ಮುಂಡಗೋಡ : ಬಿಜೆಪಿ ಪಕ್ಷದ ಕೇಂದ್ರ ಸರ್ಕಾಕ್ಕೆ ರೈತರ ಮೇಲೆ ಕಳಕಳಿ ಇದ್ದರೆ ಸಾಲಾ ಮನ್ನಾ ಮಾಡಲಿ-ಶಿವರಾಮ ಹೆಬ್ಬಾರ

Source: nazir | By Arshad Koppa | Published on 17th July 2017, 8:38 AM | Coastal News | Special Report |

ಮುಂಡಗೋಡ : ಬಿಜೆಪಿ ಪಕ್ಷದ ಕೇಂದ್ರ ಸರ್ಕಾಕ್ಕೆ ರೈತರ ಮೇಲೆ ಕಳಕಳಿ ಇದ್ದರೆ ಸಾಲಾ ಮನ್ನಾ ಮಾಡಲಿ ಎಂದು ಬಿ.ಜೆ ಪಿ. ರಾಜ್ಯ ನಾಯಕರಿಗೆ  ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. 
ಅವರು ಶುಕ್ರವಾರದಂದು ತಾಲೂಕಿನ ನಂದಿಗಟ್ಟಾ ಹುನುಗುಂದ ಗ್ರಾಮ ಪಂಚಾಯತ ವ್ಯಾಪ್ತಿಯಹೊಸ ಭೂತ ಕಮೀಟಿಗಳನ್ನ ರಚಿಸುವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದರು.
ರಾಜ್ಯ ಬಿಜೆಪಿ ಪಕ್ಷದವರಿಗೆ ವಿಧಾನ ಸಭೆಯ ಒಳಗೆ ಮತ್ತು ಹೊರಗೆ  ಪ್ರತಿಭಟನೆ ಮಾಡುತ್ತಿದ್ದರು. ಆದರೆ ಈಗಾಗಲೇ ನಮ್ಮ ಸರ್ಕಾರ ರಾಜ್ಯದ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆಸಾಲದಲ್ಲಿ  50 ಸಾವಿರ ರೂ ನಷ್ಟು ಸಾಲ ಮನ್ನಾ ಮಾಡಿದ್ದೆವೆ ರಾಜ್ಯದ ಬಿ.ಜೆ.ಪಿಯವರು ರೈತರ ಬಗ್ಗೆ ಮೋಸಳೆ ಕಣ ್ಣರು ಹಾಕುವುದು ಬಿಟ್ಟು ರೈತರ ಶೇ 77 ರಷ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಮನ್ನಾ  ಮಾಡುವಂತೆ  ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ಮುಂಬರುವ ವಿಧಾನ ಸಭಾ ಚುನಾವಣೆಯ 10 ತಿಂಗಳ ಪೂರ್ವದಲ್ಲಿ ಪಕ್ಷದ ಕಾರ್ಯಕರ್ತರ ಕುಂದುಕೊರತೆ ಬಗ್ಗೆ ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ನಿಮ್ಮ ಮುಂದೆ ಸಾಮನ್ಯ ಕಾರ್ಯಕರ್ತನಾಗಿ ಬಂದಿದ್ದೆನೆ. ಹಾಗಾಗಿ  ಕಳೆದ ಒಂದು ವಾರದಿಂದ ಕ್ಷೇತ್ರದ 42 ಗ್ರಾಮ ಪಂಚಾಯತಿಗಳ 226 ಭೂತಗಳಲ್ಲಿ ಹೋಸ ಯವುಕರ ಭೂತ ಕಮೀಟಿ ರಚಿಸಿ ಮುಂದಿನ ದಿನದಲ್ಲಿ ತಾಲೂಕಿನಲ್ಲಿ ಬೃಹತ ಕಾಂಗ್ರೆಸ್ ಕಾರ್ಯಯರ್ತರ ಸಭೆಯನ್ನು ಮಾಡಲಾಗುವುದು, ಇದರ ಜೋತೆಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡುವ ಬಗ್ಗೆ  ಹೊಸ ಅಭಿಯಾನವನ್ನು ನಾವುಗಳು ಈ ಕಾರ್ಯಕ್ರಮಗಳಲ್ಲಿ ಕೈಗೊಂಡಿದ್ದೆವೆ. ಎಂದ ಅವರು ಕಾರ್ಯಕರ್ತರನ್ನು ಹುರಿದುಂಭಿಸಲು ಈ ಹಿಂದೆ ಹಳೆ ಬೂತ ಕಮೀಟಿ ಇತ್ತು ಅವರ ಕಾಲದಲ್ಲಿ ಎಷ್ಟುಬಾರಿ ಅಧಿಕಾರ ಬಂದಿದೆ ಮತ್ತು ಈಗ ರಚಿಸುತ್ತಿರುವ ಯುವ ಕಮೀಟಿಯವರು ಎಷ್ಟು ಭಾರಿ ಅಧಿಕಾರ ಕೊಡುಸುತ್ತಿರಿ ನೋಡೊಣಾ ಎಂದು  ನೂತನವಾಗಿ ರಚನೆಗೊಂಡ ಭೂತ ಕಮೀಟಿಯ ಯುವಕರಿಗೆ ಹುರಿದುಂಬಿಸಿದರು. 
ಈ ಸಂಧರ್ಭದಲ್ಲಿ ಜಿ.ಪಂ, ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ್, ಗುಂಜಾವತಿ ಗ್ರಾ.ಪಂ, ಅಧ್ಯಕ್ಷ  ಬಸಯ್ಯಾ ನಡುವಿಮನಿ, ಮುಖಂಡರುಗಳಾದ ಎಚ್.ಎಮ್.ನಾಯ್ಕ,  ಸಿದ್ದಪ್ಪಾ ಹಡಪದ, ಪ್ರಶಾಂತ ಲಮಾಣ , ಯುವ ಮುಖಂಡರುಗಳಾದ  ಆಸೀಫ್ ಮಕಾಂದಾರ, ಹಜರತ್ ಅಲಿ, ಮುಂತಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...