ಮುಂಡಗೋಡ: ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ 

Source: nazir | By Arshad Koppa | Published on 24th April 2017, 8:36 AM | Coastal News |

ಮುಂಡಗೋಡ : ಗೋವಿಂದಶರೀಫ ಸಾಹೇಬರ 12 ವರ್ಷದ ಜಾತ್ರಾಮಹೊತ್ಸವ ಇಂದೂರ ಗ್ರಾಮದ ಕಲಘಟಗಿ-ಮುಂಡಗೋಡ ರಸ್ತೆಯಲ್ಲಿರುವ ಗೋವಿಂದಶರೀಫರ ದೇವಸ್ಥಾನದಲ್ಲಿ ನೆರವೇರಿತು. 
ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ  ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು
 ಸಾಮೂಹಿ ವಿವಾಹದ ಪ್ರಯುಕ್ತ 3 ಜೋಡಿ ವಧು-ವರರು  ಹೊಸಜೀವನಕ್ಕೆ ಕಾಲಿಟ್ಟರು
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಂದೂರ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ದೇಸಳ್ಳಿ, ಇಂದೂರ ಗ್ರಾ.ಪಂ ಉಪಾಧ್ಯಕ್ಷ ಬಿಷ್ಟನಗೌಡ ಪಾಟೀಲ, ಸಾಹಿತಿ ಚಿದಾನಂದ ಪಾಟೀಲ, ಎಸ್.ಎಸ್.ಸುಂಕದ, ವರ್ತಕರ ಸಂಘದ ಅಧ್ಯಕ್ಷ ಪಿ.ಜಿ.ಪುರಷನ್, ಮಹಾವೀರ ಕಲಘಟಗಿ, ಶಿವಾಜಿ ಸುಣಗಾರ, ಎಸ್‍ಡಿಎಮ್‍ಸಿ ಅಧ್ಯಕ್ಷ(ಮಳಗಿ ಶಾಲೆ) ಗುಡ್ಡಪ್ಪ ಪೂಜಾರ, ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ನಜೀರುದ್ದಿನ ತಾಡಪತ್ರಿ, ವೇದ ಮೂರ್ತಿ ನಿಂಗಯ್ಯ ಸುರಗೀಮಠ, ಕಲ್ಮೇಶ ಬಡಿಗೇರ, ಅರ್ಜುನ್ ಸುಭೇದಾರ, ಮಂಜುನಾಥ ಡಿ.ಎಮ್, ನಿಲಪ್ಪ ಹರಿಜನ ರನ್ನು ಸನ್ಮಾನಿಸಲಾಯಿತು
ಸಭಾಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ  ದ್ರಾಕ್ಷಾಯಿಣ  ಸುರಗೀಮಠ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಮ್.ಸಿ.ಪಾಟೀಲ, ಅಶೋಕ ಎಮ್.ಎಚ್.ಅಣ್ವೇಕರ, ಶರೀಫ ದುಂಡಸಿ, ಮಹ್ಮದಅಲಿ ಅರಳೇಶ್ವರ,ಕೆಂಜೋಡಿ ಗಲಿಬಿ ತಡಸದ,ಪಿ.ಜಿ.ತಂಗಚ್ಚನ್,
ಪ್ರಾಸ್ಥಾವಿಕವಾಗಿ ಗೋವಿಂದಶರೀಫ ಸಾಹೇಬರ  ದೇವಸ್ಥಾನದ ಸ್ಥಾಪಕ ಸಹದೇವ ನಡಿಗೇರ ಮಾತನಾಡಿದರು ಸ್ವಾಗತವನ್ನು ಶರೀಫ ಅಗಡಿ,ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಹರಿಜನ ನೆರವೇರಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...