ಮುಂಡಗೋಡ : ರೈತರ ಫಸಲ್ ಬಿಮಾ ಬೆಳೆ ಪರಿಹಾರ ಅಸಮರ್ಪಕ-ರೈತರಿಂದ ಆ ೧೪ ರಂದು ಪ್ರತಿಭಟನೆ

Source: shabbir | By Arshad Koppa | Published on 13th August 2017, 11:43 AM | Coastal News | Guest Editorial |

ಮುಂಡಗೋಡ : ರೈತರ ಫಸಲ್ ಬಿಮಾ ಬೆಳೆ ಪರಿಹಾರ ಸಮರ್ಪಕವಾಗಿ ಜಮಾ ಮಾಡದೇ ಇರುವುದರಿಂದ  ತಾಲೂಕಿನ  ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಗ್ರಾಮಗಳ ರೈತರು 14-8-2017 ರಂದು 10.30 ಗಂಟೆಗೆಯಿಂದ ಚಿಗಳ್ಳಿ ಗ್ರಾ,ಮದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ 
ಸೋಮವಾರ  ಚಿಗಳ್ಳಿ ಗ್ರಾಮದ ಶಿವಾಜಿ ವೃತ್‍ದಿಂದ ಪ್ರತಿಭಟನೆ ಪ್ರಾರಂಭಿಸಿ ಮುಂಡಗೋಡ ಶಿರಸಿ ರಾಜ್ಯ ಹೆದ್ದಾರಿಯಲ್ಲಿರುವ  ಕಾವಲಕೊಪ್ಪ ಗ್ರಾಮದ ಬಸ್ ನಿಲ್ದಾಣ ಎದುರಿಗೆ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ದ ಧರಣಿ  ಸತ್ಯಾಗ್ರಹ ಹಮ್ಮಿಕೊಂಡು ಧರಣಿ  ಸತ್ಯಾಗ್ರಹ ಚಳುವಳಿಯನ್ನು ನಡೆಸಿ ಸಾರ್ವಜನಿಕ ಕುಂದು ಕೊರತೆ ನಿವಾರಿಸುವ ಬಗ್ಗೆ ವಿನಂತಿಸಿಕೊಂಡು ಸಮರ್ಪಕವಾದ ವಿಮಾ ಪರಿಹಾರ ಹಾಗೂ ಬರ ಪರಿಹಾರವನ್ನು ನಿವಾರಿಸುವ ಬಗ್ಗೆ ಒತ್ತಾಯಿಸಿ ಶಾಂತಿಯುತವಾದ ಹಾಗೂ ಸಾಂಖ್ಯೆತಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತವೆ. ಧರಣ  ಸಮಯದಲ್ಲಿ ತಹಶೀಲ್ದಾರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಚಿಗಳ್ಳಿ ಗ್ರಾಮದ ರೈತರು ಲಿಖಿತವಾಗಿ ನೀಡಿದ್ದಾರೆ

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...