ಕ್ಷೀರಭಾಗ್ಯ ಯೋಜನೆಯಡಿ ವಿಕಲಚೇತನ ಮಕ್ಕಳಿಗೆ ಹಾಲು ವಿತರಣೆ

Source: sonews | By Staff Correspondent | Published on 3rd November 2018, 8:19 PM | Coastal News |

ಕಾರವಾರ:  ನಗರದ  “ಆಶಾನಿಕೇತನ” ಶಾಲೆಯ ವಿಕಲಚೇತನ ಮಕ್ಕಳಿಗೆ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಿನೋದ ನಾಯಕ ಹಾಲನ್ನು ವಿತರಿಸುವ ಮೂಲಕ ವಿಶೇಷ ಶಾಲೆಗಳ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯನ್ನು ನವ್ಹಂಬರ 1 ರಂದು ಜಿಲ್ಲೆಯಲ್ಲಿ ಪ್ರಾರಂಬಿಸಲಾಯಿತು. 
     
ರಾಜ್ಯದಲ್ಲಿನ 155 ವಿಶೇಷ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಅಂದಾಜು 10,567 ವಿಶೇಷ ಚೇತನ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ  ವಾರದಲ್ಲಿ 5 ದಿನ ಉಚಿತ ಹಾಲು ವಿತರಿಸಲು ಸರ್ಕಾರವು ಆದೇಶಿಸಿದ್ದು,  ರಾಜ್ಯೋತ್ಸವದಂದು ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಹಾಲು ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 
       
ಕಾರ್ಯಕ್ರಮದಲ್ಲಿ ಕಾರವಾರ ತಾಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ  ಪ್ರಿಯಾ ಡಿ. ನಾಯಕ, ಜಿಲ್ಲಾ ವಿಕಲಚೇತನ ಮಕ್ಕಳ ಅಧಿಕಾರಿ ಸತೀಶ ನಾಯ್ಕ, ಅಕ್ಷರ ದಾಸೋಹದ ತಾಲೂಕು ಮತ್ತು ಜಿಲ್ಲಾ ಕಛೇರಿಯ  ಸಿಬ್ಬಂದಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು  ಪ್ರೀತಿಯಿಂದ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಿದರು.
       
ಜಿಲ್ಲೆಯ ಶಿರಸಿ, ಸಿದ್ದಾಪುರ, ಮುಂಡಗೋಡ ಮತ್ತು ಯಲ್ಲಾಪುರದಲ್ಲಿರುವ ಇಂತಹ 6 ಶಾಲೆಗಳ 246 ಮಕ್ಕಳಿಗೂ  ಉಚಿತ ಹಾಲು ನೀಡುವದನ್ನು ಪ್ರಸಕ್ತ ಮಾಹೆಯಿಂದ ಆರಂಭಿಸಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...