ಕಾಗೋಡ ತಿಮ್ಮಪ್ಪ ಎದುರೇ ಸಚಿವರ ಕುರಿತು ಅಸಮದಾನ 

Source: S O News service | By Staff Correspondent | Published on 25th October 2016, 6:38 PM | Coastal News | Don't Miss |

ಮುಂಡಗೋಡ : ಕಂದಾಯ ಸಚಿವ ಕಾಗೋಡ ತಿಮಪ್ಪ ಎದುರಿಗೆ ಜಿಲ್ಲಾ ಪಂಚಾಯತ ಕಾಂಗ್ರೆಸ್ ಸದಸ್ಯ ರವಿಗೌಡಪಾಟೀಲ ಗ್ರಾಮೀಣ ಅಭಿವೃದ್ದಿ ಸಚಿವರ ಕುರಿತು ಅಸಮದಾನ ವ್ಯಕ್ತಪಡಿಸಿದ ಪ್ರಸಂಗ ಜರುಗಿತು   ಕಾಗೋಡ ತಿಮಪ್ಪ ಮುಂಡಗೋಡ ಮಾರ್ಗವಾಗಿ  ಕಿತ್ತೂರ ರಾಣಿ ಚೆನ್ನಮ್ಮ ಜನ್ಮದಿನೋತ್ಸದೊಂದು ಕಿತ್ತೂರ ನ್ನು ಹೊಸತಾಲೂಕ ಘೋಷಣೆ ಮಾಡುವ ಸಲುವಾಗಿ ಮುಂಡಗೋಡ ಮಾರ್ಗವಾಗಿ ಹೊರಟಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ತಡೆದು  ಪ್ರವಾಸಿಮಂದಿರ ಕೆಲಹೊತ್ತು ಮಾತುಕತೆ ನಡೆಸಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ರವಿಗೌಡಾ ಪಾಟೀಲ, ಗ್ರಾಮೀಣಾಭಿವೃದ್ದಿ ಸಚಿವರ ಕುರಿತು ಖಾರವಾಗಿ ಮಾತನಾಡಿದ ಅವರು ಎಚ್.ಕೆ ಅವರು ಗ್ರಾಮೀಣಾಭಿವೃದ್ದಿ ಸಚಿವರು ತೆಗೆದಕೊಂಡಿರುವ ಕ್ರಮಗಳಿಂದ   ನಾವು ನಮ್ಮ ಕ್ಷೇತ್ರದ ಅಭಿವೃದ್ದಿ ಮಾಡುವುದು ಮರಿಚಿಕೆಯಾಗಿದೆ. ನಾವು ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಯಾವ ಅನುದಾನದಲ್ಲಿ ಮಾಡಬೇಕು ಅಭಿವೃದ್ದಿಕಾರ್ಯಗಳನ್ನು ನಡೆದಿಲ್ಲಾ ಎಂದಾದರೆ ನಾವು ನಮ್ಮ ಮತದಾರ ದೇವರಿಗೆ ಯಾವ ಮುಖ ತೋರಿಸುವುದು ಎಂದು ಹತಾಶೆಯಿಂದ ನುಡಿದರು. 
ಅವರ ಮಾತನ್ನು ಕೇಳಿದ ಸಚಿವರು ನಗುತ್ತಲೆ ಉತ್ತರನೀಡಿ ಗ್ರಾಮೀಣಾಭಿವೃದ್ದಿ ಸಚಿವರಿಗೆ ಹೇಳುತ್ತಿನಿಪ್ಪಾ ಹೇಳುತ್ತಿನಿ ಹತಾಷೆಯಾಗುವುದು ಬೇಡ ಎಂದರು
ಇದೇ ಸಮಯದಲ್ಲಿ ಪತ್ರಕರ್ತರು ಮಾಜಿ ಸಚಿವ ಶ್ರೀನಿವಾಸ ಪ್ರಸಾದವರು ರಾಜ್ಯ ಕಾಂಗ್ರೆಸ್ ನಿಯಂತ್ರಣ ಕೆಲವೆ ನಾಯಕರ ಕೈಯಲ್ಲಿದೆ  ಆ ನಾಯಕರು  ನುಡಿದಂತ  ದೆಹಲಿ ಕಾಂಗ್ರೆಸ್ ಹೈಕಮಾಂಡ ಕೇಳುತ್ತಾರೆ ಎಂದು ಕೇಳಿದಾಗ ನೋಡ್ರಿ ಅವರು ಮೂರು ವರ್ಷ ಅಧಿಕಾರ ಅನುಭವಿಸಿದ್ದಾರೆ ಆ ಸಮಯದಲ್ಲಿ ಹೇಳಲಾರದ್ದು ಈಗ ಹೇಳುತ್ತಿದ್ದಾರೆ, ಒಂದು ಜವಾಬ್ದಾರಿ ಸ್ಥಾನದಲ್ಲಿದ್ದಾಗ  ಜವಾಬ್ದಾರಿಯುತ ಮಾತನಾಡುವುದು ಕಲಿಯಬೇಕು ಎಂದು ಖಾರವಾಗಿ ಪ್ರತಿಕ್ರೀಯಿಸಿದರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಧುರಿಣ ಕೃಷ್ಣಾ ಹಿರೇಹಳ್ಳಿ, ರಾಮು ಪಾಲೇಕರ, ಸಂಜು ಪೀಶೆ, ಯುವ ಧುರಿಣ ಮಹ್ಮದಗೌಸ ಮಕಾನದಾರ, ರಾಬರ್ಟಲೋಬೊ, ಬಾಬುಲಾಲ ಮಕಾನದಾರ ಅಲ್ಲಿಖಾನ ಪಠಾಣ, ಲಿಂಗರಾಜ ಕನ್ನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...