ಕುಮಟಾ: ಭಾರಿಮಳೆಗೆ ಗುಡ್ಡ ಕುಸಿತ ಮೂವರು ಮಕ್ಕಳ ಸಾವು; ೭ಗಂಬೀರ

Source: sonews | By sub editor | Published on 11th June 2017, 11:26 PM | Coastal News | State News | National News | Incidents | Don't Miss |

ಕುಮಟಾ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರಿನ ಅರ್ಭಟಕ್ಕೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಬಳಿ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ್ದು ೭ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 
ಮೃತ ಬಾಲಕರನ್ನು ಧನುಷ್ ಮಂಜುನಾಥ್ ಅಂಬಿಗಾ (೦೧), ಯಟೆನ್ ನಾರಾಯಣ್ ಅಂಬಿಗಾ (೦೭) ಮತ್ತು ಭಾವ್ಯ ನಾರಾಯಣ್ ಅಂಬಿಗ (೦೮) ಎಂದು ಗುರುತಿಸಲಾಗಿದ್ದು ಈ ಮೂವರು ಬಾಲಕರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. 
ಕರಾವಳಿ ಭಾಗದಲ್ಲಿ ಮುಂಗಾರಿನ ಅಬ್ಬರ ಜೋರಾಗಿದ್ದು ಹೆದ್ದಾರಿ ಪಕ್ಕದಲ್ಲಿರುವ ಗುಡ್ಡದಲ್ಲಿ ಕುಸಿತಕಂಡು ಬಂದಿದೆ. ಇದರಿಂದಾಗಿ ಹೆದ್ದಾರಿ ಬಳಿ ವಾಸಿಸುತ್ತಿರುವವರ ಐದು ಕುಟುಂಬದ ಮನೆ ಮೇಲೆ ಗುಡ್ಡ ಕುಸಿದಿದ್ದು ಈ ದುರ್ಘಟನೆ ಸಂಭವಿಸಿದೆ ಕಾರಣವೆನ್ನಲಾಗಿದೆ. 

ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಐ‌ಆರ‍್ಬಿ ಕಂಪನಿಯ ನಿರ್ಲಕ್ಷತನದಿಂದಾಗಿ ನಿರ್ಮಾಣಗೊಂಡಿರುವ ಹೆದ್ದಾರಿ ಅಲ್ಲಲ್ಲಿ ಬಿರುಕುಬಿಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿಯಲ್ಲಿನ ಬಿರುಕಿನಿಂದಾಗಿ ವಾಹನಗಳ ಸಂಚಾರಕ್ಕೆ ತೊಡಕ್ಕಾಗಿದ್ದು ಹೆದ್ದಾರಿ ಜಾಂ ಆಗಲು ಕಾರಣವಾಗಿದೆ.  

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...