ಮಂಗಳೂರು: ಬಾಬ್ರಿ ಮಸೀದಿ ಪುನರ್ ನಿರ್ಮಿಸಿ ಜಾತ್ಯಾತೀತತೆ ಮರುಸ್ಥಾಪಿಸಿ : ಎಸ್‍ಡಿಪಿಐ

Source: sdpi | By Arshad Koppa | Published on 6th December 2016, 8:28 AM | Coastal News | Public Voice |

ಪತ್ರಿಕಾ ಪ್ರಕಟಣೆ


ಮಂಗಳೂರು, ಡಿ ೬: 1992ರ ಡಿಸೆಂಬರ್ 6, ಇಂಡಿಯಾದ ಇತಿಹಾಸ ಪುಟಗಳಲ್ಲಿ ಎಂದೂ ಮರೆಯಲಾಗದ ಅವಮಾನ, ಕ್ರೌರ್ಯ ಮತ್ತು ವಿನಾಶಕ್ಕೆ ಸಾಕ್ಷಿಯಾದ ದಿನವಾಗಿರುತ್ತದೆ. ಆ ದಿನ ಆರ್.ಎಸ್.ಎಸ್‍ನ ಫ್ಯಾಶಿಸ್ಟ್ ಗುಂಪುಗಳು ಬಾಬ್ರಿ ಮಸೀದಿಯನ್ನು ಧ್ವಂಸಮಾಡಿತು. ಈ ಘಟನೆಯ ಮೂಲಕ ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ಇಂಡಿಯಾ ರಾಷ್ಟ್ರವನ್ನು ಇಡೀ ಜಗತ್ತಿನ ಮುಂದೆ ನಾಚಿಕೆ ಮತ್ತು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಲಾಯಿತು. ಸಂಘ ಪರಿವಾರದವರು ನಡೆಸಿದ ರಥಯಾತ್ರೆ ಮತ್ತು ಬಾಬ್ರಿ ಮಸೀದಿಯ ಧ್ವಂಸದ ನಂತರ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವಿರಾರ ಅಮಾಯಕ ಭಾರತೀಯರು ಕ್ರೂರವಾಗಿ ಕೊಲ್ಲಲ್ಪಟ್ಟರು. ಈ ಭೀಕರ ಘಟನೆಯಿಂದಾಗಿ ಭಾರತೀಯ ಸಮಾಜದಲ್ಲಿ ಭದ್ರವಾಗಿ ನೆಲಯೂರಿದ್ದ ಕೋಮುಸಾಮರಸ್ಯ, ಸಹಬಾಳ್ವೆ ಮತ್ತು ಅನ್ಯೋನ್ಯತೆಯ ಮೇಲೆ ದೊಡ್ಡ ಹೊಡೆತ ಬಿದ್ದಿತು. ಶತಮಾನಗಳಿಂದ ಒಂದೇ ಕುಟುಂಬದಂತೆ ವಾಸಿಸುತ್ತಿದ್ದ ಸಮುದಾಯಗಳ ಮಧ್ಯೆ ಅಪನಂಬಿಕೆ ಮತ್ತು ದ್ವೇಷದ ಹೊಗೆಯಾಡಲಾರಂಭಿಸಿದವು ಮತ್ತು ಪರಸ್ಪರ ಸಹೋದರ ಸಂಬಂಧಗಳು ಮುರಿದು ಬಿದ್ದವು. ಪ್ರಜಾಪ್ರಭುತ್ವ ವಿರೋಧಿ ಪಡೆಗಳು ಸಮಾಜದಲ್ಲಿ ಒಂದು ಸ್ಪಷ್ಟವಾದ ಕೋಮು ವಿಭಜನೆಯನ್ನು ಸ್ಥಾಪಿಸಿದರು. ಆರ್.ಎಸ್.ಎಸ್‍ನ ಫ್ಯಾಶಿಸ್ಟ್ ಅಜೆಂಡ ಮತ್ತು ಬಿ.ಜೆ.ಪಿಯ ಕೋಮುವಾದ ರಾಜಕೀಯದ ಅಧಿಕಾರ ದಾಹಕ್ಕಾಗಿ ನಮ್ಮ ರಾಷ್ಟ್ರವು ಭಾರೀ ಬೆಲೆತೆರೆಬೇಕಾಯಿತು. ಬಾಬ್ರಿ ಮಸೀದಿ ಧ್ವಂಸದ ಗಾಯವು ಇಂದಿಗೂ ಭಾರತೀಯ ನಾಗರೀಕರ ಹೃದಯದಲ್ಲಿ ಮಾಯವಾಗದೆ ಉಳಿದಿರುತ್ತದೆ. ನಮ್ಮ ದೇಶದ ಜಾತ್ಯಾತೀತ ಚೌಕಟ್ಟನ್ನು ನಾಶಮಾಡಿದ ಈ ಭೀಕರ ಧ್ವಂಸ ಪ್ರಕರಣವು ಪ್ರಜಾಪ್ರಭುತ್ವ ವ್ಯವಸ್ಥೆಯ ಹೃದಯ ಭಾಗಕ್ಕೆ ಮುಳ್ಳಿನಿಂದ ಚುಚ್ಚಿದ ನೋವಿನ ಅನುಭವವನ್ನು ಇಂದಿಗೂ ನೀಡುತ್ತಿದೆ.
ಅಂದಿನ ಪ್ರಧಾನಮಂತ್ರಿಯವರು ಅದೇ ಸ್ಥಳದಲ್ಲಿ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸಲಾಗುವುದು ಎಂಬ ಭರವಸೆಯನ್ನು ರಾಷ್ಟ್ರಕ್ಕೆ ನೀಡಿದ್ದರು. ಈ ವಿನಾಶದ ಕಾರಣಗಳನ್ನು ಪತ್ತೆಹಚ್ಚಲು ನೇಮಕಗೊಂಡಿದ್ದ ಲಿಬರ್ಹಾನ್ ಆಯೋಗವು 19 ವರ್ಷಗಳ ನಂತರದ ತನ್ನ ವರದಿಯಲ್ಲಿ 68 ಅಪರಾಧಿಗಳನ್ನು ಹೆಸರಿಸಿತು. ಆದರೆ 24 ವರ್ಷಗಳ ನಂತರ ಇಂದಿಗೂ ಕೂಡಾ ಸರ್ಕಾರವು ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸುವ ಮತ್ತು ಆ 68 ಅಪರಾಧಿಗಳನ್ನು ಶಿಕ್ಷಿಸುವ ಭರವಸೆಗಳನ್ನು ಈಡೇರಿಸಿರುವುದಿಲ್ಲ. ಬದಲಿಗೆ ಅವರನ್ನು ಉನ್ನತ ಮಟ್ಟದ ಸ್ಥಾನಮಾನ ಹಾಗೂ ಸಂಪುಟ ದರ್ಜೆಯ ಸಚಿವ ಸ್ಥಾನಗಳನ್ನು ನೀಡಿ ಗೌರವಿಸಲಿಯಿತು. ಈ ಎಲ್ಲಾ ವರ್ಷಗಳಲ್ಲಿ ಜಾತ್ಯಾತೀತ ಪ್ರಿಯ ನಾಗರಿಕರು ಅಪಾರವಾದ ಮಾನಸಿಕ ಯಾತನೆಗೆ ಒಳಗಾಗುತ್ತಿದ್ದಾರೆ. ಮುಸಲ್ಮಾನರು ತಮ್ಮ ಐತಿಹಾಸಿಕವಾದ ಸ್ಮಾರಕವನ್ನು ನಷ್ಟಹೊಂದುದರೊಂದಿಗೆ 2 ದಶಕಗಳಿಂದ ಅನುಭವಿಸುತ್ತಿರುವ ಅನ್ಯಾಯ ಮತ್ತು ಅಸಹನೀಯವಾದ ನೋವನ್ನು ತನ್ನ ಭಾರವಾದ ಹೃದಯದಿಂದ ಸಹಿಸಿಕೊಳ್ಳುತ್ತಿದ್ದಾರೆ. ಬಾಬ್ರಿ ಮಸೀದಿ ಧ್ವಂಸದ ನಂತರ ಕೋಮುವಾದಿ ಆರ್.ಎಸ್.ಎಸ್ ಮತ್ತು ಅದರ ಗುಂಪುಗಳು ಕೋಮು ದ್ರುವೀಕರಣ, ಹಿಂಸೆ ಮತ್ತು ದ್ವೇಷವನ್ನು ಹಬ್ಬುವ ಮೂಲಕ ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ತನ್ನ ಕಾರ್ಯಸೂಚಿಯನ್ನು ತೀವ್ರಗೊಳಿಸುವುದರೊಂದಿಗೆ ಹಿಂದು, ಮುಸ್ಲಿಂ, ದಲಿತರು ಮತ್ತು ಆದಿವಾಸಿಗಳನ್ನು ಬಲಿಪಾಶುಗಳನ್ನಾಗಿಸುತ್ತಿದೆ. ಬಾಬ್ರಿ ಮಸೀದಿಯ ಪುನರ್ ನಿರ್ಮಾಣ ಮತ್ತು ಸ್ಮಾರಕ ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವವರೆಗೆ ಈ ದೇಶದ ಜಾತ್ಯಾತೀತತೆಯ ಮರುಸ್ಥಾಪನೆ ಸಾಧ್ಯವಿರುವುದಿಲ್ಲ ಎಂಬುದು ಸ್ಪಟಿಕದಷ್ಟು ಸ್ಪಷ್ಟವಾಗಿರುವ ಸತ್ಯವಾಗಿರುತ್ತದೆ. ಬಾಬ್ರಿ ಮಸೀದಿಗೆ ನ್ಯಾಯ ಸಿಗುವವರೆಗೂ ಈ ದೇಶದ ಎಲ್ಲಾ ಜಾತ್ಯಾತೀತ ಜನತೆಯು ತಮ್ಮ ಹೋರಾಟವನ್ನು ನಿರಂತರಗೊಳಿಸಬೇಕಾಗಿರುತ್ತದೆ ಹಾಗೂ ಎಲ್ಲಾ ಬಾರತೀಯ ಪ್ರಜೆಗಳು ಬಾಬ್ರಿ ಮಸೀದಿಯ ಪುನರ್ ನಿರ್ಮಾಣಕ್ಕಾಗಿ ಎಲ್ಲಾ ರೀತಿಯ ಪಟ್ಟು ಬಿಡದ ಹೋರಾಟವನ್ನು ಮುಂದುವರಿಸಬಾಕಾಗಿರುತ್ತದೆ. 
ಆದ್ದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ದೇಶದಾದ್ಯಂತ “ಬಾಬ್ರಿ ಮಸೀದಿ ಪುನರ್ ನಿರ್ಮಿಸಿ ಜಾತ್ಯಾತೀತತೆ ಮರುಸ್ಥಾಪಿಸಿ” ಎಂಬ ಘೋಷಣೆಯೊಂದಿಗೆ ನಡೆಸುವ ಹೋರಾಟದ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಭಾ ಕಾರ್ಯಕ್ರಮ, ಪ್ರತಿಭಟನೆ, ಸೆಮಿನಾರ್, ಚರ್ಚಾಕೂಟ ಮತ್ತು ಮೌನ ಮೆರವಣ ಗೆಗಳನ್ನು ನಡೆಸಲಾಗುವುದೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ಕಾರ್ಯಕ್ರಮಗಳಲ್ಲಿ ತಾವುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಬಾಬ್ರಿ ಮಸೀದಿಯ ನ್ಯಾಯಾಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ.


ದಿನಾಂಕ : 05/12/2016                                       

ಇತೀ ತಮ್ಮ ವಿಶ್ವಾಸಿ
ಸ್ಥಳ    : ಮಂಗಳೂರು                                       

ಇಕ್ಬಾಲ್ ಬೆಳ್ಳಾರೆ        
ಜಿಲ್ಲಾ ಕಾರ್ಯದರ್ಶಿ, ಎಸ್‍ಡಿಪಿಐ. ದ.ಕ
 96116965453

Read These Next

ಕೊರೋನ ಬಿಕ್ಕಟ್ಟಿನ ನಡುವೆ ಕೋಮುದ್ವೇಷ: ಸಾಮರಸ್ಯ ಕಾಪಾಡಲು ಸಾಹಿತಿಗಳು, ಪ್ರಗತಿಪರರಿಂದ ಸಹಿ ಅಭಿಯಾನ

ಇದು, ನಾವು ಹೆಚ್ಚು ಮನುಷ್ಯರಾಗುವ ಕಾಲ. ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ...