ಮ್ಯಾಥ್ಯೂ ಚಂಡಮಾರುತಕ್ಕೆ ಹೈಟಿಯಲ್ಲಿ 990 ಕ್ಕೂ ಸಾವು

Source: S O News service | By sub editor | Published on 8th October 2016, 10:34 PM | Global News | Don't Miss |

*ಸಾವಿರಾರು ಮಂದಿ ನಿರ್ವಸಿತರು

*ಗಾಳಿಯ ವೇಗ ಪ್ರತಿ ಗಂಟೆಗೆ ೨೨೩ಕಿಮೀ

*ಹೈಟಿ 2010ರ ಭೂಕಂಪ ವಿನಾಶದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ.

*ಮತ್ತೊಂದು ಘೋರ ದುರಂತ

ಪೋರ್ಟ್ ಒ ಪ್ರಿನ್ಸ್,: ಶುಕ್ರವಾರ ಅಮೆರಿಕದ ಫ್ಲೋರಿಡಾವನ್ನು ಹಾದು ಹೋದ ಮ್ಯಾಥ್ಯೂ ಚಂಡಮಾರುತವು ಅದಕ್ಕೂ ಮುನ್ನ ಕೆರಿಬ್ಬಿಯನ್ ರಾಷ್ಟ್ರ ಹೈಟಿಯಲ್ಲಿ ಭಾರೀ ವಿನಾಶವನ್ನೇ ಮಾಡಿದೆ. ಅಮೆರಿಕಾ ಖಂಡದಲ್ಲಿ ಅತ್ಯಂತ ಬಡರಾಷ್ಟ್ರವಾಗಿರುವ ಹೈಟಿಗೆ ಈ ಚಂಡಮಾರುತ ಭಾರೀ ಆಘಾತವನ್ನು ನೀಡಿದ್ದು, ಸುಮಾರು 900 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಸಾವಿರ ಜನರು ಮನೆಮಠಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಚಂಡಮಾರುತವೀಗ ಅಮೆರಿಕದ ಜಾರ್ಜಿಯಾ ಸಮೀಪ ಸಾಗುತ್ತಿದ್ದು, ಅದರ ಗಾಳಿಯ ವೇಗ ಆರಂಭದ ಪ್ರತಿ ಗಂಟೆಗೆ 223 ಕಿ.ಮೀ.ನಿಂದ 19 ಕಿ.ಮೀ.ಗೆ ತಗ್ಗಿದೆ.

 

ಚಂಡಮಾರುತದ ಅಬ್ಬರಕ್ಕೆ ದೇಶದ ಇತರ ಭಾಗಗಳಿಂದ ಸಂಪರ್ಕವನ್ನು ಕಳೆದುಕೊಂಡಿದ್ದ ದೂರದ ಪ್ರದೇಶಗಳಲಿ ್ಲಸಂಭವಿಸಿರುವ ಸಾವುನೋವುಗಳು ಇದೀಗ ಬೆಳಕಿಗೆ ಬರುತ್ತಿದ್ದು, ಶುಕ್ರವಾರದವರೆಗೆ ಕನಿಷ್ಠ 877 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಥ್ಯೂ ಚಂಡಮಾರುತ ಅಮೆರಿಕದ ಕರಾವಳಿಗೆ ಅಪ್ಪಳಿಸುವ ಭೀತಿಯಲ್ಲಿ ಅಧ್ಯಕ್ಷ ಒಬಾಮಾ ಅವರು ಶುಕ್ರವಾರ ತುರ್ತು ಸ್ಥಿತಿಯನ್ನು ಘೋಷಿಸಿದ್ದರು. ಫ್ಲೋರಿಡಾದಿಂದ ಜಾರ್ಜಿಯಾದವರೆಗೆ ಮತ್ತು ದಕ್ಷಿಣ ಕೆರೋಲಿನಾದಿಂದ ಉತ್ತರ ಕೆರೋಲಿನಾವರೆಗೆ ಅಮೆರಿಕದ ಕರಾವಳಿಯಲ್ಲಿನ ಜನರನ್ನು ತೆರವುಗೊಳಿಸಲಾಗಿದೆ.

 ಚಂಡಮಾರುತ ದುರ್ಬಲಗೊಂಡಿದೆ ಎಂದು ನೆಮ್ಮದಿಯ ಭಾವನೆಗೆ ಪಕ್ಕಾಗದಂತೆ ಜನತೆಯನ್ನು ಆಗ್ರಹಿಸಿರುವ ಒಬಾಮಾ ಸುರಕ್ಷತಾ ಸೂಚನೆಗಳಿಗೆ ಕಿವಿಗೊಡುವಂತೆ ಕೋರಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಅಪ್ಪಳಿಸಿದ್ದ ಸ್ಯಾಂಡಿ ಚಂಡಮಾರುತದ ಬಳಿಕ ಅಮೆರಿಕವನ್ನು ಕಾಡಿರುವ ಅತ್ಯಂತ ಭೀಕರ ಚಂಡಮಾರುತವಾಗಿರುವ ಮ್ಯಾಥ್ಯೂ ಕುರಿತು ತುರ್ತು ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಒಬಾಮಾ ಅವರು, ಪ್ರಾಣ ಹಾನಿ ಮತ್ತು ಆಸ್ತಿ ನಷ್ಟದ ಭೀತಿ ಇನ್ನೂ ದೂರವಾಗಿಲ್ಲ ಎಂದು ತಿಳಿಸಿದರು.

ಮ್ಯಾಥ್ಯೂ ಚಂಡಮಾರುತ ಮಂಗಳವಾರ ಪ್ರತಿ ಗಂಟೆಗೆ 233 ಕಿ.ಮೀ.ವೇಗದ ಗಾಳಿಯೊಡನೆ ಹೈಟಿಯನ್ನು ಅಪ್ಪಳಿಸಿತ್ತು. ಜೊತೆಗೆ ಧಾರಾಕಾರ ಮಳೆಯೂ ಇತ್ತು. ಎತ್ತರದ ಸಮುದ್ರದ ಅಲೆಗಳು ತೀರದಲ್ಲಿನ ಹಲವಾರು ಗ್ರಾಮಗಳನ್ನು ಮುಳುಗಿಸಿದ್ದು, ಸುಮಾರು 65,000 ಜನರು ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಅವರಿಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

 ಹೈಟಿ 2010ರಲ್ಲಿ ಸಂಭವಿಸಿದ್ದ ಭೂಕಂಪವು ಉಂಟು ಮಾಡಿದ್ದ ವಿನಾಶದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ,ಅಷ್ಟರಲ್ಲೇ ಮ್ಯಾಥ್ಯೂ ಚಂಡಮಾರುತ ಅದಕ್ಕೆ ಮೇಲೇಳಲಾಗದಂತಹ ಪೆಟ್ಟನ್ನು ನೀಡಿದೆ.

ಅತ್ತ ಅಮೆರಿಕದ ಫ್ಲೋರಿಡಾ ಕರಾವಳಿಯನ್ನು ಪ್ರತಿ ಗಂಟೆಗೆ 195 ಕಿಮೀ.ವೇಗದಲ್ಲಿ ಹಾದು ಹೋದ ಚಂಡಮಾರುತ ಅಲ್ಲಿ ಭೂಮಿಗೆ ಅಪ್ಪಳಿಸಿಲ್ಲ. ಅಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ.

Read These Next