ಮುಂಡಗೋಡ: ಬಡವರ ಕುರಿತು ಕಾಂಗ್ರೆಸ್ ಗೆ ಕಳಕಳಿ ಇದೆ : ಹೆಬ್ಬಾರ

Source: nazir | By Arshad Koppa | Published on 24th August 2017, 8:05 AM | Coastal News | Special Report |

ಮುಂಡಗೋಡ: ರಾಜ್ಯದಲ್ಲಿ ಕಾಂಗ್ರೆಸ ಸರ್ಕಾರ ಬಂದ ಬಳಿಕ ಸುಮಾರು 26 ಸಾವಿರ ಅತಿಕ್ರಮಣದಾರರ ನಕಾಶೆ ತಯಾರಿಸಿ ಜಿ.ಪಿ.ಎಸ್ ಮಾಡಿದ್ದೇವೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. .
ಅವರು  ಮಂಗಳವಾರ ತಾಲೂಕಿನ ಇಂದೂರ-ಅರಶಿಣಗೇರಿ ಹಾಗೂ ಬಡ್ಡಿಗೇರಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಬಿಜೆಪಿ ಸರ್ಕಾರವಿದ್ದಾಗ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದರು ವಿನಹ ಬಡವರ ಪರವಾದ ಯಾವುದೇ ಕೆಲಸ ಮಾಡಲಿಲ್ಲ.  ಕ್ಷೇತ್ರದಲ್ಲಿ ಸುಮಾರು 30 ಸಾವಿರ ಅರಣ್ಯ ಅತಿಕ್ರಮಣದಾರರು ವಾಸಿಸುತ್ತಿದ್ದರೂ ಕೂಡ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ  ಒಂದೇ ಒಂದು ಪ್ರಕರಣವನ್ನು ಸಹ ಸಕ್ರಮಗೊಳಿಸುವ ಕೆಲಸ ಮಾಡಲಿಲ್ಲ ಇದರಿಂದ ಗೊತ್ತಾಗುತ್ತದೆ  ಬಿಜೆಪಿಗೆ ಬಡವರ ಕುರಿತು  ಕಾಳಜಿ ಇದೆ ಎಂದು.
ಬಡವರ ಕುರಿತು  ಕಳಕಳಿ ಇದೆ ಎಂದಾದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಜನಪರ ಕಾಳಜಿ ಇದ್ದವರು ಮಾತ್ರ ನಿಜವಾದ ರಾಜಕಾರಣ ಗಳಾಗುತ್ತಾರೆ. ಮತ ಕೇಳುವಾಗ ಎಲ್ಲರೂ ಸುಳ್ಳು ಅಶ್ವಾಸನೆಗಳನ್ನು ನೀಡುತ್ತಾರೆ. ಆದರೆ ನಾವು ಅಭಿವೃದ್ದಿ ಅಭಿಯಾನ ನಡೆಸುವ ಮೂಲಕ ಸುಳ್ಳನ್ನು ಸತ್ಯವಾಗಿ ಬದಲಿಸಿದ್ದೇವೆ ಎಂದ ಅವರು, ಹಿಂದೆಂದು ನೀಡದಷ್ಟು ಹಣವನ್ನು ಗ್ರಾಮೀಣ ರಸ್ತೆ ಅಭಿವೃದ್ದಿಗೆ ನೀಡಲಾಗುತ್ತಿದೆ. ಮತ ನೀಡಿ ನಮ್ಮನ್ನು ಆಯ್ಕೆ ಮಾಡಿದ ಜನರೇ ನಮ್ಮ ಮಾಲಿಕರು. ನಾವೆಲ್ಲ ಜನರ ಸೇವಕರು ಎಂಬುವುದನ್ನು ಎಂದಿಗೂ ಮರೆಯಬಾರದು. ಏಕೆಂದರೆ ಜನ ನಮಗೆ ಆಶಿರ್ವಾದ ಮಾಡಿದ್ದಕ್ಕೆ ನಾವು ಇಂದು ಅಧಿಕಾರದಲ್ಲಿರುವುದು. ಜನರೇನಾದರೂ ನಮ್ಮನ್ನು ತಿರಸ್ಕರಿಸಿದರೆ ನಾವು ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಸರಕಾರಿ ನೌಕರರು ಕೆಲಸ ಮಾಡಲಿ ಮಾಡದೇ ಇರಲಿ ಬಡ್ತಿ ಸಿಗುತ್ತದೆ. ಆದರೆ ಜನಪ್ರತಿನಿಧಿಗಳು ಕೆಲಸ ಮಾಡಿದರೆ ಮಾತ್ರ ಬಡ್ತಿ ಇಲ್ಲದೇ ಹೋದರೆ ಜನರೇ ಹಿಂಬಡ್ತಿ ನೀಡುತ್ತಾರೆ. ಅಭಿವೃದ್ದಿ ಯೋಜನೆ ತರುವುದು ನಮ್ಮ ಕೆಲಸ ಅದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಗುಣಮಟ್ಟ ಕಾಮಗಾರಿ ನಿರ್ವಹಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.
ಜನರಿಂದ ಜನ್ ಧನ್ ಖಾತೆ ತೆರೆಸಿ ಕಾಳ ಹಣವನ್ನು ತಂದು ಬಡವರ ಖಾತೆಗೆ ಲಕ್ಷ ಲಕ್ಷ ಹಣ ಜಮಾ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು, ಬಡವರ ಖಾತೆಗೆ ಹಣ ಹಾಕುವುದು ಹೋಗಲು ಉಲ್ಟಾ ಸುಮಾರು 750 ಕೋಟಿ ಬಡವರ ಹಣವನ್ನು ಜಮಾ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿ,ಪಂ ಸದಸ್ಯ ರವಿಗೌಡ ಪಾಟೀಲ, ಜಯಮ್ಮ ಕೃಷ್ಣ ಹಿರೇಹಳ್ಳಿ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣ  ಸುರಗಿಮಠ, ಸದಸ್ಯ ರಮೇಶ ರಾಯ್ಕರ, ಜ್ಞಾನದೇವ ಗುಡಿಯಾಳ, ಗ್ರಾ.ಪಂ ಅಧ್ಯಕ್ಷ ಬಸವರಾಜ ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...