ಗೋವಾ ಸಿಯಂ ಅಸೌಖ್ಯ; ಸರ್ಕಾರ ರಚನೆಗೆ ಕಾಂಗ್ರೇಸ್ ಹಕ್ಕುಮಂಡನೆ

Source: sonews | By Staff Correspondent | Published on 17th September 2018, 6:33 PM | National News | Don't Miss |

ಪಣಜಿ : ಅಸೌಖ್ಯದಿಂದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಗೋವಾದ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಇಂದು ರಾಜ್ಯಪಾಲೆ ಮೃದುಲಾ ಸಿನ್ಹಾಅವರಿಗೆ ಮನವಿ ಸಲ್ಲಿಸಿ ಪರ್ಯಾಯ ಸರಕಾರ ರಚಿಸಲು ತನ್ನ ಹಕ್ಕು ಮಂಡಿಸಿದೆ.

ಪಕ್ಷಕ್ಕೆ ಅವಕಾಶ ನೀಡಿದರೆ ಸದನದಲ್ಲಿ ಬಹುಮತ ಸಾಬೀತು ಪಡಿಸುವುದು ಎಂದೂ ಪಕ್ಷ ರಾಜ್ಯಪಾಲರಿಗೆ ತಿಳಿಸಿದೆ.

ಮುಖ್ಯಮಂತ್ರಿಯ ಅಸೌಖ್ಯದಿಂದಾಗಿ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಲು ಬಿಜೆಪಿ ಹೈಕಮಾಂಡ್ ತನ್ನ ಮೂವರು ಹಿರಿಯ ನಾಯಕರಾದ ರಾಮ್ ಲಾಲ್, ಬಿ ಎಲ್ ಸಂತೋಷ್ ಹಾಗೂ ವಿನಯ್ ಪುರಾಣಿಕ್ ಅವರನ್ನು ಪಣಜಿಗೆ ಕಳುಹಿಸಿದ ಸಂದರ್ಭ ಈ ಬೆಳವಣಿಗೆ ನಡೆದಿದೆ. ಪಾರಿಕ್ಕರ್ ಅವರು ಸದ್ಯ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಲ್ವತ್ತು ಸದಸ್ಯರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 16 ಸದಸ್ಯರಿದ್ದು  ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನಿಸಬೇಕೆಂದು ಆಗ್ರಹಿಸಲಾಗಿದೆ ಎಂದು ವಿಪಕ್ಷ ನಾಯಕ ಚಂದ್ರಕಾಂತ್ ಕವ್ಲೇಕರ್ ಹೇಳಿದ್ದಾರೆ.

ಬಿಜೆಪಿಗೆ ರಾಜ್ಯದಲ್ಲಿ 14 ಸದಸ್ಯರ ಬಲವಿದ್ದು ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಎಂಜಿಪಿ ಜತೆ ಅದು ಮೈತ್ರಿ ಸಾಧಿಸಿದೆ. ಈ ಪಕ್ಷಗಳ ಹೊರತಾಗಿ ಮೂವರು ಪಕ್ಷೇತರ ಶಾಸಕರು ಹಾಗೂ ಎನ್‍ಸಿಪಿಯ ಒಬ್ಬ ಶಾಸಕ ಕೂಡಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದಲ್ಲಿ ಎಲ್ಲಾ 16 ಪಕ್ಷದ ಶಾಸಕರಿದ್ದರು. ರಾಜ್ಯದ ಆಡಳಿತ ಮೈತ್ರಿಕೂಟದಲ್ಲಿ ಸಹಮತವಿಲ್ಲದೇ ಇರುವುದರಿಂದ ವಿಧಾನಸಭೆ ವಿಸರ್ಜಿಸದಂತೆ ನಿಯೋಗ ರಾಜ್ಯಪಾಲರಿಗೆಮನವಿ ಮಾಡಿದೆ.

ಗೋವಾ ಸರಕಾರ ಸ್ಥಿರವಾಗಿದ್ದು ನಾಯಕತ್ವ ಬದಲಾವಣೆಗೆ ಯಾವುದೇ ಆಗ್ರಹವಿಲ್ಲ ಎಂದು ಬಿಜೆಪಿ ನಾಯಕ ರಾಮ್ ಲಾಲ್ ಈ ಹಿಂದೆ ಹೇಳಿದ್ದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...