ಮುಂಡಗೋಡ:ಗೋವಿನಜೋಳ ಬೆಳೆ ಕಟಾವು ಭರದಿಂದ ಸಾಗಿದೆ : ಕೃಷಿ ಅಧಿಕಾರಿ 

Source: nazir | By Arshad Koppa | Published on 24th October 2017, 8:52 AM | Coastal News |

ಮುಂಡಗೋಡ : ತಾಲೂಕಿನಲ್ಲಿ ಜನವರಿ 1 ರಿಂದ ಅಕ್ಟೋಬರ್ 19 2017 ರವರಗೆ ತಾಲೂಕಿನಲ್ಲಿ ವಾಡಿಕೆ ಮಳೆ 1455 ಮಿ.ಮಿ ಮಳೆಯಾಗ ಬೇಕಿತ್ತು ಆದರೆ ಮಳೆ 998 ಮಿ.ಮಿಯಾಗಿ ಶೇ.31 ರಷ್ಟು ಮಳೆ ಕಡಿಮೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಕುಲಕರ್ಣಿ ತಿಳಿಸಿದರು.


ಮುಂಡಗೋಡ ಹೊಬಳಿಯಲ್ಲಿಶೇ.39 ಹಾಗೂ  ಪಾಳಾ ಹೊಬಳಿಯಲ್ಲಿ ಶೇ.19 ರಷ್ಟು ರಷ್ಟು ಮಳೆ ಕೊರತೆಯಾಗಿದೆ.
ಪ್ರಸಕ್ತ ಗೋವಿನಜೋಳ ಬೆಳೆ ಕಟಾವು ಭರದಿಂದ ಸಾಗಿದೆ. ಬೆಳೆ ಇಳುವರಿ ಚೆನ್ನಾಗಿದೆ. ಭತ್ತದ ಬೆಳೆಯು ಮಾಗುವ ಹಂತದಲ್ಲಿದ್ದು ಇನ್ನೂ ಕೆಲದಿನದೊಳಗೆ ಕಟಾವಿಗೆ ಬರಲಿದೆ.
ಮಳೆಯಾಶ್ರಿತ ಭತ್ತದ ಬೆಳೆಗೆ ಹಂತ ಹಂತವಾಗಿ ಮಳೆಯು ಸಮರ್ಪಕವಾಗದ ಕಾರಣ ಕಳೆ(ಹುಲ್ಲು)ಹೆಚ್ಚಿನ ಪ್ರಮಾಣದಲ್ಲಿ ಬಂದು ಇಳುವರಿಯಲ್ಲಿ ಸಾಮನ್ಯಕ್ಕಿಂತ ಸ್ವಲ್ಪ ಕಡಿಮೆ ಬರಬಹುದಾಗಿದೆ.
ಭತ್ತದ ಬೆಳೆಯಲ್ಲಿ  ಸೈನಿಕ ಹುಳದ ಬಾಧೆ ಕಎಲವು ಕಡೆ ಈ ಹಿಂದೆ ಗಮನಿಸಲಾಗಿತ್ತು ಇಲಾಖೆ ಮೂಲಕ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಾತೆಕ್ಷಿತ ಮೂಲಕ ತಿಳಿಸಲಾಗಿದೆ
ಬೆಳೆ ಕಟಾವು ಪ್ರಯೋಗಗಳನ್ನು ವೈಜ್ಞಾನಿಕ ರೀತಿಯಲ್ಲಿ ಮೊಬೈಲ್ ಆಪ್ ಮೂಲಕ ಮೂಲಕಾರ್ಯಕರ್ತರು ತಾಲೂಕಾದ್ಯಂತ ಕೈಗೊಳ್ಳುತ್ತಿದ್ದು ಈ ಸಂದರ್ಭ ದಲ್ಲಿ ರೈತರು ಚುನಾಯಿತ ಪ್ರತಿನಿಧಿಗಳನ್ನು ಸಹ ಜೊತೆಗೂಡಿಸಿಕೊಳ್ಳಲು ತಿಳಿಸಲಾಗಿದೆ. 
ರಸಗೊಬ್ಬರ ಹಾಗೂ ಕೀಟ ನಾಶಕದ ದಾಸ್ತಾನು ಸಮರ್ಪಕವಾಗಿದೆ

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...