ವಿಷ ಸೇವಿಸಿ ರೈತ ಆತ್ಮಹತ್ಯೆ

Source: S O News service | By Staff Correspondent | Published on 4th February 2017, 12:09 AM | Coastal News | Incidents | Don't Miss |

ಮುಂಡಗೋಡ: ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ಶ್ಯಾನವಳ್ಳಿಯಲ್ಲಿ ಮಧುಕರ ಗಣಪತಿ ಭಟ್(೪೦,) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.

ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಕೈ ಕೊಟ್ಟಿದಕ್ಕೆ ಹಾಗೂ ತನ್ನ ಹೊಲದಲ್ಲಿ ೯ ಬಾರಿ  ಬೊರವೇಲ್ ಕೊರೆಸಿದರು ನೀರು ಬಾರದೇ ಇರುವದನ್ನು ಬೋರ್ ಗೆ ಮಾಡಿದ ಸಾಲ ಮಾಡಿದನ್ನೂ ಮನಸ್ಸಿಗೆ ಹಚ್ಚಿಕೊಂಡು   ತನ್ನ ಗ್ರಾಮ ಹತ್ತಿರದ  ಕಾಡಿನಲ್ಲಿ ಯಾವುದೋ ಕ್ರಿಮಿನಾಶಕ ವಿಷ ಸೇವಿಸಿ. ತನ್ನ ಕುಟುಂಬದವರಿಗೆ ಕರೆ ಮಾಡಿ ನಾನು ವಿಷ ಸೇವಿಸಿದ್ದು, ನನ್ನ ಶವ ನಮ್ಮ ಗ್ರಾಮದ ಕಾಡಿನಲ್ಲಿ ಇರುತ್ತೆ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ. ಕರೆ ಮಾಡಿದ ಹಿನ್ನಲೆಯಲ್ಲಿ ಈತನನ್ನು ಹುಡಕಲು ಕುಟುಂಬದವರು ಕಾಡಿಗೆ ಹೋಗಿದ್ದಾರೆ ಕಾಡಿನಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆಂದು ಕರೆದ್ಯೊಯತ್ತಿರುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...