಪಟ್ಟಾವನ್ನು ತನ್ನ ಸಹಚರರಿಂದ ಪಡೆದು ವಿತರಣೆ ಮಾಡಿರುವುದು ಖಂಡನಿಯ ಹಾಗೂ ಇದು ಅಧಿಕಾರ ವಿಕೇಂದ್ರಿಕರಣದ ಕಗ್ಗೋಲೆ ಎಂದು ಅಕ್ರೋಶ ಭರಿತರಾಗಿ ಇಂದೂರ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ದೇಸಳ್ಳಿ ಹೇಳಿದರು.

ಅವರು ಮಂಗಳವಾರ ಇಂದೂರನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

67 ಬಸವ ವಸತಿ ಯೋಜನೆಯಡಿಯ ಫಲಾನುಭವಿಗಳಲ್ಲಿ 37 ಫಲಾನುಭವಿಗಳ ಪಟ್ಟಾವನ್ನು ಇಂದೂರ ಹೊಬಳಿಯ ಜಿ.ಪಂ ಸದಸ್ಯ ರವಿಗೌಡಾ ಪಾಟೀಲ ಇಂದೂರ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಅಧಿಕಾರ ಚಲಾಯಿಸಿ ನಮ್ಮ ಗಮನಕ್ಕೆ ತರದೇ  37 ಫಲಾನುಭವಿಗಳ ಪಟ್ಟಾವನ್ನು ತಮ್ಮ ಸಹಚರರಿಂದ ಪಡೆದು ಫಲಾನುಭವಿಗಳ ಮನೆ ಮನೆಗಳಿಗೆ ಹೋಗಿ ಪಟ್ಟಾವನ್ನು ವಿತರಿಸಿರುವುದು ಇದು ಗ್ರಾ.ಪಂ ಪಂಚಾಯತ್ ಮೇಲೆ ಒಬ್ಬ ಜಿ.ಪಂ ಸದಸ್ಯ ಸರ್ವಾಧಿಕಾರ ಧೋರಣೆ ಎತ್ತಿತೊರಿಸುತ್ತದೆ. ಅಲ್ಲದೆ ಪಟ್ಟಾವನ್ನು ವಿತರಣೆ ಮಾಡುವ ಸಂದರ್ಭದಲ್ಲಿ ನಾವೇ ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಕೆಲವಂದು ಫಲನುಭವಿಗಳಿಂದ ಜಿ.ಪಂ ಸದಸ್ಯರ ಸಹಚರರು ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇಂದೂರ ಪಂಚಾಯತ್ ಪಿಡಿಒ ಶ್ರೀನಿವಾಸ ಮರಾಠೆ ಯಾವತ್ತೂ ಪಟ್ಟಾವಿತರಣೆಯನ್ನು ಕೆಡಿಪಿ ಸಭೆಯಲ್ಲಿ ನೀಡಲಾಗುತ್ತದೆ ಅವರು ಶಾಸಕರು  ಕೆಡಿಪಿ ಸಭೆಯಲ್ಲಿ ನೀಡುತ್ತಾರೆ ಎಂದು ತಿಳಿದು ಕೊಟ್ಟಿದ್ದಾರೆ.


2017-18 ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ 67 ಜನರಿಗೆ ಮನೆಗಳು ಮಂಜೂರಿಯಾಗಿದ್ದವು. ವಿಧಾಸ ಸಭೆ ಚುನಾವಣೆ ಕಾರಣ ನೀತಿ ಸಂಹೀತೆ ಜಾರಿಗೆ ಯಾದ್ದರಿಂದ ಫಲಾನುಭವಿಗಳಿಗೆ ಮನೆಗಳ ಪಟ್ಟಾ ವಿತರಣೆ ಮಾಡಿರಲಿಲ್ಲ. ಈಗ ಪಟ್ಟಾ ವಿತರಣೆ ಮಾಡಲು ಅವಕಾಶ ನೀಡಿದ್ದಾರೆ ಆದರೆ ಮನೆಗಳನ್ನು ಕಟ್ಟಿಕೊಳ್ಳಲು ಸಮಯವಕಾಶ ಕಡಿಮೆ ನೀಡಿರುವುದರಿಂದ ಫಲಾನುಭವಿಗಳಿಗೆ ಜನವರಿ ತಿಂಗಳ ತನಕ ಸಮಯಕೊಟ್ಟರೆ ಫಲಾನುಭವಿಗಳಿಗೆ ಸಹಾಯವಾಗುತ್ತದೆ ಎಂದು ಇಂದೂರ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ದೇಸಳ್ಳಿ ಹೇಳಿದರು.

ಗ್ರಾ.ಪಂ ಪ್ರತಿನಿಧಿಗಳು, ತಾ.ಪಂ ಪ್ರತಿನಿಧಿಗಳು, ಜಿ.ಪಂ ಪ್ರತಿನಿಧಿಗಳು ಹಾಗೂ ಶಾಸಕರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಗ್ರಾ.ಪಂ ಕಾರ್ಯವ್ಯಾಪ್ತಿಯಲ್ಲಿ ಶಾಸಕರು ಹಾಗೂ ಜಿಲ್ಲಾ ಪಂಚಾಯತ ಸದಸ್ಯರು ಮೂಗು ತೂರಿಸುತ್ತಿರುವುದು ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎತ್ತಿತೋರಿಸುತ್ತದೆ. ಜಿ.ಪಂ ಸದಸ್ಯರು ತಮ್ಮ ಸರಕಾರವಿದೆ ಶಾಸಕರು ತಮ್ಮವರೆ ಇದ್ದಾರೆ ಎಂದು ತಮ್ಮ ಅಧಿಕಾರವನ್ನು ದುರ್ಭಳಕೆ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ, ಸಿ.ಇ.ಒ ರವರಿಗೆ ದೂರನ್ನು ಸಲ್ಲಿಸಲಾಗುವುದು. ಅವರು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಟಾ ನಡೆಸಲಾಗುವುದು ಎಂದರು.

ನಮ್ಮ ಇಂದೂರ ಗ್ರಾ.ಪಂ ಗೆ ಸಂಬಂದ ಪಟ್ಟಂತೆ ಎಲ್ಲ ಕಾರ್ಯಗಳಲ್ಲಿಯೂ ಶಾಸಕರು ಹಾಗೂ ಜಿ.ಪಂ ಸದಸ್ಯ ರವಿಗೌಡಾ ಪಾಟೀಲ ಮೂಗುತೂರಿಸುತ್ತಾರೆ. ಹೀಗಾದರೆ ನಾವು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಪರ ಕೆಲಸಮಾಡುವುದಾದರು ಹೇಗೆ ಎಂದು ಖೇದ ವ್ಯಕ್ತಪಡಿಸಿದರು. 

ಈಗ ಉಳಿದಿರುವ 30 ಸದಸ್ಯರ ಪಟ್ಟಾವನ್ನು ಜಿ.ಪಂ ಸದಸ್ಯರೇ ಹಂಚಿಬಿಡುತ್ತಾರೆ ಎಂದುಕೊಂಡು ಈಗ ನಾವೇ 30 ಫಲಾನುಭವಿಗಳ ಪಟ್ಟಾವನ್ನು ವಿತರಣೆ ಮಾಡಿದ್ದೇವೆ   ಅಧ್ಯಕ್ಷರ ಪ್ರತಿಯೊಂದು ಮಾತಿಗೆ ಹಾಜರಿದ್ದ ಸದಸ್ಯರು ಧ್ವನಿಗೂಡಿಸಿದರು.

ಉಪಾಧ್ಯಕ್ಷ  ಬಿಸ್ಟನ್‍ಗೌಡ  ಪಾಟೀಲ, ಗಣೇಶ ಕಿರ್ತಪ್ಪನವರ, ಕಸ್ತೂರಿ ಹರಿಜನ, ನಿಲವ್ವಾ ಸುಣಗಾರ, ಶರೀಫ ದುಂಡಶಿ, ಜಗದೀಶ ಒಣಿಕೇರಿ, ಬೇಗಂ ದೊಡ್ಡಮನಿ, ದ್ರಾಕ್ಷಾಯಣಿ ಕರಿಬಸನಗೌಡ್ರ, ಯಲ್ಲವ್ವಾ ಹುಲಿಕಟ್ಟಿ, ನಾಗರಾಜ ಗೋಣೆಪ್ಪನವರ, ಚೆನ್ನವ್ವಾ ಸುರಗೀಮಠ, ರುದ್ರವ್ವಾ ಬಡಿಗೇರ ಹಾಗೂ ಗೌರವ್ವ ಹಿರಳ್ಳಿ ಉಪಸ್ಥಿತರಿದ್ದರು.
 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...