ಸಿಕ್ಕ ಬಂಗಾರ ಹಿಂತಿರುಗಿಸಿ  ಪ್ರಾಮಾಣಿಕತೆ ಮೆರೆದ  ಮಹಮದ್ ಅಲಿ

Source: sonews | By sub editor | Published on 26th September 2018, 4:39 PM | Public Voice | Legal Corner |

ಧರ್ಮಸ್ಥಳ:  ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಚಾರ್ಮಾಡಿ ಗ್ರಾಮಸ್ಥರಾದ  ಬಿ. ಮಹಮ್ಮದ್ ಆಲಿ ಪ್ರಾಯ 38 ವರ್ಷ, ತಂದೆ ಪಿ. ಪಿ ಅಬ್ದುಲ್ ರೆಹಮಾನ್ ರವರು ಠಾಣೆಗೆ ತಂದು ಹಾಜರು ಪಡಿಸಿದ್ದು,  ಈ ಬ್ಯಾಗ್ ನಲ್ಲಿ ಸುಮಾರು 320000 ಬೆಲೆ ಬಾಳುವ 105 ಗ್ರಾಂ ಚಿನ್ನಾಭರಣ, ಒಂದು ಮೊಬೈಲ್ ಫೋನ್ ಇದ್ದು ಈ ಬ್ಯಾಗ್ ಬಗ್ಗೆ ವಿಚಾರಣೆ ನಡೆಸಿದಾಗ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರು ಕೋನೂರು ಪಡುವರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮ ಎಂಬುವವರು ತನ್ನ ಕುಟುಂಬಸ್ಥರೊಂದಿಗೆ ತಿರುಪತಿ ದರ್ಶನ ಮಾಡಿ ಬೆಂಗಳೂರಿನಿಂದ ಉಡುಪಿಗೆ ರೇಷ್ಮಾ ಖಾಸಗಿ ಬಸ್ ನಲ್ಲಿ ದಿನಾಂಕ 24.9.18 ರಂದು ರಾತ್ರಿ ಪ್ರಯಾಣೆಸುವಾಗ ಬೆಳಿಗ್ಗೆ 4.30 ಕ್ಕೆ ಬ್ಯಾಗ್ ಚೆಕ್ ಮಾಡಿದಾಗ ಕಾಣೆಸಿರುವುದಿಲ್ಲ ನಂತರ ಬಸ್ ನಿರ್ವಾಹಕರಿಗೆ ತಿಳಿಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಚೆಕ್ ಮಾಡಿದ್ದರು ಬ್ಯಾಗ್ ಸಿಕ್ಕಿರುವುದಿಲ್ಲ.

ಬ್ಯಾಗ್ ನಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದ.. ಬ್ಯಾಗ್ ನಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್ ಅನ್ನು ವರಸುದಾರರಾದ ರಾಮಚಂದ್ರ ದೇವಾಡಿಗ ರವರಿಗೆ ಒಪ್ಪಿಸಿರುತ್ತೆ. ಬೆಲೆಬಾಳುವ ಚಿನ್ನಾಭರಣ ಉಳ್ಳ ಬ್ಯಾಗ್ ನ್ನು ಹಿಂದಿರುಗಿಸಿದ ಚಾರ್ಮಾಡಿ ಗ್ರಾಮದ ಬಿ. ಮಹಮ್ಮದ್ ಆಲಿ ಯವರಿಗೆ ಪೊಲೀಸ್ ಮತ್ತು ಸಾರ್ವಜನಿಕರಿಂದ ಧನ್ಯವಾದಗಳನ್ನು ಅರ್ಪಿಸಿರುತ್ತೆ.

Read These Next

ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ

ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ...

ಗೋವುಗಳ ರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿರುವುದು ಘೋರ ಅಪರಾಧ; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ...