ಆಡಳಿತ ಹಾಗೂ ವಿರೋಧ ಪಕ್ಷಗಳ ವಾಗ್ವಾದದ ನಡುವೆಯೇ ಸಭಾತ್ಯಾಗಗೈದ ವಿರೋಧಪಕ್ಷದ ಸದಸ್ಯರು

Source: sonews | By Staff Correspondent | Published on 25th September 2018, 11:36 PM | State News | Don't Miss |

ಶ್ರೀನಿವಾಸಪುರ: ಪುರಸಭೆಯ ನಡಾವಳಿ ಪುಸ್ತಕ ಹಾಜರು ಪಡಿಸದ ಕಾರಣ ವಿರೋಧ ಪಕ್ಷದ ಸಭಾತ್ಯಾಗ, ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವಿಷಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವ ವಾಗ್ವಾದ, ಮುಸಾಫರ್ಖಾನಾ ವಾಣಿಜ್ಯ ಕಟ್ಟಡದ ಅಂಗಡಿ ಮಳಿಗೆಗಳನ್ನು ಹರಾಜು ಹರಾಜು ಹಾಕಲು ಒಪ್ಪಿಗೆ. ಇವಿಷ್ಟು ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪುರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯ ಮುಖ್ಯಾಂಶಗಳು.

ಸಭೆ ಪ್ರಾರಂಭವಾಗುತ್ತಿದ್ದಂತೆ, ವಿರೋಧ ಪಕ್ಷವಾದ ಜೆಡಿಎಸ್ಸದಸ್ಯರು ನಗರೋತ್ಥಾನ ಯೋಜನೆಯಡಿ ತಮ್ಮ ವಾರ್ಡ್ಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು. ಆಡಳಿತ ಪಕ್ಷದ ಸದಸ್ಯ ಬಿ.ಎಂ.ಪ್ರಕಾಶ್ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಕಚ್ಚಾಟ ಬೇಡ. ಸಮಸ್ಯೆ ಇರುವ ಕಡೆ, ಮುಖ್ಯವಾಗಿ ಹೊಸ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಆಧ್ಯತೆ ನೀಡಿ ಎಂದು ಹೇಳಿದರು.

ಪುರಸಭೆಯ ಉಪಾಧ್ಯಕ್ಷ ಟಿ.ಎಂ.ಬಿ ಮುಕ್ತಿಯಾರ್ಮಧ್ಯ ಪ್ರವೇಶಿಸಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ, ಆಯಾ ವಾಡ್ಡ್ ಸದಸ್ಯರ ಅಭಿಪ್ರಾಯ ಕೇಳಿ, ಅವರು ಹೇಳಿದ ಕಡೆ ಕಾಮಗಾರಿ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಸೂಚನಾ ಪತ್ರದಲ್ಲಿ ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವ ವಿಚಾರ ಬಂದಾಗ, ಜೆಡಿಎಸ್ಸದಸ್ಯರಾದ ಶ್ರೀನಿವಾಸಪ್ಪ, ಇಮ್ರಾನ್ಪಾಷ, ರಾಘವರೆಡ್ಡಿ ಸಭೆಯಲ್ಲಿ ನಡಾವಳಿ ಪುಸ್ತಕ ಹಾಜರುಪಡಿಸುವಂತೆ ಆಗ್ರಹಿಸಿದರು. ನಡಾವಳಿ ಪುಸ್ತಕ ಅಧ್ಯಕ್ಷರ ಬಳಿಯಿದೆ ಎಂದು ಹೇಳಿದಾಗ, ಕೆಂಡಾ ಮಂಡಲವಾದ ಅವರು, ಅದನ್ನು ವಿರೋಧಿಸಿ ಇತರ ಸದಸ್ಯರೊಂದಿಗೆ ಸಭೆಯಿಂದ ಹೊರ ನಡೆದರು.

ಘಟನೆಯಿಂದ ಬೇಸರಗೊಂಡ ಆಡಳಿತ ಪಕ್ಷದ ಸದಸ್ಯ ಬಿ.ಎಂ.ಪ್ರಕಾಶ್, ಎಲ್ಲದಕ್ಕೂ ಪಕ್ಷದ ಹೆಸರಲ್ಲಿ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಭೆಯಲ್ಲಿ ನಡಾವಳಿ ಪುಸ್ತಕ ಹಾಜರು ಪಡಿಸಲು ಆಗುವುದಿಲ್ಲ ಎಂದರೆ ಹೇಗೆ? ಎಂದು ಗುಡುಗಿದರು.

ಸಭೆಗೆ ನಡಾವಳಿ ಪುಸ್ತಕ ತಂದ ಬಳಿಕ, ಪುರಸಭೆಯ ಮುಖ್ಯಾಧಿಕಾರಿ ವಿ.ಸತ್ಯನಾರಾಯಣ, ಸಭಾತ್ಯಾಗ ಮಾಡಿದ್ದ ವಿರೋಧ ಪಕ್ಷದ ಸದಸ್ಯರ ಮನವೊಲಿಸಿ ಸಭೆಗೆ ಕರೆತಂದರು.

ನಂತರ ಯಾವುದೇ ಸಮಸ್ಯೆ ಇಲ್ಲದೆ ನಡೆದ ಸಭೆಯಲ್ಲಿ, ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು, ಪುರಸಭೆ ಲೆಕ್ಕ ತಪಾಸಣೆ ಶುಲ್ಕ ಪಾವತಿಸಲು, ವಿವಿಧ ತೆರಿಗೆಗಳನ್ನು ಸರ್ಕಾರಕ್ಕೆ ಪಾವತಿಸಲು, ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಅನುಮೋದನೆ ನೀಡಲಾಯಿತು.

ಪುರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಸುಧಾರಿಸಲು, ನೀರು ಸರಬರಾಜು ವ್ಯವಸ್ಥೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸುವ ಬಗ್ಗೆ ಚರ್ಚಿಸಲಾಯಿತು. ಪಟ್ಟಣದ ಸುತ್ತಲಿನ ರಸ್ತೆಗಳನ್ನು ಕಸಮುಕ್ತ ರಸ್ತೆಗಳನ್ನಾಗಿ ಘೋಷಣೆ ಮಾಡಿ, ಸಿಸಿ ಕ್ಯಾಮೆರಾ ಅಳವಡಿಸಲು, ಕಸ ವಿಂಗಡಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಿರ್ಣಯಿಸಲಾಯಿತು.

ಹಳೆ ಪುರಸಭೆ ಕಟ್ಟಡದ ಮುಂಭಾಗದಲ್ಲಿ ಅಶ್ವತ್ಥಕಟ್ಟೆ ನಿರ್ಮಿಸಲು, ನಿಧಿ ಪಾವತಿ ಅನುಮೋದಿಸಲು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು, ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಸಿಕೊಡಲು, ಅಂಗಡಿ ಮಳಿಗೆ ಹರಾಜು ಮಾಡಲು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಒಪ್ಪಿಗೆ ಸೂಚಿಸಲಾಯಿತು.

ಮುಸಾಫರ್ಖಾನಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡದಲ್ಲಿನ ಅಂಗಡಿ ಮಳಿಗೆಗಳನ್ನು ನಿಯಮಾನುಸಾರ ಹರಾಜು ಹಾಕಲು ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಕಟ್ಟಡಕ್ಕೆ ನಿವೇಶನ ಒದಗಿಸಲು ಸಭೆ ಒಪ್ಪಿಗೆ ಸೂಚಿಸಿತು. ಒಟ್ಟಾರೆ ಸೂಚನಾ ಪತ್ರದಲ್ಲಿದ್ದ 47 ಅಂಶಗಳ ಪೈಕಿ 46ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಸದಸ್ಯರಾದ ಸತ್ಯನಾರಾಯಣ, ವಿ.ಶಂಕರ್‌, ರಾಘವರೆಡ್ಡಿ, ಮುನಿರಾಜು, ಜಯಣ್ಣ, ರಮೇಶ್‌, ವೆಂಕಟೇಶರೆಡ್ಡಿ, ಇಮ್ರಾನ್ಪಾಷ, ಶಬ್ಬೀರ್‌, ಏಜಾಜ್ಪಾಷ, ಶ್ರೀನಿವಾಸರೆಡ್ಡಿ, ಬಿ.ಎಂ.ಪ್ರಕಾಶ್‌, ಪದ್ಮಾವತಿ, ಕಲಾವತಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ಮುಖ್ಯಾಧಿಕಾರಿ ವಿ.ಸತ್ಯನಾರಾಯಣ, ಅಧಿಕಾರಿಗಳಾದ ಗಂಗಿರೆಡ್ಡಿ, ಶ್ರೀನಿವಾಸ್‌, ಕೆ.ಜಿ.ರಮೇಶ್‌, ರೇಣುಕಾ, ದೀಪಾ ಇದ್ದರು.

 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...