ಗಂಜಿ ಕೇಂದ್ರ ಪದಕ್ಕೆ ಸರ್ಕಾರದಿಂದ ಬ್ರೇಕ್; ಪರಿಹಾರ ಕೇಂದ್ರ ಬಳಸುವಂತೆ ಆದೇಶ

Source: sonews | By sub editor | Published on 20th August 2018, 11:43 PM | Coastal News | State News | Don't Miss |

ಮಂಗಳೂರು : ನೆರೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ತೆರೆದಿರುವ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಮಾಧ್ಯಮಗಳಲ್ಲಿ ‘ ಗಂಜಿ ಕೇಂದ್ರ ‘ ಎಂದು ಬರೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಾಗು ವಿಶೇಷವಾಗಿ ನಿರಾಶ್ರಿತರಿಂದ ಆಕ್ಷೇಪಣೆ ಕೇಳಿ ಬರುತ್ತಿದ್ದು, ಇನ್ನು ಮುಂದೆ ಎಲ್ಲ ಮಾಧ್ಯಮದವರು ನಿರಾಶ್ರಿತರ ಭಾವನೆಗಳಿಗೆ ಬೆಲೆ ನೀಡಿ ಗಂಜಿ ಕೇಂದ್ರ ಎನ್ನುವುದರ ಬದಲಿಗೆ ‘ ಪರಿಹಾರ ಕೇಂದ್ರ ‘ ಎನ್ನುವ ಪದ ಬಳಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿನಂತಿಸಿಕೊಂಡಿದೆ.

ಆಂಗ್ಲ ಭಾಷೆಯಲ್ಲಿ ಕೂಡ ಇದನ್ನು ‘ Relief center ‘ ಎಂದೇ ಕರೆಯಲಾಗುತ್ತಿದ್ದು, ಭಾಷಾಂತರದ ದೃಷ್ಟಿಯಿಂದ ಕೂಡ ‘ಪರಿಹಾರ ಕೇಂದ್ರ’ ಎನ್ನುವ ಪದ ಸರಿ ಹೊಂದುತ್ತದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಗಂಜಿ ಕೇಂದ್ರ ಎನ್ನುವುದರ ಬದಲಿಗೆ ‘ ಪರಿಹಾರ ಕೇಂದ್ರ ‘ ಎನ್ನುವ ಪದ ಬಳಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ . ಆರ್ ವಿಶುಕುಮಾರ್ ಅವರು ತಮ್ಮ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...