ಸೈಕಲ್ ತುಳಿದು ತರಕಾರಿ ಗಿಡಗಳಿಗೆ ನೀರುಣಿಸಿದ ವಿದ್ಯಾರ್ಥಿ ಮನ್ವಿತ್ ಶಿವರಾಮ ನಾಯ್ಕ

Source: sonews | By Staff Correspondent | Published on 22nd December 2018, 7:54 PM | Coastal News | State News | Special Report | Don't Miss |

ಭಟ್ಕಳ: ಶಾಲೆಗೆ ಹೋಗುವ ಮಕ್ಕಳು ನಡೆದು ಸುಸ್ತಾಗದಿರಲಿ ಎಂದು ಸರಕಾರ ಸೈಕಲ್ ನೀಡುತ್ತಿದೆ. ಆದರೆ ಸೈಕಲ್ ತುಳಿದು ಶಾಲೆಯನ್ನು ತಲುಪುತ್ತಿದ್ದ ವಿದ್ಯಾರ್ಥಿಯೋರ್ವ ಅದೇ ಸೈಕಲ್‍ನಿಂದ ಶಾಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತರಕಾರಿ ಗಿಡಗಳಿಗೆ ನೀರುಣಿಸುವ ಸಾಧನವನ್ನು ಸಿದ್ಧಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನೆಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಮನ್ವಿತ್ ಶಿವರಾಮ ನಾಯ್ಕ ಈ ನೀರೆತ್ತುವ ಸೈಕಲ್‍ನ್ನು ಚಲಾವಣೆಗೆ ತಂದವನಾಗಿದ್ದಾನೆ. ಈತ ಕೃಷಿಕ ಶಿವರಾಮ ಹಾಗೂ ಗೀತಾ ದಂಪತಿಗಳ ಪುತ್ರನಾಗಿದ್ದಾನೆ. ಭಟ್ಕಳ ಹೆಬಳೆ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸೀಮಿತ ನೀರಿನ ಲಭ್ಯತೆಯನ್ನು ಬಳಸಿಕೊಂಡು ಹರಿಗೆ, ಮೂಲಂಗಿ, ಸಬ್ಬಸಿಗೆ ಇತ್ಯಾದಿ ತರಕಾರಿಗಳನ್ನು ಮೊದಲಿನಿಂದಲೂ  ಬೆಳೆಯುತ್ತ ಬಂದಿದ್ದು, ಕಾಲಕ್ರಮೇಣ ನೀರು ಪೂರೈಸುವುದೇ ಕೃಷಿಕರಿಗೆ ಸವಾಲಾಗಿ ಪರಿಣಮಿಸುತ್ತಿದೆ. ತರಕಾರಿ ಗಿಡಗಳ ಮಗ್ಗುಲಿನಲ್ಲಿಯೇ ಗದ್ದೆಯಲ್ಲಿ ಹೊಂಡವನ್ನು ಕೊರೆದು ಸಿಕ್ಕಷ್ಟು ನೀರನ್ನು ಕೊಡದಲ್ಲಿ ತುಂಬಿಸಿಕೊಂಡು ಗಿಡಗಳಿಗೆ ನೀರುಣಿಸಲಾಗುತ್ತಿದೆ. ತರಕಾರಿ ಬೆಳೆಯುವ ಮನೆ ಮಂದಿಗೆ ನೀರೆತ್ತುವುದೇ ಹೊರೆಯಾಗುವುದನ್ನು ಗಮನಿಸಿದ ವಿದ್ಯಾರ್ಥಿ ಮನ್ವಿತ್, ಆನ್‍ಲೈನ್ ಹುಡುಕಾಟದಲ್ಲಿ ನೀರೆತ್ತುವ ಸೈಕಲ್ ತಂತ್ರಜ್ಞಾನವನ್ನು ತಲೆಗೆ ತುಂಬಿಸಿಕೊಂಡಿದ್ದಾನೆ. ಆತನಿಗೆ ಶಾಲೆಯ ವಿಜ್ಞಾನ ಶಿಕ್ಷಕಿಯಾಗಿರುವ ಜ್ಯೋತಿ, ಶಾಲಾ ಮುಖ್ಯೋಪಾಧ್ಯಾಯ ಡಿ.ಕೆ.ಅಳ್ವೆಕೋಡಿ, ಶಿಕ್ಷಕರಾದ ವಸಂತ ನಾಯ್ಕ, ಮತ್ತಿತರರ ನೆರವೂ ಸಿಕ್ಕಿದೆ. ಸೈಕಲ್‍ಗೆ ಮೋಟಾರ್ ಅಳವಡಿಸಿ, ಫೂಟ್‍ವಾಲ್ವ್‍ನ್ನು ಹೊಂಡಕ್ಕೆ ಇಳಿ ಬಿಟ್ಟು ಸೈಕಲ್ ತುಳಿದು ನೀರನ್ನು ಮೇಲಕ್ಕೆ ತರುವಲ್ಲಿ ಸಫಲನಾಗಿದ್ದಾನೆ. ಇದರಿಂದ ಈ ಭಾಗದಲ್ಲಿ ಗಿಡಗಳಿಗೆ ನೀರುಣಿಸಲು ಸುಲಭದ ತಂತ್ರಜ್ಞಾನ ಸಿಕ್ಕಂತಾಗಿದೆ! ಖರ್ಚುವೆಚ್ಚಗಳು ಕಡಿಮೆ ಆಗುವುದರಿಂದ ನೇರೆತ್ತುವ ಸೈಕಲ್ ಬಡ ರೈತನ ಸ್ನೇಹಿತ ಎಂದರೆ ತಪ್ಪೇನೂ ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ ಮನ್ವಿತ್, ಸೈಕಲ್ ತುಳಿದು ನೀರು ಎತ್ತುವುದರಿಂದ ಪಾಲಕರಿಗೆ ಸಹಾಯ ಮಾಡಿದಂತಾಗುತ್ತದೆ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸೈಕಲ್ ತುಳಿದು ನೀರು ಎತ್ತಬಹುದು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್‍ನ ದಾರಿ ಹಿಡಿಯುವವರು ಈ ಸೈಕಲ್ ತುಳಿದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ವಿದ್ಯುತ್ ಸಂಪರ್ಕ ಕಷ್ಟ ಇರುವ ಗದ್ದೆಗಳಲ್ಲಿ ಈ ಸೈಕಲ್ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾನೆ. ಈತನ ಉತ್ಸಾಹಕ್ಕೆ ತಲೆದೂಗದೇ ನಮಗೆ ಬೇರೆ ದಾರಿ ಇಲ್ಲ! ಅಂದ ಹಾಗೆ ಮನ್ವಿತ್ ಓದುತ್ತಿರುವ ಹೊನ್ನೆಗದ್ದೆ ಶಾಲೆಯ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಗದ್ದೆ ನಾಟಿ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
 

ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್‍ನ ದಾರಿ ಹಿಡಿಯುವವರು ಈ ಸೈಕಲ್ ತುಳಿದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ವಿದ್ಯುತ್ ಸಂಪರ್ಕ ಕಷ್ಟ ಇರುವ ಗದ್ದೆಗಳಲ್ಲಿ ಈ ಸೈಕಲ್ ಉಪಯೋಗಕ್ಕೆ ಬರುತ್ತದೆ.
    - ನೀರೆತ್ತುವ ಸೈಕಲ್‍ನ ಒದಗಿಸಿದ ವಿದ್ಯಾರ್ಥಿ ಮನ್ವಿತ್


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...