ಮುಂಡಗೋಡ:ಪರ್ಲ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ ತಾಲೂಕ ಪ್ರತಿನಿಧಿಗಳಿಂದ ಮನವಿ ಸಲ್ಲಿಕೆ

Source: nazir | By Arshad Koppa | Published on 24th April 2017, 8:37 AM | Coastal News | Special Report |

ಮುಂಡಗೋಡ ಏ21- ಪರ್ಲ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯಲ್ಲಿ ಹಣ ತುಂಬಿಸುವಾಗ ಗ್ರಾಹಕರಿಗೆ ವಿಳಂಭ ಮಾಡದೇ ಸೆಬಿಯವರು ಕೂಡಲೇ ಹಣ ಹಿಂತಿರುಗಿಸುವಂತೆ ಮತ್ತು ಕಂಪನಿಯ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕುರಿತು (ಪಿ.ಎ.ಸಿ.ಎಲ್, ಕಂಪನಿಯ) ಮುಂಡಗೋಡ ತಾಲೂಕಿನ ಪ್ರತಿನಿಧಿಗಳು, (ಏಂಜೆಂಟರು) ತಹಶೀಲ್ದಾರವರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ,  ಮತ್ತು ನಿವೃತ ನ್ಯಾಯ ಮೂರ್ತಿ ಆರ್.ಎಮ್, ಲೋದಾ ಕಮೀಟಿ, ಹಾಗೂ ಸೆಕ್ಯೂರಿಟಿ ಎಕ್ಷ್ಚೇಂಜ್ ಬೋರ್ಡ್ ಆಫ್  ಇಂಡಿಯಾ (ಸೆಬಿ), ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಜಿಲ್ಲಾಧಿಕಾರಿಗಳು ಕಾರವಾರ (ಉ.ಕ), ಪೋಲಿಸ್ ವರಿಷ್ಠಾಧಿಕಾರಿಗಳು ಕಾರವಾರ, ಹಾಗೂ ಆರಕ್ಷಕ ವೃತ್ತ ನೀರಿಕ್ಷಕರು ಪೋಲಿಸ್ ಠಾಣೆ ಮುಂಡಗೋಡರವರಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.  
    ದಿನಾಂಕ 1-03-2014 ರಂದು ಸುಪ್ರೀಂ ಕೋರ್ಟ ಆದೇಶದ ಮೇರೆಗೆ ಸಿ.ಬಿ.ಐ, ನವರು ಕಂಪನಿಯ ಬಗ್ಗೆ ವಿಚಾರಣೆ ನಡೆಸಲು ಕಂಪನಿಯ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಮಾಡಿದರು, ನಂತರ ದಿನಾಂಕ 22-03-2014 ರಂದು ಸೆಬಿಯವರು  ಕಂಪನಿಯು 5.85 ಕೋಟಿ ಗ್ರಾಹಕರಿಂದ ಸಂಗ್ರಹಿಸುವ ಹಣ 49.100 ಕೋಟಿ ಹಣವನ್ನು ಮೂರು ತಿಂಗಳ ಒಳಗಾಗಿ ಹಿಂತಿರುಗಿಸಲು ಆದೇಶ ಮಾಡಿತ್ತು.


  ಈ ಆದೇಶದ ವಿರುಧ್ಧ ಕಂಪನಿಯು ಸೆಕ್ಯೂರಿಟಿ ಅಫಿಲೇಟ್ ಟ್ರಿಬ್ಯುನಲ್‍ಗೆ ಮೇಲ್ಮನವಿ ಸಲ್ಲಿಸಿತ್ತು.  ಆ ಮೇಲ್ಮನವಿಯು ದಿನಾಂಕ 12-08-2015 ರಂದು ವಜಾ ಆಗಿರುತ್ತದೆ, ನಂತರ ಕಂಪನಿಯು ಸುಪ್ರೀಂ ಕೋರ್ಟಗೆ ಮೇಲ್ಮನವಿಯನ್ನು ಸಲ್ಲಿಸಿದ್ದು. ಅದರ ನಂ; ಸಿವಿಲ್ ಅಫೀಲ್ ನಂ; 13301/2015 ಮತ್ತು 13394/15 ಆಗಿರುತ್ತದೆ. 
ಒದಗಿಸಬೇಕೆಂದು ಪಲ್ರ್ಸ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯ  ತಾಲೂಕಿನ ಎಲ್ಲ ಪ್ರತಿನಿಧಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.                             
ಈ ಸಂಧರ್ಭದಲ್ಲಿ   ಪರ್ಲ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯ ತಾಲೂಕಿನ ಪ್ರತಿನಿಧಿಗಳಾದ, ವಾಯ್.ಪಿ.ಭುಜಂಗಿ, ಶಿವಾಜಿ ಎಮ್. ನಿಂಬಾಯಿ, ವಿರುಪಾಕ್ಷ ಪಾಟೀಲ್, ಬೀರು ಕಾತ್ರಟ್, ಬಾಷೆಸಾಬ ದುಂಡಶಿ, ಬಾಬು ಜಗ್ಗು ಕೊಕರೆ, ನವಲು ವಿಠ್ಠು ಮಿ¸ಳ, ಬೀರು ಬಾಬು ಕಾತ್ರಟ್, ಪೂಣ ್ಮಾ ಆರ್ ಅಂಗಡಿ, ಉಮೇಶ ಹೊಸಳ್ಳಿ, ಬಸವರಾಜ ಬಿ ಜಿನ್ನುರ, ವಿಶ್ವನಾಥ ಮುಡುರ, ಮುನಾಫ್ ಡಿ ದುಂಡಶಿ, Àಶೇಕಿರ ಅಹ್ಮದ್, ಅಮೀನಾಬಿ ಕಾಂಜಾದೆ, ಸಬೀಯಾ ಅತ್ತಾರ, ರಹೀಮಖಾನ ಬೆಂಡಿಗೇರಿ, ಮುಂತಾದವರಿದ್ದರು,      

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...