ಮಾರ್ಕೇಟಿಂಗ ಸೊಸೈಟಿ ಲಾಭದಲ್ಲಿ : ಸಂಗೂರಮಠ        

Source: S O News service | By Staff Correspondent | Published on 26th September 2016, 11:26 PM | Coastal News |

    
ಮುಂಡಗೋಡ: ಕಳೆದ ಕೆಲವು ವರ್ಷಗಳಿಂದ ನಷ್ಟದಲ್ಲಿ ನಡೆಯುತ್ತಿದ್ದ ಮಾರ್ಕೇಟಿಂಗ ಸೋಸೈಟಿ ೨೦೧೫-೧೬ ನೇ ಸಾಲಿನಲ್ಲಿ ಎರಡು ಲಕ್ಷ ಎಂಬತ್ತಮೂರು ಸಾವಿರ ರೂ ಲಾಭಗಳಿಸಿ ಸಂಘವು ಪ್ರಗತಿ ಪತದತ್ತ ದಾಪುಗಾಲು ಹಾಕುತ್ತಿದೆ ಎಂದು ಮಾರ್ಕೇಟಿಂಗ ಸೋಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ ಹೇಳಿದರು
ಅವರು ರವಿವಾರ ಮಾರ್ಕೇಟಿಂಗ ಸೋಸೈಟಿಯ ವಾರ್ಷಿಕ ಸಭೆಯಲ್ಲಿ ಶೇರುದಾರ ರೈತರಿಗೆ ಹೇಳಿದರು
ನಷ್ಟ(ಅವ್ಯವಹಾರ) ಆದಂತಹವನ್ನು ಸುಮಾರು ಮಾರ್ಕೆಟಿಂಗ ಸೊಸೈಟಿ ವಿವಿಧ ವಿಭಾಗಳಿಂದ ಒಟ್ಟು  ೪೮ ಲಕ್ಷ ರೂ. ವಸೂಲು ಮಾಡಲಾಗಿದೆ
 ರಸಾಯನಿಕ ಗೊಬ್ಬರದ ವಿಭಾಗದಿಂದ ೩೬,೦೩೭೨೩=೦೦, ಟಿ.ವಿ. ವಿಭಾಗದಿಂದ೬೬೧೬೩=೦೦, ಬೀಜ ಮತ್ತು ಕ್ರೀಮಿನಾಶಕ ವಿಭಾಗದಿಂದ ೫೦೪೭೨೧=೦೦ ಮಾಲಿನ ಕೊರತೆ ರಖಮ , ಕೃಷಿ ಉಪಕರಣ ವಿಭಾಗದಿಂದ೨೨೧೦೦೦=೦೦ ಮಾಲಿನ ಕೊರತೆ ರಖಮ ಮುಂತಾದ ವಿಭಾಗಗಳಿಂದ ವಸೂಲಿ ಮಾಡಲಾಗಿದೆ

ಹಾಗೂ ಗೊಬ್ಬರ ವಿಭಾಗದಲ್ಲಿ ಸುಮಾರು ೭೩ ಲಕ್ಷ ೮೪ ಸಾವಿರ ೩೭೧ ರೂ. ನಷ್ಟವಾಗಿದ್ದನ್ನು ಶ್ರಮಪಟ್ಟು  ಪತ್ತೆಹಚ್ಚಿ ಸಹಕಾರ ಸಂಘಗಳ ಅಧಿನಿಯಮದಂತೆ ತನಿಖೆ ನಡೆಸಿ, ಇದಕ್ಕೆ ಜವಾಬ್ದಾರರಾದ ಮೂರು ನೌಕರರನ್ನು ಅಮಾನತ್ ಮಾಡಲಾಗಿದೆ ಎಂದರು 
೭೩ ಲಕ್ಷ ರೂ ಕೇವಲ ಅಮಾನತ್ ಮಾಡಿದರೆ ಸಾಲದು ಇದನ್ನು ಸಂಬಂದ ಪಟ್ಟ ನೌಕರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೆಲವರು ಹೇಳಿದರು
ಎಪಿ‌ಎಮ್‌ಸಿ ಅಧ್ಯಕ್ಷ ಎಮ್.ಬಿ.ಕುಟ್ರಿ ಮಾತನಾಡಿ ಅವ್ಯವಹಾರಕ್ಕೆ ಕೇವಲ ಮೂವರು ಸಿಬ್ಬಂದಿಗಳನ್ನು ಬಲಿಪಶು ಮಾಡಬಾರದು. ಅಂದಿನ ಆಡಳಿತ ಮಂಡಳಿ ಕೂಡ ಇದಕ್ಕೆ ಜವಾಬ್ದಾರನ್ನಾಗಿ ಮಾಡಿ   ಅವರ ಮೇಲೆ ಕೂಡ ಕ್ರಮ ಜರುಗಿಸಿ ಎಂದರು. 
ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳಲಾಗದು. ನ್ಯಾಯಾಲಯ ತೀರ್ಮಾನವೇ ಅಂತಿಮ ಎಂದರು. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ೩ ನೌಕರರನ್ನು ಕೈಬೀಡಲಾಗಿದೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಕೆಲವರು ಒತ್ತಾಯಿಸಿದರು. 
ಸಂಘದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು 
ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಕೊಟ್ರಪ್ಪಾ ಕೊಳ್ಳಾನವರ,ರಾಮಕೃಷ್ಣ ಮೂಲಿಮನಿ, ಎಮ್.ಪಿ.ಕುಸೂರ, ಕೃಷ್ಣ ಹಿರಳ್ಳಿ, ಉಮೇಶ ಬಿಜಾಪುರ, ಪ್ರಮೋದ ಢವಳೆ, ರಂಗಣ್ಣ ನಾಡಿಗ, ಹನುಮಂತ ಕ್ಯಾಸನಕೇರಿ, ಹುಲಗಪ್ಪ ಭೋವಿ, ಜಗದೀಶ ಕುರುಬರ, ಡಿ.ಎಫ್.ಮಡ್ಲಿ, ಸದಸ್ಯರು, ಶೇರುದಾರರು, ರೈತ ಮುಖಂಡು, ಸಿಬ್ಬಂದಿಗಳು ಮೊದಲಾದವರು ಹಾಜರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...