ಮುಂಡಗೋಡ:ವಿಶಿಷ್ಟ ಶೈಲಿಯಲ್ಲಿ ದೀಪಾವಳಿ ಆಚರಣೆ ಮಾಡುತ್ತಿರುವ ಗೌಳಿ ಜನಾಂಗ

Source: nazir | By Arshad Koppa | Published on 22nd October 2017, 8:17 AM | Coastal News | Special Report |

ಮುಂಡಗೋಡ  : ದೀಪಾವಳಿ ಈ ಹಬ್ಬಗಳನ್ನು ಉತ್ತರ ಭಾರತಿಯ ಹಿಂದೂಗಳು ಹೆಚ್ಚಾಗಿ ಸಂಭ್ರಮದಿಂದ ಆಚರಿಸುವವರು. ಕರ್ನಾಟಕದ ವಿವಿಧ ಕಡೆ ವಿವಿಧ  ರೀತಿಯಲ್ಲಿ ಆಚರಿಸಿದರೆ. ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದು ರಾಜ್ಯದ 8 ಜಿಲ್ಲೆಗಳಲ್ಲಿ ವಾಸವಾಗಿರುವ ದನಗರ ಗೌಳಿ ಜನಾಂಗದವರು ದಸರಾ ಮತ್ತು ದೀಪಾವಳಿ ಹಬ್ಬವನ್ನು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ
ಇಂದು ದೀಪಾವಳಿ ಪಾಡ್ಯದ ಮರುದಿನ ತಾಲೂಕಿನ ಯರೇಬೈಲ್ ಗ್ರಾಮದಲ್ಲಿ ಮೈನಳ್ಳಿ,ಕಳಕೀಕಾರೆ, ಕುದುರೆನಾಳ, ಬೆಂಡಿಗಟ್ಟಿ, ಬಸನಾಳ, ಉಗ್ಗೀನಕೇರಿ,ಮತ್ತು ಯಲ್ಲಾಪುರ ತಾಲೂಕಿನ ಮದ್ನೂರು, ಹುಣಸೆಗೇರಿ, ಹಳಿಯಾಳ ತಾಲೂಕಿನ ಭೀಮನಳ್ಳಿ, ತಟ್ಟಿಹಳ್ಳಿ ಧಾರವಾಡದ ತಾಲೂಕಿನ ಹುಲಗಿಕೊಪ್ಪ, ದುಪರ್ತಿವಾಡ ಗ್ರಾಮದ ನೂರಾರು ಗೌಳಿಗರು ಒಂದೆಡೆ ಕೂಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ದೀಪಾವಳಿ ಆರಂಭದಿಂದಲೇ ಪುರುಷರು ತಲೆಗೆ ಪೇಟಾವನ್ನು ಸುತ್ತಿಕೊಂಡು  ಒಂದು ಹೊತ್ತು ಮಾತ್ರ ಹಾಲನ್ನು ಸೇವಿಸಿ 9 ದಿನಗಳವರೆಗೆ ಉಪವಾಸ ವ್ರತ ಮಾಡುತ್ತಾ  ತಮ್ಮ ಬಳಿ ಯಾರೆ ಮಾತನಾಡಿದರು ಅವರನ್ನು ದೇವಿಯ ರೂಪದಲ್ಲೆ ಕಂಡು ಮಾತನಾಡಿಸುತ್ತಾರೆ. ವ್ರತ ಮಾಡದೆ ಇರುವವರು ಮನೆಗಳಲ್ಲಿ ಹೈನುಗಳಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಸೇವಿಸುತ್ತಾರೆ. ನಂತರದಲ್ಲಿ ದೀಪಾವಳಿ ಪಾಢ್ಯದ ಮರು ದಿನದಿಂದ ಧಾರ್ಮಿಕ ವಿಧಿ-ವಿಧಾನಗಳ ಪೂಜೆಯೊಂದಿಗೆ ಆರಂಭಿಸಿ ಸಡಗರದಿಂದ ಆಚರಿಸಿ ಸಂಭ್ರಮಿಸುತ್ತಾರೆ. 12 ನೇ ದಿನ ತಮ್ಮ ಜನಾಂಗದ ವಿಶಿಷ್ಟವಾದ ಉಡುಗೆ-ತೊಡಿಗೆ ಧರಿಸಿ ಮುಂಜಾನೆ 4 ಗಂಟೆಯಿಂದ ಪಾಂಡುರಂಗ ದೇವಸ್ಥಾನದ ಮುಂದೆ ಕುಣಿದು,ಕುಪ್ಪಳಿಸಿ ಸಂಭ್ರಮಿಸುತ್ತಾರೆ. ಈ ವೇಳೆಯಲ್ಲಿ ಕೆಲವರ ಮೇಲೆ ದೇವರು ಆವರಿಸಿ ತಲವಾರುಗಳಿಂದ ಹೊಟ್ಟೆಗೆ ಚುಚ್ಚಿಕೊಳ್ಳುತ್ತಾ ದೊಡ್ಡಿಗೆ ಸಂಬಂಧಿಸಿದ ಹೇಳಿಕೆಗಳನ್ನು ಮಾರಾಠಿ ಭಾಷೆಯಲ್ಲಿ ಹೇಳುತ್ತಿರುತ್ತಾರೆ.  
ಗೌಳಿ ಜನಾಂಗದವರು ವಿಶಿಷ್ಟ ರೀತಿಯ ಸಾಂಪ್ರದಾಯಿಕ ಉಡಿಗೆ ತೊಟ್ಟ ಮಹಿಳೆಯರು ಪುಗಡಿ ನೃತ್ಯ. ಪುರುಷರು ಗಜ್ಜಾ ,ಸಿಲಾಂಗನಾ. ಹೈನದಿಂದ ಅಭಿಷೇಕ ಮಾಡಿಕೊಳ್ಳುತ್ತ  ನೃತ್ಯಗಳನ್ನು ವೃತ್ತಾಕಾರದ ಗುಂಪಿನಲ್ಲಿ ಹರ ಹರ ಚಂಗಬೋಲಾ... ಚಂಗಬೋಲಾ......... ಎಂಬ ಹಾಡನ್ನು ಹಾಡುತ್ತ ಕುಣಿಯುವರು.


ಹೇಳಿಕೆ :  ಈ ರೀತಿಯ ಆಚರಣೆ ನಮ್ಮ ಪೂರ್ವಜರು ಆZರಿಸಿಕೊಂಡು ಬಂದಿರುತ್ತಾರೆ. ಅದನ್ನೇ  ನಾವು ಮುಂದುವರಿಸಿಕೊಂಡು ಹೋಗುತಿದ್ದೇವೆ. ಇದು ನಮಗೆ ಶ್ರೇಷ್ಠವಾದ ಹಬ್ಬವಾಗಿದೆ ಎಂದು ಯರೇಬೈಲ್ ದಡ್ಡಿಯ ಹಿರಿಯರಾದ ಮಾಲು ಗುಂಡು ವರಕ, ಸಾಮು ಜೋರೆ, ಸಿದ್ದು ಲಾಂಬೋರಾ, ಖೇಮು ಎಡಿಗೆ, ದೊಂಡು ಠಕ್ಕು ವರಕ ಅಭಿಪ್ರಾಯವಾಗಿದೆ.
ಜನಾಂಗದ ಹಿನ್ನಲೆ : ಇವರು ಮೂಲತಃ ಮಹಾರಾಷ್ಟ್ರದ  ಕೋಲ್ಹಾಪುರ,ರತ್ನಾಗಿರಿ,ಸೊಲ್ಲಾಪುರ ಜಿಲ್ಲೆಗಳಿಂದ ಕರ್ನಾಟಕ ರಾಜ್ಯದ ಕಡೆ ವಲಸೆ ಬಂದು ವಿವಿಧ  ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ತಮ್ಮದೇ ಆದ ದಡ್ಡಿಗಳನ್ನು ಮಾಡಿಕೊಂಡು ಹೆಚ್ಚಾಗಿ ಅರಣ್ಯ ಪ್ರದೇಶಗಳ್ಲಿಯೇ ವಾಸಿಸುತ್ತಿದ್ದಾರೆ. ಈ ಗೌಳಿಗರ ಮೂಲ ಕಸುಬು ಪಶು ಸಂಗೋಪನೆ, ಇವರು ತಮ್ಮ ಪಶುಗಳಿಗೆ  ಅನುಕೂಲಕ್ಕೆ ತಕ್ಕಂತೆ ದೊಡ್ಡಿಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. ಪ್ರಾರಂಭದಲ್ಲಿ ಹೈನುಗಾರಿಕೆಯೇ ಇವರ ಪ್ರಮುಖ ಉದ್ಯೋಗವಾಗಿತ್ತು .ಬರುಬರುತ್ತ ಅರಣ್ಯಗಳಲ್ಲಿ ಭೂಮಿಯನ್ನು ಅಲ್ಪ ಸ್ವಲ್ಪ ಅತಿಕ್ರಮಣ ಮಾಢಿಕೊಂಡು ವ್ಯವಸಾಯ ಮಾಡಿಕೊಂಡು ಜೀವನ ನಡೆಸುವುದು ಆರಂಭಿಸಿದ್ದಾರೆ. ಇತ್ತೀಚೆಗೆ ಹೈನುಗಾರಿಕೆ ಕಡಿಮೆ ಮಾಡಿ ತಮ್ಮ ಮಕ್ಕಳನ್ನು ವಿದ್ಯಾಬ್ಯಾಸದ ಕಡೆ ವಾಲಿಸಿದ್ದಾರೆ. ಶ್ರೀಪಾಂಡುರಂಗ ಮುಗ್ಧ ದನಗರ ಗೌಳಿಗರ  ಆರಾಧ್ಯ ದೈವ, ತಾಲೂಕಿನಲ್ಲೇ ಬ್ಯಾನಳ್ಳಿ, ಅತ್ತಿವೇರಿ, ಜೇನಮೂರಿ, ಉಗ್ಗಿನಕೇರಿ, ಬಡ್ಡಿಗೇರಿ, ಚಳಗೇರಿ, ಮರಗಡಿ,ನ್ಯಾಸರ್ಗಿ ಸೇರಿದಂತೆ  ಸುಮಾರು 36 ಕಡೆ ದೊಡ್ಡಿಗಳಲ್ಲಿ ವಾಸ ಮಾಡುತಿದ್ದಾರೆ. ಆರಂಭದಲ್ಲಿ ಇತರೆ ಜನಾಂಗದವರು ಬೆರೆಯಲು ಹಿಂದೆ ಜರಿಯುತಿದ್ದರು ದಿನಕಳೆದಂತೆ ಕನ್ನಡಿಗರ ಜೊತೆಯಲ್ಲಿ ಬೆರೆಯುತ್ತ ವ್ಯವಹಾರಿಕ ಜೀವನ ಸಾಗಿಸಲು ಪ್ರಾರಂಭಿಸಿದ್ದಾರೆ. ಈ ಜನಾಂಗವರಿಗೆ ಇಂದಿಗೂ ತಮ್ಮ ಮಾತೃ ಭಾಷೆ ಮರಾಠಿ ಬಿಟ್ಟರೆ ಭಾಷೆ ಬಿಟ್ಟರೆ ಬೇರೆ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ, ಬಹುಷಃ ಈ ಕಾರಣದಿಂದಲೇ ಇತರರ ಜೊತೆ ಬೇರೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ, ಇವರು ಆರ್ಥಿಕವಾಗಿ ಇನ್ನು ಸುಧಾರಿಸಬೇಕಾಗಿದೆ. 

Read These Next

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...