ಮುಂಡಗೋಡ : ಬೀದಿ ವ್ಯಾಪಾರಸ್ಥರು ಸ್ವಚ್ಚತೆಗೆ ಆದ್ಯತೆ ನೀಡಬೇಕು : ಡಾ.ಸುಳ್ಳದ

Source: nazir | By Arshad Koppa | Published on 23rd October 2017, 8:06 AM | Coastal News |

ಮುಂಡಗೋಡ: ಬೀದಿ ವ್ಯಾಪಾರಸ್ಥರು ಸ್ವಚ್ಚತೆಗೆ ಆದ್ಯತೆ ನೀಡಿದರೆ ಗ್ರಾಹಕರ ಆರೋಗ್ಯದ ಜೊತೆಜೊತೆಗೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ವೈದಾಧಿಕಾರಿ ಎಸ್.ವಿ.ಸುಳ್ಳದ ಹೇಳಿದರು. 

ಅವರು ಮುಂಡಗೋಡ ಪಟ್ಟಣದ ನಗರ ಸಭಾ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶ ಉತ್ತರ ಕನ್ನಡ ಕಾರವಾರ, ಪಟ್ಟಣ ಪಂಚಾಯಿತಿ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಅಭಿಯಾನದಡಿಯಲ್ಲಿ ನಗರ ಬೀದಿ ಬದಿ ವ್ಯಾಪಾರಸ್ಥರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬೀದಿಗಳಲ್ಲಿ ವ್ಯಾಪಾರಸ್ಥರು ದೋಷಿತ ವಾತವರಣದಲ್ಲಿರುವುದರಿಂದ ಅವರು ಬೀದಿಯಲ್ಲಿ ವ್ಯಾಪಾರ ಮಾಡಬೇಕಾದರೆ ಮೂಗಿಗೆ ಮಾಸ್ಕ್  ಧರಿಸುವುದರಿಂದ  ಅಸ್ತಮಾ, ಅಲರ್ಜಿ ಪುಪ್ಪುಸ ಸಂಬಂಧಿ ಕ್ಷಯ ಹಾಗೂ ಕುಷ್ಟ ರೋಗಗಳನ್ನು ತಡೆಗಟ್ಟಬಹುದು . ಕೆಲಸದ ಒತ್ತಡದಿಂದ ಕಲುಷಿತ ನೀರು ಕುಡಿಯುವುದು, ಗುಟಕಾ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡಬೇಕು. ಗ್ರಾಹಕರಿಗೆ ನೀಡುವ ಆಹಾರ ಕೂಡ ಶುದ್ದವಾಗಿರಬೇಕಲ್ಲದೇ, ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಬೀದಿ ವ್ಯಾಪಾರಸ್ಥರಿಗೆ ತಿಳಿಸಿದ ಅವರು, ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷಗಳ ಅಂತರವಿರಲಿ. ಈ ತರಬೇತಿಗೆ ತಮ್ಮೆಲ್ಲರ ಸಹಕಾರದ ಅತ್ಯಗತ್ಯವಿದೆ ಎಂದು ವಾಪಾರಸ್ಥರಿಗೆ ತಿಳಿಸಿದರು.     
ಪ.ಪಂ. ಅವಲಂಬನೆಯಾಗಬೇಡಿ:  ಸ್ವಚ್ಚತೆಗೆ  ಪಟ್ಟಣ ಪಂಚಾಯಿತಿ ಅವಲಂಬನೆಯಾಗಬೇಡಿರಿ ನಮ್ಮ ಮನೆ, ನಮ್ಮ ಓಣಿ, ನಮ್ಮ ಊರು, ನಮ್ಮ ದೇಶ ಎಂದು ಸ್ವಯಂಪ್ರೇರಿತರಾಗಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪೊಲೀಸ ಇಲಾಖೆ ಅಧಿಕಾರಿ ಬಿ.ವಿ.ಹೆಗಡೆ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೂಪಾ ಅಂಗಡಿ, ಪೂರ್ಣಿಮಾ ದೊಡ್ಡಮನಿ, ಡಾ. ಎನ್.ಎಚ್.ಹಿರೇಮಠ, ಡಾ. ಸುರೇಶ ದೊಡ್ಡಗೌಡರ, ಶರಣಪ್ಪಾ ಉಣಕಲ್ ಉಪಸ್ಥಿತರಿದ್ದರು. ಪ.ಪಂ ಯ ಮಂಚಲಾ ಶೇಟ ಸ್ವಾಗತಿಸಿದರು. ಎಸ್.ವಾಯ್.ಗೋಣೆಪ್ಪನವರ ನಿರೂಪಿಸಿದರು. ಮರಿಯಪ್ಪ ಹಳ್ಳೆಮ್ಮನವರ ವಂದಿಸಿದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...