ಮುಂಡಗೋಡ: ರೋಟರಿ ಕ್ಲಬ್ ನಿಂದ ಸ್ವಚ್ಚತೆ ಕುರಿತ ಶಾಲಾ ವಿದ್ಯಾರ್ಥಿಗಳಿಗೆ ಅರಿವು

Source: nazir | By Arshad Koppa | Published on 23rd September 2017, 8:15 AM | Coastal News |

ಮುಂಡಗೋಡ : ಶಾಲೆಗಳಲ್ಲಿ ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಸ್ವಚ್ಚತೆ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋದಿಸಬೇಕು  ಆಗಲೇ  ಮಕ್ಕಳು ತಾವು ಬೆಳೆದಂತೆ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಎಂದು ತಾಲೂಕಾ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಕೆ ಬೊರಕರ ಹೇಳಿದರು .
ಅವರು ಸರಕಾರಿ ಪ್ರಾಥಮಿಕ ಶಾಲೆ ಬ್ಯಾನಳ್ಳಿಯಲ್ಲಿ ರೋಟರಿ ಕ್ಲಬ್ ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹಲ್ಲು ತಪಾಸಣೆ ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು    ಹಿಂದುಳಿದ ಜನಾಂಗವಾದ ಗೌಳಿ  ಜನರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ರೋಟರಿ ಸಂಸ್ಥೆಹೊಂದಿದೆ ಆದ್ದರಿಂದ ಗೌಳಿ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕಾಗಿ ಹೆಚ್ಚಿನ ಉತ್ತೆಜನ ನೀಡಲು ನಾವು ಇಂತಹ ಮಕ್ಕಳನ್ನೆ ಆಯ್ಕೆ ಮಾಡಿಕೊಂಡಿದೆವೆ ಎಂದು ಹೇಳಿದರು.


ರೋಟರಿಯನ್ ಪಿ ಪಿ ಛಬ್ಬಿ ವ್ಯೆಯಕ್ತಿಕ ಆರೋಗ್ಯದ ಬಗ್ಗೆ ವಿಸ್ತಾರವಾಗಿ ತಿಳಿಸಿದರು ಮಕ್ಕಳ ಶಿಸ್ತಿಗೆ ಮಾರುಹೋಗಿ ಧನ ಸಹಾಯ ಮಾಡಿದರು
ಇಂಡಿಯನ್ ಡೆಂಟಲ ಅಸೋಸಿಯನನ ನುರಿತ  ಡಾ.ಕಿರಣ ಹುಲಗೂರ 46 ಮಕ್ಕಳಿಗೆ ದಂತ ತಪಾಸಣೆ ಮಾಡಿ ತೊಂದರೆ ಇರುವ ಮಕ್ಕಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದರು. ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ರೇಶ,ಟವಾಲು ಸೋಪ,ಪೆಷ್ಟ,ಮುಂತಾದ ಸಾಮಗ್ರಿಗಳನ್ನು ವಿತರಿಸಿದರು. ಎಸ್‍ಡಿಎಮ್‍ಸಿ ಅಧ್ಯಕ್ಷ ಜಾವು ವರಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ,ರೋಟರಿಯನ್ನ ಗಳಾದ ಪ್ರಕಾಶ ಹುದಲ್ಲಮನಿ,ಶಾಜಿ ಥೋಮಸ್,ಎಂ ಜೆ.ಉಮಚ್ಚಗೆ, ಚೇತನ್ ಕಲಾಲ,  ಊರನಾಗರಿಕರಾದ ನಾಗರಾಜ ಯಮ್ಕರ, ದೊಂಡು ಗಾವಡೆ,ಸವು ಪಾಂಡರಮೀಸೆ ಡೊಂಡು ಇದ್ದರು. ರೋ.ವಸಂತ ಕೋಣಸಾಲಿ ಸ್ವಾಗತಿಸಿದರು, ಶಿಕ್ಷಕ ವಸಂತ ರಾಠೋಡ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...