ಮಾಸಿಕ ಕೆಡಿಪಿ ಸಭೆ ; ಇಲಾಖೆಗಳು ಜವಾಬ್ಧಾರಿ ಅರಿತು ಕಾರ್ಯನಿರ್ವಹಿಸಬೇಕು : ಜಯಶ್ರೀ ಮೋಗೇರ

Source: sonews | By Staff Correspondent | Published on 11th July 2018, 6:47 PM | Coastal News | Don't Miss |

ಕಾರವಾರ; ಕುಮಟಾದ ಮಣಕಿ ಬಳಿ ಸಂಭವಿಸಿದ ಲಾರಿ-ಬಸ್ ಅಪಘಾತಕ್ಕೆ ಆರ್.ಟಿ.ಓ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆಗಳ ನಿರ್ಲಕ್ಷವೇ ಕಾರಣವೆಂಬ ಜನರ ಕೂಗು ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇಲಾಖೆಗಳು ಜಾಗುರುಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ ತಿಳಿಸಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ ಕೇವಲ ಜನಪ್ರತಿನಿದಿಗಳು ಮಾತ್ರವಲ್ಲ ಎಲ್ಲ ಇಲಾಖೆಗಳು ಜನರಿಗೆ ಉತ್ತರದಾಯಿಗಳು, 2-3 ದಿನದಿಂದ ಬಾರಿ ವಾಹನ ಜಿಲ್ಲೆಯಲ್ಲಿ ಸಂಚರಿಸಿದ್ದರೂ ಆರ್‍ಟಿಓ ಗಮನಿಸಲಿಲ್ಲವೇಕೆ ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂಜಾಗೃತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳು ದಿನಗೂಲಿ ನೌಕರರ ವೇತನ ಪಾವತಿ ಮಾಡದೆ ಗುತ್ತಿಗೆದಾರರ ಬಿಲ್ ಪಾಸ್ ಮಾಡಲು ಆಸಕ್ತಿವಹಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅಧ್ಯಕ್ಷರು ತಿಳಿಸಿದಾಗ ಇಲಾಖೆಯ ಅಧಿಕಾರಿ ಹೊರಗುತ್ತಿಗೆ ನೌಕರರಿಗೆ 2018 ರ ಜನೇವರಿ ಮಾಹೆವರೆಗೆ ವೇತನ ಬಿಲ್ಲು ಪಾವತಿ ಮಾಡಿದ್ದು, ಉಳಿದ ಬಾಕಿ ಸಂದಾಯಕ್ಕೆ ಅನುಇದಾನ ಬಿಡುಗಡೆಗಾಗಿ ಸರಕಾರಕ್ಕೆ ಕೋರಲಾಗಿದೆ, ಅನುದಾನ ಬಿಡುಗಡೆ ಆದ ತಕ್ಷಣ ವೇತನ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.  

ಸಾರ್ವಜನಿಕ ಶಿಕ್ಣ ಇಲಾಖೆ : ಕಾರವಾರ ಮತ್ತು ಅಂಕೋಲಾ ತಾಲೂಕಿಗೆ ಡೆಸ್ಕಗಳನ್ನು ಸರಬರಾಜು ಮಾಡಲಾಗಿದ್ದು ಉಳಿದ ತಾಲುಕುಗಳಿಗೆ ಒಂದು ವಾರದೊಳಗೆ ಸರಬರಾಜು ಮಾಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲಾ ಮುಖ್ಯಾದ್ಯಾಪಕರಿಗೆ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳಲ್ಲಿ ತರಗತಿಗಳನ್ನು ನಡೆಸಬಾರದೆಂದು ತಿಳಿಸಲಾಗಿದೆ ಮತ್ತು ಈ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂಧಿ ಸಭೆಯಲ್ಲಿ ತಿಳಿಸಿದರು. 

ಹೆಸ್ಕಾಂ : ಕಾರವಾರ ವಿಭಾಗದಲ್ಲಿ ಪ್ರಸ್ತುತ ಮಳೆ-ಗಾಳಿಯಿಂದ 8 ಟ್ರಾನ್ಸಫರ್ಮಗಳು ಹಾಳಾಗಿದ್ದು ಅವುಗಳನ್ನು ಬದಲಾಯಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಾಗೂ ಒಟ್ಟು 420 ಕಂಬಗಳು ಹಾಳಾಗಿದ್ದು ಅವುಗಳಲ್ಲಿ 390 ಕಂಬಳನ್ನು ಬದಲಾಯಿಸಿದ್ದು ಇನ್ನೂಳಿದ ಕಂಬಗಳನ್ನು ಬದಲಾಯಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 
 
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಆಡಳಿತ) ಆರ್.ಜಿ.ನಾಯ್ಕ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂಜಯ ಮಾರುತಿ ಹಣಬರ ಮತ್ತು ರತ್ನಾಕರ ಎಮ್. ನಾಯ್ಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂಧಿ ಸಭೆಯಲ್ಲಿ ಹಾಜರಿದ್ದರು.
 

Read These Next

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...