ಮುಂಡಗೋಡ: ರೋಟರಿಕ್ಲಬ್ ದಿಂದ ಉಚಿತ  ಬೃಹತ್ ವೈದ್ಯಕೀಯ ಶಿಬಿರ ಸಂಪನ್ನ

Source: nazir | By Arshad Koppa | Published on 18th October 2017, 8:14 AM | Coastal News |

ಮುಂಡಗೋಡ: ಮುಂಡಗೋಡ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಹನಮಾಪುರ ಗ್ರಾಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹನುಮಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆಯಿತು


ಈ ಶಿಬಿರದಲ್ಲಿ ಮುಂಡಗೋಡದ ಖ್ಯಾತ ವೈದ್ಯರುಗಳಾದ ಡಾ|| ಎಂ. ಸಿ. ಜಂಬಗಿ, ಡಾ|| ರವಿ ಹೆಗಡೆ, ಡಾ|| ಸುರೇಶದೇಸಾಯಿ ಹಾಗೂ ಡಾ|| ಪಿ. ಪಿ. ಛಬ್ಬಿ ಭಾಗವಹಿಸಿ. 455 ರೋಗಿಗಳ ತಪಾಸಣೆ ಮಾಡಿ ಅವರ ಕಾಯಿಲೆಗೆ ಅನುಗುಣವಾಗಿ ಮಾತ್ರೆ ಹಾಗೂ ಇಂಜೇಕ್ಷನ ನೀಡಲಾಯಿತು
ಉಚಿತ ವೈದ್ಯಕೀಯ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಕರಾಗಿ ಜಿ. ಪಂ.ಸದಸ್ಯ  ಜಯಮ್ಮ ಕೃಷ್ಣ ಹಿರೇಹಳ್ಳಿ ಆಗಮಿಸಿದ್ದರು 
ಮುಖ್ಯ ಅತಿಥಿಗಳಾಗಿ ಉದ್ಯಮಿ ಕೃಷ್ಣ ಹಿರೇಹಳ್ಳಿ, ಎಸ್. ಡಿ. ಎಮ್.ಸಿ.ಅಧ್ಯಕ್ಷ ನಾಗರಾಜ ಅರ್ಕಸಾಲಿ, ಶಾಲೆಯ ಮುಖ್ಯಾದ್ಯಾಪಕಿ ಸುಶೀಲಮ್ಮ ಉಪಸ್ಥಿತರಿದ್ದರು, ಸ್ವಚ್ಚತೆಯ ಮೂಲಕ ರೋಗತಡೆಗಟ್ಟುವಕುರಿತುಡಾ|| ಎಂ. ಸಿ. ಜಂಬಗಿ ಸಲಹೆ ನೀಡಿದರು.  ಸೂಕ್ತ ಆಹಾರ ಹಾಗೂ ಜೀವನಕ್ರಮದಕುರಿತುಡಾ|| ಪಿ. ಪಿ. ಛಬ್ಬಿ ಮಾತನಾಡಿದರು.  ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಡಾ|| ರವಿ ಹೆಗಡೆ ಸಲಹೆ ನೀಡದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿಕ್ಲಬ್ಬಿನ ಅಧ್ಯಕ್ಷರಾದ ಎಸ್. ಕೆ.ಬೋರಕರ ಮಾತನಾಡಿ, ಸಮಾಜ ಸೇವೆಯೇರೋಟರಿಯ ಮುಖ್ಯಗುರಿಯಾಗಿದ್ದುಅದರಲ್ಲಿಯೂಆರೋಗ್ಯ, ಶಿಕ್ಷಣ ಹಾಗೂ ಶುದ್ದಕುಡಿಯುವ ನೀರಿನ ಬಗ್ಗೆ ರೋಟರಿ ಶ್ರಮಿಸುತ್ತದೆಎಂದರು
.ಈ ಶಿಬಿರದಲ್ಲಿ 1 ವರ್ಷದಮಗುವಿನಿಂದ 90 ವರ್ಷದ ವೃದ್ದರವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು.ವೈದ್ಯರು ಬರೆದ ಔಷಧಿಗಳನ್ನು ಔಷಧಿತಜ್ಞರಾದ ಬಿ.ಎಂ.ಕೋಟಿ ವಿತರಿಸಿದರು, ಆನಂದ ಹೊಸೂರ ಸಹಕರಿಸಿದರು.
ಕ್ಲಬ್ಬಿನ ಕಾರ್ಯದರ್ಶಿ ವಸಂತಕೊಣಸಾಲಿ ಸ್ವಾಗತಿಸಿದರು, ಜಗದೀಶಕಾನಡೆ ವಂದಿಸಿದರು.ಎಸ್.ಡಿ. ಮುಡೆಣ್ಣವರಕಾರ್ಯಕ್ರಮ ನಿರೂಪಿಸಿದರು.ರೋಟರಿ ಸದಸ್ಯರಾದ ಎಂ. ಜೆ. ಉಮ್ಮಚಗಿ, ಪ್ರಕಾಶ ಹುದ್ಲಮನಿ, ಜಗದೀಶಕಾನಡೆ ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...