ಮುಂಡಗೋಡ: ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಮಾರ್ಪಡುವುದು ಶಿಕ್ಷಕರ ನೀಡುವ ಪಾಠದಿಂದ : ಶಿವರಾಮ ಹೆಬ್ಬಾರ

Source: nazir | By Arshad Koppa | Published on 19th October 2017, 8:27 AM | Coastal News |

ಮುಂಡಗೋಡ : ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸಿದ್ದರಾಮಯ್ಯ ಸರಕಾರ ಹಲವಾರು ಯೋಜನೆಗಳು ತಂದು ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಥದಲ್ಲಿ ಸಾಗುವಂತೆ ಮಾಡಿದೆ ಎಂದು ಯಲ್ಲಾಪುರ-ಮುಂಡಗೋಡ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ  ಕ್ರೀಡಾ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಮಾರ್ಪಡುವುದು ಶಿಕ್ಷಕರ ನೀಡುವ ಪಾಠದಿಂದ. ಉತ್ತಮವಾಗಿ ಶಿಕ್ಷಣ ನೀಡದಿದ್ದರೆ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸಮಾಡುವುದು ದುರ್ಲಭ.ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳ ಕುರಿತು ಜವಾಬ್ದಾರಿ ವಹಿಸುವುದು ಅತ್ಯಾವಶ್ಯ.


ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಪುಸ್ತದ ಜೊತೆಗೆ ಸಾಮನ್ಯಜ್ಞಾನವು ವೃದ್ದಿಸಿಕೊಳ್ಳಬೇಕು. ಟಿ.ವಿ ನೋಡುತ್ತಿದ್ದರೆ ಕೇವಲ ಧಾರವಾಹಿಗಳಿಗೆ ಸಮಯ ಮೀಸಿಲಿಡದೇ ರಾಜ್ಯ, ರಾಷ್ಟ್ರ, ವಿದೇಶಗಳ ಸುದ್ದಿಗಳ ಬಗ್ಗೆ ಗಮನ ಹರಿಸಿ ವಾರ್ತೆ ನೋಡುವುದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು .ಮಾಜಿ ಪ್ರಧಾನಿ ದಿವಂಗತ ರಾಜೀವಗಾಂಧಿ 18 ವರ್ಷ ತುಂಬಿದವರೆಗೆಲ್ಲ ಮತದಾನ ಹಕ್ಕು ನೀಡಿರುವುದರಿಮದ ಈಗ ನಿಮಗೆಲ್ಲರರಿಗೂ ಮತದಾನದ ಹಕ್ಕು ಬಂದಿದೆ. ನೀವು ಬರೆದಂತ ಪರಿಕ್ಷೇಗೆ ಉಪನ್ಯಾಸಕರು ಅಂಕ ನೀಡುತ್ತಾರೆ. ನಾನು ಕ್ಷೇತ್ರದಲ್ಲಿ ಒಳ್ಳೆ ಕೆಲಸಮಾಡಿದ್ದೇನೆ ಎಂದಾದರೆ ನನ್ನ ಪರೀಕ್ಷೆ ನಡೆಯಲಿದೆ  ನಿಮ್ಮ ಮಾಕ್ರ್ಸ್ ಹಾಕಿ ಜೊತೆ ಜೊತೆಗೆ ನಿಮ್ಮ ತಂದೆ-ತಾಯಿಂದರ ಮಾಕ್ರ್ಸ ಹಾಕಿಸಿ ನನ್ನನ್ನು ಮೇಲಕ್ಕೆ ಎಬ್ಬಿಸುತ್ತಿರಿ  ಇಲ್ಲಾಂದರೆ ಕೆಳಗಿಳಿಸುತ್ತಿರಿ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಚಂದದ್ರಶೇಖರ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದರಿಂದ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಅಂಕ ಪಡೆಯುತ್ತಿದ್ದಾರೆ ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶವ್ಯಕ್ತಿಗಳಾಗಿ ಪರರಿಗೂ ಅದರ್ಶಮಯವಾಗಿರಬೇಕು ಎಂದರು
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯ ಮಂಜುಳಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಈಪಂ ಸದಸ್ಯ ರವಿಗೌಡಾ ಪಟೀಲ ಕ್ಷೇತ್ರ ಶಿಕ್ಷಣಾಧಿಕರಿ ಡಿ.ಎಸ್.ಬಸವರಾಜಪ್ಪ ಫಕ್ಕಿರಸ್ವಾಮಿ ಗುಲ್ಯಾನವರ ರಾಮಣ್ಣ ಪಾಲೇಕರ, ಉಪನ್ಯಾಸಕರಾದ ಕುಮಾರ್.ಆರ್ ಪುರತಗೇರಿ, ಮಧು, ನಿಸಾರಖಾನ್ ಉಪಸ್ಥಿತರಿದ್ದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...