'ಪಂಚಾಯತ ವ್ಯಾಪ್ತಿಯ ಅನಧೀಕೃತ ಕಟ್ಟಡದ ಶೀಘ್ರ ತೆರವು ಕ್ರಮಕ್ಕೆ ಅಧಿಕಾರಿಗಳಿಗೆ ಸದಸ್ಯರ ತಾಕೀತು'

Source: S.O. News Service | By MV Bhatkal | Published on 21st October 2018, 6:55 PM | Coastal News | Don't Miss |

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯದ್ ಅದಮ್ ಪಣಂಬೂರ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಂತದ ಸಾಮಾನ್ಯ ಸಭೆಯೂ ಪಂಚಾಯತ ಸಭಾಭವನದಲಿನಡೆಯಿತು.
ಸಭೆಯ ಆರಂಭದಲ್ಲಿ ಈ ಹಿಂದಿನ ಸಭೆಯ ನಡವಳಿಕೆಯನ್ನು ದೃಢೀಕರಿಸುವ ಬಗ್ಗೆ ಚರ್ಚೆಗಳಾಯಿತು. ಹಾಗೂ ಹಿಂದಿನ ತಿಂಗಳ ಜಮಾಖರ್ಚುಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧೀಕೃತ ಕಟ್ಟಡದ ಬಗ್ಗೆ ಸದಸ್ಯ ಮಂಗಳ ಗೊಂಡ ವಿಚಾರ ಪ್ರಸ್ತಾಪಿಸಿದ್ದು, ಜನರಿಗೆ ಸಮಸ್ಯೆ ನೀಡುವ ಕಾರ್ಯ ಪಂಚಾಯತ ಮಾಡುತ್ತಿದೆ ಎಂದು ಆರೋಪಿಸಿದರು. ಈ ವ್ಯಾಪ್ತಿಯಲ್ಲಿ ಕೇವಲ 2 ಕಟ್ಟಡಗಳು ಮಾತ್ರ ಅಧಿಕೃತವಾಗಿದ್ದು ಇನ್ನುಳಿದ 18ಕ್ಕೂ ಅಧಿಕ ಕಟ್ಟಡವೂ ಅನಧೀಕೃತವಾಗಿದೆ ಎಂದ ಅವರು ಹಾಗಿದ್ದರೆ ಅನಧೀಕೃತ ಕಟ್ಟಡಕ್ಕೆ ಪಂಚಾಯತ ಮುಖ್ಯಾಧಿಕಾರಿ ಜವಾಬ್ದಾರಿ ಪಡೆದುಕೊಳ್ಳುತ್ತಾರಾ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದರು. ಇಲ್ಲವಾದಲ್ಲಿ ಜನರಿಂದ ಪಂಚಾಯತ ಸದಸ್ಯರು ಬೈಗುಳ ಪಡೆದುಕೊಳ್ಳಬೇಕು ಎಂದರು. ಇದೇ ವೇಳೆ ಪಂಚಾಯತ್ ಇಂಜಿನಿಯರ ಸಭೆಗೆ ಗೈರು ಹಾಜರಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ವಾರದಲ್ಲಿ 3 ದಿನ ಪಂಚಾಯತನಲ್ಲಿ ಇರಬೇಕೆಂದು ಸಭೆಯಲ್ಲಿ ಸದಸ್ಯರು ತಾಕೀತು ಮಾಡಿದರು. ನಂತರ ವಿವಿಧ ಕಾಮಗಾರಿಯ ಟೆಂಡರ ಮಂಜೂರಾತಿ ಬಗ್ಗೆ ಚರ್ಚೆಗಳಾದವು.
2018-19ನೇ ಸಾಲಿಗೆ ಬೀದಿ ದೀಪದ ನಿರ್ವಹಣೆ ಕಾರ್ಯವನ್ನು ನಿರ್ವಹಿಸಲು ಕರೆದ ದರವಾರುಗಳನ್ನು ಮಂಜೂರಿಸುವ ಬಗ್ಗೆ ವಿಷಯ ಪ್ರಸ್ತಾಪವಾದಾಗ ಈ ಹಿಂದಿನ ಸಭೆಯಲ್ಲಿ ನಿರ್ವಹಣೆಯ ಬಾಕಿ ಹಣವನ್ನು ನೀಡಲಾಗಿದೆ ಎಂಬುದಾಗಿ ಸಭೆಗೆ ತಿಳಿಸಿದ್ದು ಆದರೆ ಇನ್ನು ತನಕ ಬಾಕಿ ಇರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಾರಿ ದುಬಾರಿ ವೆಚ್ಚದ ನಿರ್ವಹಣೆಗಿಂತ ಉತ್ತಮ ರೀತಿಯಲ್ಲಿ ಬೀದಿ ದೀಪದ ನಿರ್ವಹಣೆ ಮಾಡುವವವರಿಗೆ ನೀಡಬೇಕೆಂದು ಸದಸ್ಯ ಪುರಂದರ ಮೊಗೇರ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಪಂಚಾಯತ ವ್ಯಾಪ್ತಿಯ ಕೆಲವೊಂದು ಕಡೆಗಳಲ್ಲಿ ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಕಂಬವಿದ್ದರೆ ಕೇವಲ ಎರಡು ಕಂಬಕ್ಕೆ ಮಾತ್ರ ಬೀದಿ ದೀಪ ಅಳವಡಿಸುವ ಕ್ರಮಕ್ಕೆ ಸದಸ್ಯರು ವಿರೋಧಿಸಿದ್ದು ಪಂಚಾಯತ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಎಲ್ಲಾ ಕಂಬಗಳಿಗೂ ಬೀದಿ ದೀಪಳವಡಿಸುವಂತೆ ಸದಸ್ಯ ಮಂಗಳ ಗೊಂಡ ತಾಕೀತು ಮಾಡಿದರು. ತಾಲೂಕಾ ಮಟ್ಟದ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೇವಲ ರಸ್ತೆಯ ಅಕ್ಕಪಕ್ಕದ ಸ್ವಚ್ಛಮಾಡಿ ತೆರಳುತ್ತಾರೆ ಇದು ಯಾವ ಮಟ್ಟಿನ ಸ್ವಚ್ಚತಾ ಕಾರ್ಯ ಎಂದು ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಅಭಿಪ್ರಾಯಪಟ್ಟರು. 
ಇನ್ನು ಪಂಚಾಯತಲ್ಲಿ ನೀರು ಸರಬರಾಜು ವಿಭಾಗದಲ್ಲಿನ ಸಿಬ್ಬಂದಿಗಳು ಸಾಕಷ್ಟು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು ಪಂಚಾಯತನಿಂದಲೇ ಸಂಬಳ ನೀಡಲಾಗುತ್ತಿದೆ. ಆದರೆ ಈಗ ಜಿಲ್ಲಾಧಿಕಾರಿಗಳು ಅವರನ್ನು ಕೆಲಸದಿಂದ ಕೈಬಿಡುವಂತೆ ಸೂಚನೆ ನೀಡಿ ತೆರವಾದ ಜಾಗಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ತಿಳಿಸಿರುವ ಕ್ರಮ ಸಮಂಜಸವಲ್ಲ ಎಂದು ಸದಸ್ಯ ಅಬ್ದುಲ ರಹೀಂ ವಿರೋಧಿಸಿದ್ದು ಪಂಚಾಯತ್ ಮುಖ್ಯಾಧಿಕಾರಿ ಅವರು ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿದರೆ ಈ ರೀತಿಯ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು. 
ಸಮಾನ ವೇತನದಡಿಯಲ್ಲಿ ಸಂಬಳವನ್ನು ಏರಿಕೆ ಮಾಡಿ ಈ ಹಿಂದೆ ಕೆಲಸ ನಿರ್ವಹಿಸುವವರನ್ನೇ ಮುಂದುವರೆಸುವಂತೆ ಪಂಚಾಯತನಿಂದ ಸದಸ್ಯರ ನಿಯೋಗವನ್ನು ಜಿಲ್ಲಾಧಿಕಾರಿಗಳ ಬಳಿ ತೆಗೆದುಕೊಂಡು ಹೋಗಬೇಕು ಎಂದು ಅಧ್ಯಕ್ಷ ಸೈಯದ್ ಅದಮ್ ಪಣಂಬೂರ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ಸಭೆಯಲ್ಲಿ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು. 
ಈ ಸಂಧರ್ಭದಲ್ಲಿ ಪಂಚಾಯತ್ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ ಸೇರಿದಂತೆ ಪಂಚಾಯತ ಸರ್ವ ಸದಸ್ಯರು ಉಪಸ್ಥಿತರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...