ಮುದ್ದೆಬಿಹಾಳದಲ್ಲಿ ಕುಮಾರ ಪರ್ವ

Source: sonews | By sub editor | Published on 3rd February 2018, 4:22 PM | State News | Don't Miss |

ಮುದ್ದೇಬಿಹಾಳ: ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನನಗೋಸ್ಕರ ತಮ್ಮ ಕ್ಷೇತ್ರ ತ್ಯಾಗ ಮಾಡುವ ಮಹತ್ವದ ತೀರ್ಮಾನ ಕೈಕೊಂಡಿದ್ದಾರೆ. ನನ್ನನ್ನು ದೇ.ಹಿಪ್ಪರಗಿ ಕ್ಷೇತ್ರದಿಂದ ಗೆಲ್ಲಿಸಿ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಅವರು ಪಣ ತೊಟ್ಟಿದ್ದಾರೆ. ಈ ಭಾಗದ ಜನತೆ ಅವರ ಕೈ ಬಲಪಡಿಸಲು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧೆಗಿಳಿದಿರುವ ಅವರೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಲು ಮತದಾರರು ಮನಸ್ಸು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮುದ್ದೇಬಿಹಾಳ ತಾಲೂಕು ನಾಲತವಾಡ ಪಟ್ಟಣದಲ್ಲಿ ಶುಕ್ರವಾರ ನಡೆದ ಕುಮಾರಪರ್ವ ಭಾಗ-2 ಕಾರ್ಯಕ್ರಮದ ಕೊನೇಯ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾನು ಮುಖ್ಯಮಂತ್ರಿಯಾದರೆ ಶಾಸಕ ನಡಹಳ್ಳಿ ಸಚಿವರಾಗುತ್ತಾರೆ. ಅವರು ಸಚಿವರಾದರೆ ಮುದ್ದೇಬಿಹಾಳ ಮತಕ್ಷೇತ್ರ, ವಿಜಯಪುರ ಜಿಲ್ಲೆ ಸೇರಿದಂತೆ ಇಡೀ ಉತ್ತರ ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣುತ್ತದೆ. ಅವರು ನನಗೋಸ್ಕರ ತಾವು ಪ್ರತಿನಿಧಿಸುವ ದೇ.ಹಿಪ್ಪರಗಿ ಮತಕ್ಷೇತ್ರ ಬಿಟ್ಟು ಕೊಟ್ಟು ತ್ಯಾಗ ಮಾಡುತ್ತಿದ್ದಾರೆ. ಅವರ ತ್ಯಾಗ ವ್ಯರ್ಥಗೊಳ್ಳದಂತೆ ಇಲ್ಲಿನ ಮತದಾರರು ಬೆಂಬಲ ನೀಡಬೇಕು ಎಂದರು ಕೋರಿದರು.
ದೇ.ಹಿಪ್ಪರಗಿ ಮತದಾರರು ನಡಹಳ್ಳಿಯನ್ನ 2 ಬಾರಿ ಆಯ್ಕೆ ಮಾಡಿದ್ದಾರೆ. ಮೊದಲ ಬಾರಿ ಬಿಜೆಪಿ ಸರ್ಕಾರ, ಎರಡನೇ ಬಾರಿ ಕಾಂಗ್ರೆಸ್ ಸರ್ಕಾರದ ಅಸಹಕಾರದಿಂದ ಮತ ಹಾಕಿ ಗೆಲ್ಲಿಸಿದ ಜನರ ಋಣ ತೀರಿಸೋದು ಸಾಧ್ಯವಾಗಿಲ್ಲ ಅನ್ನೋ ನೋವು ಅವರ ಮನಸ್ಸಲ್ಲಿರುವುದನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ನನ್ನನ್ನು ದೇ.ಹಿಪ್ಪರಗಿಯಿಂದ ಆಯ್ಕೆ ಮಾಡಿ ಕಳಿಸಿದಲ್ಲಿ ನಾನು ಸಿಎಂ ಆದರೆ ವಿಜಯಪುರ ಜಿಲ್ಲೆ ಸಹಿತ ಉಕ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನಂಬಿ ನನ್ನ ಮೇಲೆ ವಿಶ್ವಾಸ ಇಟ್ಟು ಆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಅವರ ತ್ಯಾಗಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಜನತೆ ಫಲ ದೊರಕಿಸಿಕೊಡಲು ಅವರನ್ನು ಆಯ್ಕೆ ಮಾಡಬೇಕು ಎಂದರು.

ಮುದ್ದೇಬಿಹಾಳದ ಹಾಲಿ ಶಾಸಕ ಕಾಂಗ್ರೆಸ್‍ನ ಸಿ.ಎಸ್.ನಾಡಗೌಡರ 25 ವರ್ಷಗಳ ಆಡಳಿತ ಅಭಿವೃದ್ಧಿ ನಿರೀಕ್ಷೆ ಹುಸಿ ಮಾಡಿದೆ. ಅದನ್ನು ಸರಿಪಡಿಸಲು ಸಾಧ್ಯ ಎನ್ನುವ ವಿಶ್ವಾಸದಿಂದ ಎಲ್ಲೆಡೆ ಜೆಡಿಎಸ್ ಅಲೆ ನಿರ್ಮಿಸಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಶಾಂತಗೌಡ ಪಾಟೀಲ ಮಾತನಾಡಿ ಈ ಭಾಗದಲ್ಲಿ ಏತ ನೀರಾವರಿ ಆದಲ್ಲಿ 40 ಹಳ್ಳಿಗೆ ನೀರು ಕೊಡಲು ಸಾಧ್ಯ. ಜೆಡಿಎಸ್ ಸರ್ಕಾರ ರಚನೆಯಾದ ಕೂಡಲೇ ಈ ಭಾಗದ ಏತ ನೀರಾವರಿ ಸಹಿತ ಎಲ್ಲ ನೀರಾವರಿ ಯೋಜನೆಗಳಿಗೆ ತ್ವರಿತ ಚಾಲನೆ ನೀಡಿ ನಮ್ಮ ಹಳ್ಳಿಗೆ ನೀರು ಕೊಟ್ಟು ಜನರ ಕಷ್ಟ ಪರಿಹರಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಿದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಾವು ಈ ಕ್ಷೇತ್ರಕ್ಕೆ ಬರುವ ಹಿಂದಿನ ಕಾರಣ, ತಮ್ಮ ಕುಟುಂಬದ ಹಿಂದಿನ ಸ್ಥಿತಿ, ತಾವು 15 ವರ್ಷಗಳಿಂದ ಮಾಡುತ್ತಿರುವ ಸಮಾಜಸೇವಾ ಚಟುವಟಿಕೆಗಳ ಕುರಿತು ಮಾತನಾಡಿ ತನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಬಸನಗೌಡ ವಣಿಕ್ಯಾಳ, ರವಿ ಕಟ್ಟಿಮನಿ, ಸನಾ ಕೆಂಭಾವಿ, ಭೀಮಣ್ಣ ಗುರಿಕಾರ, ಸುಮಾ ಗಂಗನಗೌಡರ, ಲತಾ ಕಟ್ಟಿಮನಿ, ಸಿದ್ದಲಿಂಗಯ್ಯ ಕಪ್ಪರದ, ಸುಭಾಷ ಗಡ್ಡಿ, ಎಂ.ಎ.ಗಂಗನಗೌಡರ ವಕೀಲರು, ಅಮಜೇಸಾಬ ಮುಲ್ಲಾ, ಸೈಯ್ಯದ್ ಖಾಜಿ, ವಿಶ್ವನಾಥ ಡಿಗ್ಗಿ, ರಮೇಶ ಆಲಕೊಪ್ಪರ, ಹಣಮಂತ ಚಲವಾದಿ, ಬಸವಂತಪ್ಪ ವಾಲಿ, ಹಣಮಂತ ಹಟ್ಟಿ, ಅಲ್ಲಾಭಕ್ಷ ಕುಳಗೇರಿ, ಮಹಿಬೂಬ ರಕ್ಕಸಗಿ, ಕಾಂತಯ್ಯ ಹಿರೇಮಠ, ಖಾಜಾಅಮೀನ ಕಿತ್ತೂರ, ಹುಸೇನಬಾಸ ತೆಗ್ಗಿನಮನಿ, ದುರ್ಗಪ್ಪ ಲೊಟಗೇರಿ, ರಸೂಲ್ ದೇಸಾಯಿ, ಅರ್ಷದ್ ಮೋಮಿನ್, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಂಗಮ್ಮ ದೇವರಳ್ಳಿ, ಮನೋಹರ ತುಪ್ಪದ, ಚನ್ನಪ್ಪ ಕಂಠಿ, ಸಂಗಪ್ಪ ಲಕ್ಷಟ್ಟಿ, ನಾನಾಗೌಡ ಬಿರಾದಾರ, ವೀರೇಶ ರಕ್ಕಸಗಿ, ರಫೀಕ ಕೊಡಗಲಿ, ಜಗದೀಶ ಕೆಂಭಾವಿ ಸರಸ್ವತಿ, ಹಾವರಗಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕುಮಾರಸ್ವಾಮಿ, ನಡಹಳ್ಳಿ ಅವರು ವೀರೇಶ್ವರ ಕಾಲೇಜು ಆವರಣದಲ್ಲಿರುವ ದಿ.ಜೆ.ಎಸ್.ದೇಶಮುಖರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಶರಣ ವೀರೇಶ್ವರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಕಾರ್ಯಕ್ರಮ ಸ್ಥಳದವರೆಗೆ ಡೊಳ್ಳು, ಪುರ್ಣಕುಂಭ ಸಹಿತ ಅದ್ದೂರಿ ಮೆರವಣಿಗೆ ನಡೆಸಲಾಯಿತು.


Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...