ಮುಂಡಗೋ: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದೂರು ದಾಖಲು

Source: S O News service | By Staff Correspondent | Published on 26th September 2016, 11:56 PM | Coastal News | Don't Miss |


 ಧಾರವಾಡಕ್ಕೆ ಚಿಕಿತ್ಸೆಗಾಗಿ ಹೋಗಿದ್ದ ವ್ಯಕ್ತಿ ನಾಪತ್ತೆ 
ಮುಂಡಗೋಡ: ತಾಲೂಕಿನ ಕಾವಲಕೋಪ್ಪ ಗ್ರಾಮದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾಗಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ. 
ಕಾವಲಕೊಪ್ಪ ಗ್ರಾಮದ ನಿವಾಸಿ ಶಂಕರ ಫಕೀರಪ್ಪ ಕೂಸೂರು(s೫೨) ಎಂಬುವವರೆ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ ಇವರು ಹಲ್ಲು ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸೆ. ೧೯ರಂದು ಮುಂಜಾನೆ ೮:೩೦ರ ಸಮಯಕ್ಕೆ ಧಾರವಾಡ ಆಸ್ಪತ್ರೆಗೆ ಹಲ್ಲಿನ ಸೆಟ್ ಹಾಕಿಕೋಂಡು ಬರುತ್ತೆನೆ ಅಂತಾ ಹೇಳಿ ಹೋದವರು ಅಲ್ಲಿಯೂ ಹೋಗದೇ ಮರಳಿ ಈ ವರೆಗೆ ಮನೆಗೆ ಬರದೇ ಕಾಣೆಯಾಗಿದ್ದಾರೆ ಈ ಸಂಬಂಧ ನಾಪತ್ತೆಯಾದ ವ್ಯಕ್ತಿಯ ಮಗ ಪುನೀತ ಶಂಕರ ಕೂಸೂರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
ಮುಂಡಗೋಡ :  ಯುವಕ ನಾಪತ್ತೆ
ಮುಂಡಗೋಡ: ಸೆ.೧೭ ರಂದು ಮುಂಜಾನೆ ೫ಗಂಟೆಗೆ ಮನೆಯಿಂದ ಹೋಗಿದ್ದ ಯುವಕ ಇವರೆಗೂ ಪತ್ತೆಯಾಗದ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.
ಮನೆಯಿಂದ  ಹೋಗಿ ನಾಪತ್ತೆಯಾದವನನ್ನು  ಮಂಜುನಾಥ ನರಸಪ್ಪ ಹೊನ್ನಳ್ಳಿ(೨೮) ಎಂದು ತಿಳಿದು ಬಂದಿದೆ.
ಯುವಕನ ಪಾಲಕರು ಎಲ್ಲಕಡೆಯು ಹುಡಕಾಡಿ ಸಂಬಂದಿಕರಿಗೆ, ಸ್ನೇಹಿತರಿಗೆ ವಿಚಾರಿಸಲಾಗಿ ಎಲ್ಲಿಯೂ ಸುಳಿವು ಸೀಗದೇ ಇರುವುದರಿಂದ  ಯುವಕನ ತಂದೆ ನರಸಪ್ಪ ಹೊನ್ನಳ್ಳಿ ನನ್ನ ಮಗನನ್ನು ಹುಡಕಿ ಕೊಡುವಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...