ಭಟ್ಕಳ: ‘ಅಂಜುಮನ್’ ಸಂಸ್ಥೆಯ ಕಚೇರಿಯಲ್ಲಿ ಮಾನಸಿಕ ಅಸ್ವಸ್ಥನಿಂದ ದಾಂಧಲೆ; ಆರೋಪಿ ಪೊಲೀಸ್ ವಶಕ್ಕೆ

Source: sonews | By Sub Editor | Published on 12th August 2017, 5:20 PM | Coastal News | State News | Don't Miss |

ಭಟ್ಕಳ: ಇಲ್ಲಿನ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಕಚೇರಿಗೆ ನುಗ್ಗಿ ಮಾನಸಿಕ ಅಸ್ವಸ್ಥನೆನ್ನಲಾದ ವ್ಯಕ್ತಿಯೋರ್ವ ದಾಂಧಲೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮುಂಜಾವ ನಡೆದಿದೆ.

 

ಆರೋಪಿಯನ್ನು ಬಳಿಕ ಭಟ್ಕಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯ ವೇಳೆ ಆತ ತನ್ನ ಹೆಸರು ಸುರೇಶ್ ಶೆಟ್ಟಿ ಎಂದು ಹೇಳಿಕೊಂಡಿದ್ದಾನೆ.

ಇಂದು ಮುಂಜಾನೆ 4:30ರ ಸುಮಾರಿಗೆ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಕಚೇರಿ ಆವರಣಕ್ಕೆ ನುಗ್ಗಿದ ಸುರೇಶ್ ಶೆಟ್ಟಿ ಅಲ್ಲಿ ಕರ್ತವ್ಯ ನಿರತನಾಗಿದ್ದ ವಾಚ್‌ಮೆನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದನೆನ್ನಲಾಗಿದೆ. ಬಳಿಕ ಕಚೇರಿಯ ಮುಖ್ಯದ್ವಾರದ ಬಾಗಿಲಿನ ಗಾಜನ್ನು ಪುಡಿಗೈದಿದ್ದಾನೆ.

ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕಾಗಮಿಸಿದ ಭಟ್ಕಳ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read These Next

ಕಾರವಾರ: ವಿದ್ಯಾಸಿರಿ  ಯೋಜನೆಗಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನ

ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರಕದೆ ಇರುವ ಹಾಗೂ ಮೆರಿಟ್ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿ   ತಿಂಗಳು ರೂ. 1500 ರಂತೆ ಶೈಕ್ಷಣಿಕ ...

ಮುಂಡಗೋಡ: ದಾಸ್ತಾನಿಟ್ಟ ಗೋಧಿಯಲ್ಲಿ ಹುಳುಗಳು-ಬಹಿರಂಗ ಪಡಿಸಿದ ಬಿಜೆಪಿ ಮುಖಂಡರು

ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ 8-10 ತಿಂಗಳಿಂದ ಶೇಖರಣೆ ಮಾಡಿದ್ದರಿಂದ ಬಡವರ ಪಡಿತರ ವಿತರಣೆಗೆ ಬಂದ ಗೋಧಿಯಲ್ಲಿ ಹುಳು-ಹುಪ್ಪಡಿ ...

ಶಿಡ್ಲಘಟ್ಟ:ರಾಜ್ಯದಲ್ಲಿ ಮಹಿಳೆಯರು ಶೈಕ್ಷಣಿಕ,ಸಾಮಾಜಿಕ,ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಲು ಮುನಿಯಪ್ಪ ಕರೆ

ಶಿಡ್ಲಘಟ್ಟ ತಾಲೂಕು ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳ್ಳೂರು ಗ್ರಾಮದ ವನಿತಾಶ್ರೀನಿವಾಸ್‍ಗೆ ...