ದೀಪಕ್ ಕೊಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡದ ಆರೋಪದಿಂದ ಕುಮಾರಸ್ವಾಮಿ ಯೂಟರ್ನ್ ಹೊಡೆದರೆ ?

Source: sonews | By Staff Correspondent | Published on 9th January 2018, 12:22 AM | State News | Don't Miss |

varthabharati.in ಎಕ್ಸ್ ಕ್ಲೂಸಿವ್ ಸಂರ್ದಶನದಲ್ಲಿ ಕುಮಾರ್ ಸ್ವಾಮಿ

ದೀಪಕ್ ಕೊಲೆ ಬಗ್ಗೆ ಕುಮಾರಸ್ವಾಮಿಗೆ ಸಿಕ್ಕಿರುವ ಮಾಹಿತಿ ಏನು ?

ಯಾರದೋ ಕುಮ್ಮಕ್ಕಿನಿಂದ ಹೇಳಿಕೆ ನೀಡಿದರೆ ಮಾಜಿ ಸಿಎಂ ?

ದಾಖಲೆ ಕೇಳಿದ ಸಿಎಂಗೆ ಕೊಡ್ತಾರಾ ಮಾಜಿ ಸಿಎಂ ? 

ಕುಮಾರಸ್ವಾಮಿಯನ್ನು ತನಿಖೆ ಮಾಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಎಚ್ ಡಿ ಕೆ ಪ್ರತಿಕ್ರಿಯೆ ಏನು ? 

ಇಲ್ಲಿದೆ ಎಲ್ಲ ಪ್ರಶ್ನೆಗಳಿಗೆ ಉತ್ತರ 

ಮಂಗಳೂರು : ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿ ಬೆಳೆದಿದೆ.

ಮೈಸೂರಲ್ಲಿ ಸೋಮವಾರ ಬೆಳಗ್ಗೆ ಮಾತನಾಡಿದ ಕುಮಾರಸ್ವಾಮಿ, ದೀಪಕ್  ಕೊಲೆ ಕೇಸಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಹೇಳಿದ್ದು ವರದಿಯಾಗಿತ್ತು. ಬಳಿಕ ಈ ಬಗ್ಗೆ ಕುಮಾರಸ್ವಾಮಿ ಯೂಟರ್ನ್ ಹೊಡೆದು ತನಗೆ ಬಂದಿರುವ ಮಾಹಿತಿ ತಪ್ಪಿರಬಹುದು ಎಂದು ಹೇಳಿದ್ದಾರೆ ಎಂದು ಸುದ್ದಿಯಾಯಿತು.

ಕುಮಾರಸ್ವಾಮಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕೊಲೆ ಪ್ರಕರಣದ ಕುರಿತು ದಾಖಲೆಗಳಿದ್ದರೆ ಕುಮಾರಸ್ವಾಮಿ ನೀಡಿ ಸಹಕರಿಸಿ ಎಂದು ಹೇಳಿದರು. ಮಂಗಳೂರಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಕುಮಾರಸ್ವಾಮಿ ಹಾಗು ಶಾಸಕ ಮೊಯ್ದಿನ್ ಬಾವಾ ಅವರನ್ನೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಜೆಡಿಎಸ್ ನಲ್ಲಿರುವ ಮೊಯ್ದಿನ್ ಬಾವಾ ಅವರ ಸೋದರ ಬಿ ಎಂ ಫಾರೂಕ್ ಅವರ ಕುಮ್ಮಕ್ಕಿನಿಂದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಎಲ್ಲ ವಿಷಯಗಳ ಬಗ್ಗೆ ಸೋಮವಾರ ರಾತ್ರಿ 'ವಾರ್ತಾ ಭಾರತಿ' ಜೊತೆ ಮಾತನಾಡಿದ ಕುಮಾರಸ್ವಾಮಿ ಹೇಳಿದ್ದಿಷ್ಟು : 

"ನನಗೆ ಬಂದಂತಹ ನಿಖರವಾದ ಮಾಹಿತಿ ಇಟ್ಟುಕೊಂಡು ನಾನು ಹೇಳಿದ್ದೇನೆ. ಬಿಜೆಪಿ ಕಾರ್ಪೊರೇಟರ್ ಒಬ್ಬರ ಪಾತ್ರ ಈ ಕೊಲೆಯಲ್ಲಿ ಇದೆ ಎಂಬ  ಗುಮಾನಿ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಹರಿದಾಡುತ್ತಿರುವುದನ್ನು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಹೇಳಿಕೆಯಿಂದ ಹಿಂದೆ ಸರಿಯುವ , ಯೂಟರ್ನ್ ಮಾಡುವ ಪ್ರಶ್ನೆಯೇ ಇಲ್ಲ. ಅದ್ಯಾರೋ ಟಿವಿಯವರು ಏನೋ ಕೇಳಿ ಅದನ್ನು ಏನೋ ಮಾಡಿ ಹಾಕಿದ್ದಾರೆ. ಟಿವಿ9 ನವರಿಗೆ ನನ್ನ ಜೊತೆ ಪರ್ಸನಲ್ ಸಮಸ್ಯೆ ಇದೆ . ನನ್ನನ್ನು ಮುಗಿಸೋಕೆ ಹೊರಟಿದ್ದಾರೆ. ಹಾಗಾಗಿ ಅವರು ಹೀಗೆ ಯೂಟರ್ನ್ ಅಂತ ಸುದ್ದಿ ಮಾಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ಬದ್ಧ "

" ಕೊಲೆ ಆರೋಪಿಗಳನ್ನು ಬಂಧಿಸಿ ಇಂದಿಗೆ ಐದು ದಿನ ಆಗಿವೆ. ಸರ್ಕಾರಕ್ಕೆ ಇನ್ನೂ ಅವರ ಬಾಯಿ ಬಿಡಿಸಲು ಯಾಕೆ ಸಾಧ್ಯ ಆಗಿಲ್ಲ. ಯಾಕೆ ಇನ್ನೂ ಈ ಬಗ್ಗೆ ಸತ್ಯಾಂಶ ಹೊರಗೆ ಬರುತ್ತಿಲ್ಲ. ಅಂತಹ ಸೀಕ್ರೆಟ್ ಮಾಡೋದು ಏನಿದೆ ಅದರಲ್ಲಿ ? "

"ಸರ್ಕಾರಕ್ಕೆ ನಾನು ಯಾಕೆ ದಾಖಲೆ ಕೊಡಬೇಕು ? ನಾನು ದಾಖಲೆ ಕೊಡೋದಾದರೆ ಸಿದ್ದರಾಮಯ್ಯ ಯಾಕೆ ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ ? ಆರೋಪಿಗಳನ್ನು ಬಂಧಿಸಿ ಅವರದೇ ಅಧೀನದ ಪೊಲೀಸರ ಕೈಯಲ್ಲಿದ್ದಾರೆ. ಅವರ ಬಾಯಿ ಬಿಡಿಸಲು ಇವರಿಂದ ಆಗೋದಿಲ್ಲ ಎಂದಾದರೆ ಇವರು ಯಾಕೆ ಅಧಿಕಾರದಲ್ಲಿದ್ದಾರೆ ? ಅವರ ಇಂಟೆಲಿಜೆನ್ಸ್ ಇಲಾಖೆ ಏನು ಮಾಡುತ್ತಿದೆ ?"

" ಬಷೀರ್ ಕೊಲೆ ಕೇಸಲ್ಲೂ ಸತ್ಯ ಹೊರಬರಬೇಕು. ಕೊಂದಿದ್ದು ಯಾಕೆ ? ಯಾರು ಕೊಲ್ಲಿಸಿದ್ದು ? ಎಂಬ ಸತ್ಯ ಹೊರಬರಬೇಕು. "

" ನನ್ನನ್ನು ಯಾಕೆ ತನಿಖೆ ಮಾಡಬೇಕು. ಬಿಜೆಪಿ, ಕಾಂಗ್ರೆಸ್ ಸೇರಿ ಕರಾವಳಿಯನ್ನು ಹಾಳು ಮಾಡಿ ಹಾಕಿ ಈಗ ನನ್ನನ್ನು ಯಾಕೆ ತನಿಖೆ ಮಾಡುತ್ತಾರೆ? "

" ಬಿ ಎಂ ಫಾರೂಕ್ ನನಗೆ ಯಾಕೆ ಹೇಳ್ತಾರೆ ? ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವನು ನಾನು. ನನಗೆ ನನ್ನದೇ ಆದ ಮಾಹಿತಿ ಮೂಲಗಳಿವೆ. ಚಿಕ್ಕಮಗಳೂರಲ್ಲಿ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ನಡೆದಾಗಲೂ ಅದು ಮಟ್ಕಾ ದಂಧೆ ನಡೆಸುವವರ ಚಿತಾವಣೆಯಿಂದ ನಡೆದಿದೆ ಎಂದು ಹೇಳಿದ್ದೆ. ಆತನ ಮೇಲೆ ಯಾರಿಂದಲೋ ಕಂಪ್ಲೇಂಟ್ ಕೊಡಿಸಿ ಸಸ್ಪೆನ್ಡ್ ಮಾಡಿ  ಕೊನೆಗೆ ಆತ್ಮಹತ್ಯೆ ಮಾಡ್ಕೊಂಡ. ಈಗಲೂ ಸತ್ಯಾಂಶ ಹೊರಗೆ ಬರಲಿ ಎಂದು ನಾನು ಹೇಳಿದ್ದೇನೆ. ಇದು ಸರ್ಕಾರದ ಜವಾಬ್ದಾರಿ. "

" ದೀಪಕ್ ಯಾವುದೇ ರೀತಿಯ ಅಪರಾಧ ಪ್ರವೃತ್ತಿಯವನಲ್ಲ. ಪಾಪ ಕೆಲಸ ಮಾಡಿಕೊಂಡಿದ್ದವನು. ಅಂತಹ ಹುಡುಗನನ್ನು ಯಾಕೆ ಕೊಲೆ ಮಾಡಿಸಿದರು ಎಂಬುದು ಹೊರಗೆ ಬರಬೇಕು . ಕೊಲೆಗೆ ಪ್ರೇರೇಪಣೆ ಕೊಟ್ಟವರು ಯಾರು ?  ಎಂಬುದು ಜನರಿಗೆ ಗೊತ್ತಾಗಬೇಕು. ಅಷ್ಟೇ."

ಕೃಪೆ:ವಾರ್ತಾಭಾರತಿ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...