ಸಂಚಾರಿ ಆರೋಗ್ಯ ವಾಹನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ

Source: sonews | By Staff Correspondent | Published on 27th November 2018, 11:22 PM | Coastal News | Don't Miss |

ಭಟ್ಕಳ: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಕ್ರಿಯಾ ಹೆಲ್ತ್ ಕೇರ್ ಪ್ರೈ.ಲಿ. ಸಹಯೋಗದಲ್ಲಿ ಈಗಾಗಲೇ 2 ವಾಹನಗಳು ಮಂಜೂರಾಗಿದ್ದು, ಈ ಪೈಕಿ ತಾಲೂಕಿಗೆ ನೀಡಲಾದ ಸಂಚಾರಿ ಆರೋಗ್ಯ ವಾಹನವನ್ನು ಶಾಸಕ ಸುನೀಲ ನಾಯ್ಕ ಸೋಮವಾರದಂದು ತಾಲೂಕಾಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು. 

ಚಾಲನೆ ನೀಡಿ ಮಾತನಾಡಿದ ಶಾಸಕ ಸುನೀಲ ನಾಯ್ಕ 'ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಈ ಸೌಲಬ್ಯವನ್ನು ಎಲ್ಲರು ಪಡೆದು ಸೇವೆ ನೀಡುವವರು ನಗುಮೊದಲ್ಲಿ ನೀಡುವಂತಾಗಲಿ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. 

ವಾಹನದಲ್ಲಿ ಒಬ್ಬ ವೈದ್ಯೆ, ಒಬ್ಬ ಎನ್.ಎಂ. ಒಬ್ಬ ಜಿಎನ್‍ಎಂ ಸೇರಿ ನಾಲ್ವರು ಇರಲಿದೆ. ಇನ್ನು ಚಿಕಿತ್ಸೆ, ಔಷಧಗಳ ಜೊತೆಗೆ ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆ ಕೂಡ ಇರುವುದು ವಿಶೇಷ. ಹಾವು, ನಾಯಿ ಕಚ್ಚಿದಲ್ಲಿ ನೀಡುವ ಔಷಧಿಗಳನ್ನು ಈ ವಾಹನದಲ್ಲಿ ಇರಿಸಲಾಗಿದೆ ಎಂದು ಹೇಳಿದರು. 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕ್ರಿಯಾ ಎಂಬ ಕಂಪನಿಯಿಂದ ಘಟಕಗಳು ಸಾರ್ವಜನಿಕ,ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಆದರೆ ಚಿಕಿತ್ಸೆಯನ್ನು ಎಸ್‍ಟಿಗಳಿಗಷ್ಟೇ ಅಲ್ಲದೇ ಎಲ್ಲ ಜನಸಾಮಾನ್ಯರಿಗೂ ನೀಡಲಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ 8 ಕಡೆಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ನಡೆಸಲಾಗುತ್ತಿದ್ದು ಈ ಪೈಕಿ ಜಿಲ್ಲೆಗೆ ಎರಡು ಘಟಕ ಲಭ್ಯವಾಗಿದೆ. 

ಈ ಸಂಧರ್ಭದಲ್ಲಿ ಸಂಚಾರಿ ಆರೋಗ್ಯ ವಾಹನ ಉತ್ತರ ಕನ್ನಡ, ಉಡುಪಿ ಜಿಲ್ಲೆ ಮ್ಯಾನೇಜರ ಲೋಕೇಶ ನಾಯ್ಕ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಸುಬ್ರಾಯ ನಾಯ್ಕ, ಖೇದಾರ ಕೊಲ್ಲೆ, ಮಂಜುನಾಥ ನಾಯ್ಕ ಜಾಲಿ, ಕೆ.ಕೆ.ಮೋಹನ, ವೈದ್ಯೆ ನಿಧಾ ಶರ್ಮಿನ, ಸಂಚಾರಿ ಆರೋಗ್ಯ ವಾಹನ ಚಾಲಕ ವಿನಾಯಕ ನಾಯ್ಕ ಹಾಗೂ ತಾಲೂಕಾಸ್ಪತ್ರೆ ನರ್ಸಗಳು, ಸಿಬ್ಬಂದಿಗಳು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...