ಮುಂಡಗೋಡ; ಪ.ಪಂ. ಭೇಟಿ ನೀಡಿದ ಜಿಲ್ಲಾಧಿಕಾರಿ; ಸಿಬ್ಬಂದಿಗಳ ತರಾಟೆ

Source: sonews | By Staff Correspondent | Published on 21st August 2017, 12:05 AM | Coastal News | Don't Miss |

ಮುಂಡಗೋಡ; ಪಟ್ಟಣ ಪಂಚಾಯತಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಅವರು ಸಿಬ್ಬಂದಿಗಳ ಸಭೆ ನಡೆಸಿ ಪಟ್ಟಣ ಪಂಚಾಯತನ ವಿವಿಧ ವಿಭಾಗಗಳ ದಾಖಲಾತಿಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.
ಘನತ್ಯಾಜ್ಯ ಘಟಕದ ಮೇಲ್ವಿಚಾರಕ ಸೋಮಶೇಖರ ಅಕ್ಕಿ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ನೀವು ಎಷ್ಟು ವರ್ಷದಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಿರಿ ಎಂದಾಗ ಉತ್ತರಿಸಿದ ಅಕ್ಕಿ ಕಳೆದ ಹನ್ನೊಂದು ವರ್ಷದಿಂದ ಕೆಲಸ ಮಾಡುತ್ತಿದ್ದೆನೆ ಎಂದು ಹೇಳಿದಾಗ ಜಿಲ್ಲಾಧೀಕಾರಿಗಳು ತೀವೃ ತರಾಟೆಗೆ ತೆಗೆದುಕೊಂಡು ನಿಮಗೆ ಸಂಭಳ ನೀಡುವುದು ಸಹ ವ್ಯರ್ಥ ಸರ್ಕಾರದ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ನೀವು ನೀಡುತ್ತಿರುವ ಮಾಹಿತಿ ಮೇಲೆಯೆ ಎಲ್ಲವೂ ಗೊತ್ತಾಗುತ್ತದೆ ಬೇರೆಯವರು ಮಾಡಿದ ಕೆಲಸದ ಮೇಲೆ ತಾವು ಕ್ರೇಡಿಟ್ ಪಡೆಯುವುದು ಸರಿಯಲ್ಲ ೧೪೦ ಮನೆಯವರು ಕಸವನ್ನು ಕೊಡುವುದಿಲ್ಲ ಎಂದು ವರದಿ ನೀಡಿದ್ದಿರಿ ಆಧರೆ  ಪ್ಲ್ಯಾಷ್ಟಿಕ್‌ನ್ನು  ಉಪಯೋಗಿಸುವುದಿಲ್ಲವೆ ಹಾಗೂ ಮಾಂಸಾಹಾರಿಯನ್ನು  ಸೇವಿಸಿ ಅದರ ತ್ಯಾಜ್ಯವನ್ನು ಎಲ್ಲಿ ಬಿಸಾಡುತ್ತಾರೆ ಎಂದು ಕೇಳಿದರು ಆಗ ಸರಿಯಾಗಿ ಮಾತನಾಡ ಅಕ್ಕಿಯವರನ್ನು ಅಮಾನತು ಮಾಡಲು  ಜಿಲ್ಲಾಧಿಕಾರಿಗಳು ನಿರ್ಣಯಿಸಿದರೆಂದು ತಿಳಿದು ಬಂದಿದೆ. 

ಬೇಸಿಗೆ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಆಗುವ ಸಾದ್ಯತೆಯಿರುವ ಕುರಿತು ಚರ್ಚೆ ನಡೆಯಿತು ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಆರ್.ಪಿ. ನಾಯ್ಕ ಮಾತನಾಡಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು ಸನವಳ್ಳಿ ಜಲಾಶಯದಲ್ಲಿ ಇಗಾಗಲೆ ಕೊಳವೆ ಬಾವಿಗಳನ್ನು ಕೊರೆದಿದ್ದು ಮತ್ತೆ ಕೊಳವೆ ಬಾವಿಯನ್ನು ಕೊರೆಯುವುದು ಬೇಡಾ ಎಂದು ಮುಖ್ಯಾಧೀಕಾರಿಗಳಿಗೆ ಸೂಚಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಯಾವೂದೆ ವಸತಿ ಗೃಹವಿಲ್ಲವೆಂದು ಮಾಹಿತಿಯಲ್ಲಿ ತೊರಿಸಿದ್ದಿರಿ ಪಟ್ಟಣ ವ್ಯಾಪ್ತಿಯಲ್ಲಿ ಯಾವೂದೆ ವಸತಿಗೃಹವಿಲ್ಲವೆ ಎಂದು ನಗರಾಭಿವೃದ್ಧಿ ಕೋಶಾಧಿಕಾರಿ ಆರ್.ಪಿ.ನಾಯ್ಕ ಪಶ್ನಿಸಿದಾಗ ಸಿಬ್ಬಂದಿಗಳು  ಮೌನಕ್ಕೆ ಶರಣಾದರು ನಂತರ ಮುಂದುವರೆಸಿದ ಆರ್.ಪಿ.ನಾ‌ಐಕ ನಿಮ್ಮಲ್ಲಿ ಎರಡು  ಕಲ್ಯಾಣ ಮಂಟಪವಿದ್ದು ಈ ಎರಡು ಕಲ್ಯಾಣ ಮಂಟಪದಿಂದ ಘನತ್ಯಾಜ್ಯ ವಿಲೇವಾರಿಗೆ ತಿಂಗಳಿಗೆ ಎಷ್ಟು ಹಣ ಪಡೆಯುತ್ತಿರಿ ಎಂದು ಪ್ರಶ್ನಿಸಿದಾಗ ಟ್ಯಾಕ್ಷ ತುಂಬುವ ವೇಳೆಯಲ್ಲಿಯೆ  ಎಲ್ಲ ಮನೆಗಳಿಗೆ  ಹಾಕುವಂತೆ ಘನತ್ಯಾಜ್ಯ ವಿಲೇವಾರಿಗೆ ಹಣ ವಸೂಲಿ ಮಾಡುತ್ತೇವೆ ಎಂದು  ಸಿಬ್ಬಂದಿಗಳು ಹೇಳುತ್ತಿದ್ದಂತೆ ಜಿಲ್ಲಾಧಿಕಾರಿ ಮಾಥನಾಡಿ ಈ ರೀತಿ ಮಾಡುವುದು ಸರಿಯಲ್ಲ ಹೋಟೇಲ್ ವಸತಿಗೃಹ ಹಾಗೂ ಕಲ್ಯಾಣ ಮಂಟಪಗಳಿಗೆ ಘನತ್ಯಾಜ್ಯ ಕರವನ್ನು ಹೆಚ್ಚಿಗೆ ವಸೂಲಿ ಮಾಡಲು ಸಭೆಯಲ್ಲಿ ಠರಾವು ಮಾಡುವಂತೆ ಹೇಳಿದರು.

ನಂತರ ಪಟ್ಟಣ ಪಂಚಾಯತನ ವಿವಿಧ ವಿಭಾಗಗಳ ಅಭಿವೃದ್ಧಿ ಕಾರ್ಯದ ಕುರಿತು ಮಾಹಿತಿ ಪಡೆದುಕೊಂಡರು ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣ ಪಂಚಾಯತಕ್ಕೆ ಸೇರಿದ ವಾಣಿಜ್ಯ ಮಳಿಗೆಗಳ ನಾಲ್ಕು ತಿಂಗಳ ಭಾಡಿಗೆ ಜಮಾವಣೆಗೊಂಡಿಲ್ಲ ೨.೧೯ಲಕ್ಷ ರೂ ಬಾಕಿಯಿದೆ ಎಂದು ನಗರಾಭಿವೃದ್ಧಿ ಕೋಶಾಧಿಕಾರಿ ಆರ್.ಪಿ.ನಾಯ್ಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ತಕ್ಷಣ ಜಿಲ್ಲಾಧಿಕಾರಿಗಳು ಮಾತನಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು ಯಾಕೆ ಭಾಡಿಗೆಯನ್ನು ವಸೂಲಿ ಮಾಡಿಲ್ಲ ಭಾಡಿಗೆ ತುಂಬದಿದ್ದರೆ ಮಳಿಗೆಗೆ ಬೀಗ ಹಾಕಿ ಮತ್ತೆ ಸವಾಲು ಮಾಡಿ ಬೇರೆಯವರಿಗೆ ಭಾಡಿಗೆ ನೀಡುವಂತೆ ಸೂಚನೆ ನೀಡಿದರು.
ಕಳೆದ ಒಂದು ವರ್ಷದಿಂದ ಅನಧಿಕೃತವಾಗಿ ಗೈರು ಹಾಜರಿರುವ ಪಟ್ಟಣ ಪಂಚಾಯತ ದ್ವತೀಯ ದರ್ಜೆ ಸಹಾಯಕ ಪ್ರಭಾಕರ ರಾವಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹೇಳಿದ್ದಾರೆ.
ಪಟ್ಟಣ ಪಂಚಾಯತ ಸಿಬ್ಬಂದಿಗಳ ಸಭೆ ನಡೆಸಿದ ಅವರು ಪತ್ರಕರ್ತರ ಜೋತೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ ಒಂದುವರ್ಷದಿಂದ ಪಟ್ಟಣ ಪಂಚಾಯತ ದ್ವಿತೀಯ ದರ್ಜೆ ಸಹಾಯಕ ಅನಧೀಕೃತ ಗೈರು ಹಾಜರಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ ಇಂದು ನಡೆದ ಸಭೆಯಲ್ಲಿ ಈ ಬಗ್ಗೆ  ನನ್ನ ಗಮನಕ್ಕೆ ಬಂದಿದ್ದು ತಕ್ಷಣವೆ ಜಾರಿಗೆ ಬರುವಂತೆ ಪಟ್ಟಣ ಪಂಚಾಯತ ದ್ವಿತೀಯ ದರ್ಜೆ ಸಹಾಯಕ ಪ್ರಭಾಕರ ರಾವಜಿ ಅವರನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾg.
 ಪಟ್ಟಣ ಪಂಚಾಯತನ ವಿವಿಧ ವಿಭಾಗಗಳ ದಾಖಲಾತಿಗಳನ್ನು ಪರಿಶೀಲಿಸಿ  ಸಿಬ್ಬಂದಿಗಳ ಸಭೆ ಮುಗಿಸಿ ನಂತರ ಪಟ್ಟಣದ ಹೊರವಲಯ ದಲ್ಲಿರುವ ಘನತ್ಯಾಜ್ಯ ಘಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಘನತ್ಯಾಜ್ಯ ಘಟಕದಲ್ಲಿ ಹಸಿಕಸ ಹಾಗೂ ಒಣಕಸವನ್ನು ಒಂದಡೆ ಹಾಕಿರುವುದನ್ನು ಕಂಡು ಜಿಲ್ಲಾಧಿಕಾರಿ ಪಟ್ಟಣ ಪಂಚಾ ಯತ ಸಿಬ್ಬಂದಿ ಸೋಮಶೇಖರ ಅಕ್ಕಿ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು. ಕಸವನ್ನು ಹೀಗೆ ಹಾಕಿದರೆ ಹೇಗೆ  ನಾಳೆಯಿಂದ  ಪಟ್ಟಣದಿಂದ ಇಲ್ಲಿಗೆ ತರುವ ಕಸವನ್ನು ಹಸಿಕಸ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿಕೊಂಡು ತರಬೇಕು. ಮನೆ ಮನೆ ಕಸವನ್ನು ಸಂಗ್ರಹಿಸುವಾಗ ಒಣಕಸ ಹಾಗೂ ಹಸಿಕಸ ಎಂದು ವಿಂಗಡನೆ ಮಾಡಿಯೆ ಪಡೆದುಕೋಳ್ಳಬೇಕು  ಸೆಪ್ಟಂಬರ ೧೦ ರೋಳಗಾಗಿ ಸರಿಯಾಗಿ ಘನತ್ಯಾಜ್ಯ ಘಟಕದಲ್ಲಿ ಸರಿಯಾಗಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಹಾಕದಿದ್ದರೆ ಘನತ್ಯಾಜ್ಯ ಘಟಕದ ಗೇಟ್ ಎದುರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಿ ಒಣ ಹಾಗೂ  ಹಸಿಕಸವನ್ನು ಬೇರ್ಪಡಿಸಿ ಘಟಕದೋಳಗೆ  ವಾಹನವನ್ನು ಬಿಡಲಾಗುವುದು ಒಂದು ವೇಳೆ ಕಸವನ್ನು ಬೇರೆ ಮಾಡಿ ತರದಿದ್ದರೆ ವಾಹನವನ್ನು ಘಟಕದ ಹೊರಗಡೆ ನಿಲ್ಲಿಸಿ ಆ ವಾಹನದ ಸಿಬ್ಬಂದಿಗಳೆ ಕಸವನ್ನು ವಿಂಗಡಿಸಿ ಒಳಗಡೆ ಬರುವಂತೆ ಕ್ರಮ ವಹಿಸಬೇಕಾಗುತ್ತದೆ ಎಂದು ಜಿಲ್ಲಾಧೀಕಾರಿಗಳು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಬದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ರಪೀಕ್ ಇನಾಮದಾರ್, ಉಪಾಧ್ಯಕ್ಷ ಫಕೀರಪ್ಪ ಅಂಟಾಳ, ಮುಖ್ಯಾಧಿಕಾರಿ ಸಂಗನಬಸಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರಾಬರ್ಟ ಲೋಬೋ, ಹಾಗೂ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...