ಮುಂಡಗೋಡ:ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ.: ಡಾ: ಕುಲಕರ್ಣಿ

Source: nazir | By Arshad Koppa | Published on 13th August 2017, 11:35 AM | Coastal News | Guest Editorial |

ಮುಂಡಗೋಡ : ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ಒಬ್ಬ ಮನಷ್ಯನ ರಕ್ತವು ಇನ್ನೊಂದು ಮನುಷ್ಯನ ಜೀವ ಉಳಿಸುತ್ತದೆ. ಸ್ವಯಂ ಪ್ರೇರಿತರಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಕ್ತಕೊಡುವುದಕ್ಕೆ ರಕ್ತದಾನ ಎನ್ನುತ್ತಾರೆ ಎಂದು ತಾಲೂಕಾ ವೈದ್ಯಾಧಿಕಾರಿ ಕಿರಣ ಕುಲಕರ್ಣಿ ಹೇಳಿದರು. 


ಅವರು ರಕ್ತಶೇಖರಣಾ ಘಟಕ ಹಾಗೂ ತಾಲೂಕ ಆಸ್ಪತ್ರೆ ಮುಂಡಗೋಡ, ಆಯ್ ಎಮ್.ಆಯ್ ಬ್ಲಡ್ ಬ್ಯಾಂಕ್ ಶಿರಸಿ, ಆಯ್.ಎಮ್.ಆಯ್  ಮುಂಡಗೋಡ ರೊಟರಿ ಕ್ಲಬ್, ರಾಜ್ಯ ಸರಕಾರಿ ನೌಕರರ ಸಂಘ, ಎನ್‍ಎಸ್‍ಎಸ್  ಪಾಲಿಟೆಕ್ನಿಕ್ ಮುಂಡಗೋಡ, ಎನ್‍ಎಸ್‍ಎಸ್  ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ನ್ಯಾಸರ್ಗಿ, ಸರಕಾರಿ ಪ್ರಥಮ ದರ್ಜೆಕಾಲೇಜ ಮುಂಡಗೋಡ ಹಾಗೂ ಪತ್ರಕರ್ತರ ಸಂಘ ಮುಂಡಗೋಡ
ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ  ಪಟ್ಟಣದ  ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬೀರ ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದೃಡ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಮುಂದೆ ಬರಬೇಕು.ಅಪಘಾತಗಳಲ್ಲಿ ರೋಗಿಗೆ ರಕ್ತವು ಅವಶ್ಯವಾಗಿತ್ತದೆ ಹಾಗೆ ತುರ್ತು ಶಸ್ತ್ರರಚಿಕಿತ್ಸಾಗಳಲ್ಲಿ ರಕ್ತವು ಅವಶ್ಯವಾಗಿ ಬೇಕಾಗಿರುತ್ತದೆ ಎಂದರು. ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ರಕ್ತಶೇಖರಣಾ ಘಟಕವು ಪ್ರಾರಂಭವಾಗಿದೆ ಇದರಿಂದ ಸ್ಥಳಿಯ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದರು ರಕ್ತದಾನ ಮಾಡಲು ಇಚ್ಚಿಸುವವರು 18-45 ವಯಸ್ಸಿನ ಒಳಗಿನವರಾಗಿರಬೇಕು. ಬಿ.ಪಿ., ಹೃದ್ರೋಗಿಗಳು ರಕ್ತದಾನ ಮಾಡಲು ಅವಕಾಶವಿಲ್ಲ. ಶುಗರ ನಾರ್ಮಲ್ ಇದ್ದವರು ರಕ್ತದಾನ ಮಾಡಬಹುದು ಎಂದರು.

ರಕ್ತದಾನ ಶಿಬೀರದಲ್ಲಿ ಭಾಗವಹಿಸಿದ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್ 30 ಕ್ಕಿಂತ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸರಕಾರಿ ನೌಕರ ಸಂಘದ ಸದಸ್ಯರು, ಆರೋಗ್ಯ ಇಲಾಖೆಯ  ವೈದ್ಯಾಧಿಕಾರಿಗಳು, ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು ಒಟ್ಟು 70 ಜನರು ರಕ್ತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ

Read These Next

ಭಟ್ಕಳದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಫಲಾನುಭವಿಗಳಾಗಲು; ತಡಮಾಡದೇ ಹೆಸರು ನೋಂದಾವಣಿ ಮಾಡಿಕೊಳುವಂತೆ ಸೂಚನೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪಿಎಮ್ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಲು ತಾಲೂಕಿನ ರೈತರು ತಡಮಾಡದೇ ಹೆಸರನ್ನು ...

ಭಟ್ಕಳದಲ್ಲಿ ವೈದ್ಯರ ಮುಷ್ಕರದ ಹಿನ್ನೆಲೆ ಖಾಸಗಿ ವೈದ್ಯರ ಗೈರು; ರೋಗಿಗಳಿಂದ ತುಂಬಿದ ಸರಕಾರಿ ಆಸ್ಪತ್ರೆ

ಕೋಲ್ಕತ್ತಾದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ರಾಷ್ಟ್ರವ್ಯಾಪಿ ನೀಡಿರುವ ಬಂದ್ ಕರೆಗೆ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...