ಮುಂಡಗೋಡ:ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರಾ ನೇರ ಹಣಾಹಣಿ, ಜೆಡಿಎಸ್ ಲೆಕ್ಕಕ್ಕಿಲ್ಲಾ : ಶಿವರಾಮ ಹೆಬ್ಬಾರ

Source: nazir | By Arshad Koppa | Published on 19th October 2017, 8:25 AM | Coastal News |

ಮುಂಡಗೋಡ : ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರ 2013 ರ ಚುನಾವಣೆಯಲ್ಲಿ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ 165 ಅಶ್ವಾಸನೆಗಳಲ್ಲಿ 158 ಅಶ್ವಾಸನೆಗಳನ್ನು ಪೂರ್ಣಗೊಳಸಿಸಲಾಗಿದೆ ಎಂದು ಯಲ್ಲಾಪುರ ಕ್ಷೇತ್ರದ ವಿಕ್ಷಕ ಪಠಾಣ ಹೇಳಿದರು.


ಅವರು ಹುಬ್ಬಳ್ಳಿ-ಶಿರಸಿ ರಸ್ತೆಯ ಗೋಪಾಲ ವೇರ್ಣೆಕರ ಕಟ್ಟದಲ್ಲಿ ಪಕ್ಷದ ಕಚೇರಿ  ಉದ್ಘಾಟನೆ ಹಾಗೂ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬೂತ್ ಮಟ್ಟದಲ್ಲಿ ನೇಮಕಗೊಂಡಿರುವ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಸಿದ್ದರಾಮಯ್ಯ ಮಾಡಿದಂತಹ ಜನಪರ ಕಾರ್ಯಗಳು ತಿಳಿಸಬೇಕು ಜನರ ಭಾವನೆಗಳು ಕಾಂಗ್ರೆಸ್ ಪಕ್ಷಕ್ಕೆ ಬಾಗುವಂತೆ ಮಾಡುವುದೇ ಬೂತ್ ಮಟ್ಟದ ಕಾರ್ಯಕರ್ತರು ಮಾಡಬೇಕಾದ ಮುಖ್ಯ ಕೆಲಸ ಎಂದರು


ಸರ್ವ ಜನಾಂಗದವರಿಗೆ ಸಮಾಜಿಕ ನ್ಯಾಯ ನೀಡುವುದು ಕಾಂಗ್ರೆಸ್ ಮಾತ್ರ ಬೇರೆ ಪಕ್ಷಗಳಿಂದ ಇದು ಸಾಧ್ಯವಿಲ್ಲ. ಕಾಂಗ್ರೆಸ್  ಎಲ್ಲರಿಗೂ ಸಮಬಾಳು - ಸಮಹಕ್ಕು ನೀಡುವಂತ ಪಕ್ಷವಾಗಿದೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ನೀಡಿರುವ ಆಡಳಿತ ಇಡಿ ದೇಶಕ್ಕೆ ಮಾದರಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು. ಅಭಿವೃದ್ದಿಯೇ ಕಾಂಗ್ರೆಸ್ ಪಕ್ಷದ ಮೂಲ ಮಂತ್ರ. ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದು ಹೋಗುವ ಪಕ್ಷವೇ ಕಾಂಗ್ರೆಸ್. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರಾ ನೇರ ಹಣಾಹಣಿ ನಡೆಯಲಿದೆ. ಕಾಂಗ್ರೆಸ್ ಭರ್ಜರಿ ಜಯ ಸಾಧಿಸಲಿದೆ. ಜನತಾ ದಳ ಯಾವ ಲೆಕ್ಕಕ್ಕೂ ಇಲ್ಲಾ ಎಂದು
ಸರಕಾರದ ಯೋಜನೆಯಾದ ಉಜ್ವಲ ಗ್ಯಾಸ ಯೋಜನೆಯ ಗ್ಯಾಸ ಫಲಾನುಭವಿಗಳಿಗೆ ವಿತರಣೆ ಮಾಡುವ ಸ್ಥಳಿಯ ಗ್ಯಾಸ ವಿತರಕ ವಾಹನಗಳಿಗೆ ತಮ್ಮ ಕುಟುಂಬದ( ಪತಿ-ಪತ್ನಿ) ಫೋಟೊ ಹಾಕಿಕೊಂಡು ವಿತರಿಸಬೇಕಾದ ಅವಶ್ಯಕತೆ ಏನಿದೆ. ತಮ್ಮ ಪ್ರಚಾರಮಾಡಿಕೊಳ್ಳುವುದು ಅವಶ್ಯಕತೆ ಏನಿದೆ ಎಂದು ಖಾರವಾಗಿ ನುಡಿದರು.
ನಾನು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದೆನೆ ಎಂದು ಅಪಪ್ರಚಾರಕ್ಕೆ ಕಿವಿಗೊಡಬಾರದು ನನಗೆ ಅಧಿಕಾರ ಕೊಟ್ಟಂತಹ ಪಕ್ಷಕ್ಕೆ ನಾನು ದ್ರೋಹಮಾಡಲಾರೆ. ಹೆತ್ತ ತಾಯಿಯನ್ನು ಬಿಟ್ಟು ಬೇರೆಯಾರನ್ನಾದು ತಾಯಿ ಅಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು
ಧುರಿಣರಾದ ರಾಮಣ್ಣ ಕುನ್ನೂರ, ಪಿ.ಎಸ್.ಸಂಗೂರಮಠ, ಕೃಷ್ಣಾ ಹಿರೇಹಳ್ಳಿ, ಕೆ.ಆರ್.ಬಾಳೆಕಾಯಿ ಮಾತನಾಡಿದರು.
ಪಕ್ಷದ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಪ.ಪಂ ಅಧ್ಯಕ್ಷ ಮಹ್ಮದರಫೀಕ ಇನಾಮದಾರ, , ಸೇರಿದಂತೆ ಪ.ಪಂ ಸದಸ್ಯರು, ತಾಲೂಕ ಪಂಚಾಯತ್ ಸದಸ್ಯರು, ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು, ಬೂತ್ ಮಟ್ಟದ ನಿಯೊಜನೆಗೊಂಡಿರುವ ಪದಾಧಿಕಾರಿಗಳು ಸೇರಿದಂತೆ ಮುಂತದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...