ಮುಂಡಗೋಡ :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯ ಸೇವೆಯನ್ನು ಉಚಿತವಾಗಿ ನೀಡಬೇಕು ಯಾವುದಕ್ಕೂ ಹಣ ಪಡೆಯಬಾರದು : ಎಲ್.ಟಿ.ಪಾಟೀಲ

Source: nazir | By Arshad Koppa | Published on 24th June 2017, 8:40 AM | Coastal News | Special Report |

ಮುಂಡಗೋಡ : ತಾಲೂಕಾ ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞ ಡಾ|| ಪ್ರಭು ಕುರಿತು ಸಾರ್ವಜನಿಕರ ಅಪಾದನೆ ಬಂದ ಹಿನ್ನಲೆಯಲ್ಲಿ ಜಿಲ್ಲಾಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮೀತಿಯ ಅಧ್ಯಕ್ಷ ಎಲ್.ಟಿ.ಪಾಟೀಲ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಸಿದರು. ಸರಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವಾಗಿ ನೀಡಬೇಕು ಯಾವುದಕ್ಕೂ ಹಣ ಪಡೆಯ ಬಾರದು ಹಾಗು ರೋಗಿಗಳ ಕೂಡ ಒಳ್ಳೆ ನಡೆಯಿಂದ ನಡೆದುಕೊಳ್ಳಬೇಕು. ಸರಕಾರಿ ಆಸ್ಪತ್ರೆಯಲ್ಲಿ ಸೀಗುವಂತ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಬೇಕು ಎಂದ ಪಾಟೀಲರು ರೋಗಿಗಳಿಂದ ಹಣ ಹಿಂಡುವಂತ ಕೆಲಸ ಮಾಡಬಾರದು ಎಂದಾಗ ತಮಗೆ ತಾವು ಆದಷ್ಟು ರೋಗಿಗಳನ್ನು ಒಳ್ಳೆರೀತಿಯಿಂದ ನೋಡಿಕೊಂಡಿದ್ದೇನೆ ಇದರಲ್ಲಿ ಕೆಲ ಹಿತಾಸಕ್ತಿಗಳು ನನ್ನ ವಿರುದ್ದ ಕಟ್ಟಿ ಬೆಳಸುತ್ತಿದ್ದಾರೆ. ನನ್ನ ವಿರುದ್ದ ಏಕೆ ದ್ವೇಷ ಸಾಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲಾ. ನಾನು ಸ್ತ್ರೀರೋಗ ತಜ್ಞ ಇರುವುದರಿಂದ ಕೆಲ ಹೆಣ್ಣು ಮಕ್ಕಳ ವಿವಿಧ ರೀತಿಯ ಕ್ಲೀಸ್ಟಕರ ಸಮಸ್ಯೆಗಳನ್ನು ನಾನೇ ನಿಭಾಯಿಸಿ ಪರಿಹರಿದ್ದೇನೆ. ನನ್ನಿಂದಾಗದ ಸಮಸ್ಯಗಳನ್ನು ಉನ್ನತ ಮಟ್ಟದ ಸರಕಾರಿ ಆಸ್ಪತ್ರೆಗೆ ವರ್ಗಾಯಿಸುತ್ತೇನೆ. ಕೆಲ ರೋಗಿಗಳು ನಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಅದು ನನ್ನದೆ ತಪ್ಪಾ. ನನ್ನಿಂದಾಗದ ಸಮಸ್ಯೆಗಳನ್ನು ವರ್ಗಾಯಿಸುವುದು ತಪ್ಪಾ ಎಂದರು. ಒಂದು ವರ್ಷ ಕಾಲಾವಕಾಶ ನೀಡಿ ನಾನು ಅಷ್ಟರೊಳಗೆ ಬದಲಾವಣೆಯಾಗದಿದ್ದರೆ ನನಗೆ ಇಲ್ಲಿಂದ ವರ್ಗಾವಣೆ ಮಾಡಬಹುದು ಎಂದರು.


ಚಿಕ್ಕ ಮಕ್ಕಳ ತಜ್ಞ ಪ್ರಸನ್ನ ಅವರು ಔಷಧಿಗಾಗಿ ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿ ಬರೆಯುತ್ತಾರೆ ಎಂದು ಅಪಾದನೆ ಮಾಡಿದ ಕೆಲವರು ಈ ರೀತಿ ಯಾಗದಂತೆ ನೋಡಿಕೊಳ್ಳಬೇಕು. ಸರಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವಾಗಿ ನೀಡಬೇಕು. ಯಾವುದೇ ಚೀಟಿಯನ್ನು ಹೊರಗೆ ಬರೆಯಬಾರದು, ನಿಮಗೆ ಔಷಧಿ ಕೊರತೆ ಇದ್ದರೆ ಹೇಳಿ ನಾನು ಔಷಧಿ ಪೂರೈಸುತ್ತೇನೆ ಎಂದು ಜಿಲ್ಲಾ ವೈದ್ಯಾಧಿಕಾರಿ ಅಶೋಕ ಕುಮಾರ ಹೇಳಿದರು.
ಇದೇ ಸಮಯದಲ್ಲಿ ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ಎಲ್.ಟಿ.ಪಾಟೀಲ ಒಂದೇ ಬಾರಿಗೆ 100 ರಕ್ತಮಾದರಿಗಳನ್ನು ಪರಿಕ್ಷೀಸುವ ಯಂತ್ರದ ಉದ್ಘಾಟನೆ ಮಾಡಿ ಶೀಘ್ರದಲ್ಲಿ  ಅಲ್ಟ್ರಾಸೌಂಡ ಯಂತ್ರವನ್ನು ಈ ಸರಕಾರಿ ಆಸ್ಪತ್ರೆಗೆ ತರಲಾಗುವುದು ಎಂದರು. ನಮ್ಮ ಕಾಂಗ್ರೆಸ್ ಸರಕಾರ ಬಡವರ ಬಗ್ಗೆ ಕಾಳಜಿ ಹೊಂದಿದ್ದು ಇದಕ್ಕಾಗಿಯೇ ಸರಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಗೆ ಉನ್ನತಿಕರಿಸಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ವೈದ್ಯರು ಹಣದ ಆಸೆಗೆ ಬಲಿಯಾಗಿ ತಮ್ಮ ವೃತ್ತಿ ಧರ್ಮಕ್ಕೆ ದ್ರೋಹ ಬಗೆಯದೇ ರೋಗಿಗಳ ರೋಗವನ್ನು ಗುಣಪಡಿಸುವ ನಿಟ್ಟಿನಲ್ಲಿ ಸಾಗಬೇಕು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ ತಾಲೂಕಾ ವೈದ್ಯಾಧಿಕಾರಿ ಕಿರಣ ಕುಲಕರ್ಣಿ ಮುಂತಾದವರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...