ಭಟ್ಕಳ: ತಾಯಿ ಸಾವನ್ನು ಸಹಿಸದ ವ್ಯಕ್ತಿ ಹೃದಯಘಾತದಿಂದ ಸಾವು

Source: sonews | By Staff Correspondent | Published on 3rd July 2018, 10:32 PM | Coastal News | State News | Don't Miss |


•    ಒಂದೇ ಕುಟುಂಬದಲ್ಲಿ ಇಬ್ಬರ ಸಾವು ಕಂಬನಿ ಮಿಡಿದ ಕುಟುಂಬ

ಭಟ್ಕಳ: ತನ್ನ ತಾಯಿಯ ಹೃದಯ ಸ್ಥಂಭನದಿಂದ ಮೃತಪಟ್ಟ ಸುದ್ದಿ ತಿಳಿದ ಮಗನೂ ಸಹ ಹೃದಯಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಭಟ್ಕಳದ ಮದೀನಾ ಕಾಲೋನಿಯ ಮುಹಿದ್ದೀನ್ ಸ್ಟ್ರೀಟ್ ನಲ್ಲಿ ಮಂಗಳವಾರ ಜರಗಿದೆ.

ಹೃದಯಘಾತಕ್ಕೊಳಗಾಗಿ ಮೃತಪಟ್ಟವರನ್ನು ಶಹರ್ ಬಾನು ಮಲ್ಪಾ (80) ಹಾಗೂ ಇವರ ಪುತ್ರ ಫಕ್ಕಿ ಇಸ್ಮಾಯಿಲ್ ಮಲ್ಪಾ (56) ಎಂದು ತಿಳಿದುಬಂದಿದೆ. 

ಮೂಲಗಳ ಪ್ರಕಾರ ಶಹರ್ ಬಾನು ಮಲ್ಪಾ ಎನ್ನುವವರು ಮಧ್ಯಾಹ್ನ 2ಗಂಟೆಗೆ ತನ್ನ ಮನೆಯಲ್ಲಿ ಹೃದಯ ಸ್ಥಂಭನ ನಿಂತು ಹೋದ ಪರಿಣಾಮ ಸಾವನ್ನಪ್ಪಿದ್ದು  ಮುಹಿದ್ದೀನ್ ಸ್ಟ್ರೀಟ್ ನ 1ನೇ ಕ್ರಾಸ್ ನಲ್ಲಿ ಅವರ ಪುತ್ರ ಫಕ್ಕಿ ಇಸ್ಮಾಯಿಲ್ ಎನ್ನುವವರು ತನ್ನ ತಾಯಿಯ ಮೃತದೇಹವನ್ನು ಕಾಣಲು ಬಂದಿದ್ದು ತನ್ನ ಮನೆಗೆ ಹಿಂತಿರುಗಿ ಹೋದ ಮೇಲೆ ಹೃದಯಘಾತಕ್ಕೊಳಗಾಗಿದ್ದರು ಎನ್ನಲಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಒಂದೆ ಕಡೆ ತಾಯಿ ಮಗ ಇಬ್ಬರ ಅಂತ್ಯ ಸಂಸ್ಕಾರ:  ಒಂದೇ ಕುಟುಂಬದಲ್ಲಿ ಇಬ್ಬರು ಒಂದೇ ದಿನ ಹೃದಯಘಾತಕ್ಕೊಳಗಾಗಿ ಮೃತಪಟ್ಟಿರುವ ಸುದ್ದಿಯಿಂದಾಗಿ ಅವರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಇವÀರಿಬ್ಬರ ಅಂತ್ಯ ಸಂಸ್ಕಾರವನ್ನು ಮಂಗಳವಾರವೇ ಮಗ್ರೀಬ್ ನಮಾಝ್ ನಂತರ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ನೆರವೇರಿಸಲಾಯಿತು. ಅಂತ್ಯಸಂಸ್ಕಾರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. 

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...