ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯ ವಿದ್ವಾಂಸ ಮೌಲಾನಾ  ಯೂಸುಫ್ ಸಾಹೇಬ್ ನಿಧನ

Source: sonews | By Staff Correspondent | Published on 23rd November 2017, 3:56 PM | Coastal News | State News | Don't Miss | Special Report |

ಮಂಗಳೂರು: ಹಿರಿಯ ಧಾರ್ಮಿಕ ವಿದ್ವಾಂಸ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಮೌಲಾನಾ ಸೈಯದ್ ಯೂಸುಫ್ ಸಾಹೇಬ್ ಗುರುವಾರ ಬೆಳಗ್ಗೆ 5 ಗಂಟೆಗೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದ ಮೌಲಾನಾ ಸೈಯದ್ ಯೂಸುಫ್ ಸಾಹೇಬ್ ಪ್ರಸ್ತುತ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ವಾಸವಾಗಿದ್ದರು. ಅವರು ಸುದೀರ್ಘ ಕಾಲ ಮಂಗಳೂರಿನ ಬಂದರ್ ನಲ್ಲಿರುವ ಕಚ್ಚಿ ಮೇಮನ್ ಮಸೀದಿಯ ಖತೀಬರಾಗಿ (ಮುಖ್ಯ ಧರ್ಮಗುರುಗಳು) ಸೇವೆ ಸಲ್ಲಿಸಿದ್ದರು. ಮೌಲಾನಾ ಅವರ ಜುಮಾ (ಶುಕ್ರವಾರದ ನಮಾಝ್) ಪ್ರವಚನ ಅತ್ಯಂತ ಪ್ರಸಿದ್ಧವಾಗಿತ್ತು. ಅದನ್ನು ಕೇಳಲೆಂದೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಸದಾ ಪರೋಪಕಾರ, ಸಮಾಜ ಸೇವೆ , ಶಾಂತಿ ಸಹಬಾಳ್ವೆ, ಸೌಹಾರ್ದದ ಸಂದೇಶ ನೀಡುತ್ತಿದ್ದ ಹಾಗೂ ಅದರಂತೆ ಬದುಕಿದ ಸಜ್ಜನ ಸಂತ ವ್ಯಕ್ತಿತ್ವ ಅವರದಾಗಿತ್ತು. ಎಲ್ಲ ಧರ್ಮಗಳ ಬಹುದೊಡ್ಡ ಸಂಖ್ಯೆಯ ಜನರು ಅವರ ಅಭಿಮಾನಿಗಳಾಗಿದ್ದರು.

ವೌಲಾನಾ ಅವರು ಪತ್ನಿ, ನಾಲ್ವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯವು ಇಂದು (ನ.23) ಇಶಾ ನಮಾಝ್ ಬಳಿಕ ಮೂಡುಬಿದಿರೆ ಕೋಟೆಬಾಗಿಲಿನ ಅಸ್ಸಹಬಾ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ವೌಲಾನ ಸೈಯದ್ ಯೂಸುಫ್ ಸಾಹೇಬ್ ಅವರ ಪುತ್ರ  ಡಾ.ಇಹ್ತೆಶ್ಯಾಮ್  ತಿಳಿಸಿದ್ದಾರೆ.

ಮೌಲಾನಾ ಸಯ್ಯದ್ ಯೂಸುಪ್ ಸಾಹೇಬ್

ಮೌಲಾನ ಸಯ್ಯದ್ ಯೂಸುಪ್ ಸಾಹೇಬರು 193ಂ ಇಸವಿಯಲ್ಲಿ ಮೂಡಬಿದ್ರೆಯಲ್ಲಿ ಜನಿಸಿದರು. ಅವರ ತಂದೆ ಅಬ್ದುಲ್ ವಹ್ಹಾಬ್. ತಾಯಿ ಖದೀಜಾಬಿ. ಈ ದಂಪತಿಗಳ 4 ಮಕ್ಕಳಲ್ಲಿ ಮೌಲಾನರು ಮೂರನೆಯವರು. ಸಯ್ಯದ್ ಯೂಸುಪ್ ಸಾಹೇಬರು ಬಿಕರ್ನಕಟ್ಟೆಯ ತನ್ನ ಮಗನ ಮನೆಯಾದ ಆಸಿಯಾನದಲ್ಲಿ ವಾಸವಾಗಿದ್ದರು. ಮೂಡಬಿದ್ರೆ ಕೋಟೆ ಬಾಗಿಲಿನ ಉರ್ದು ಶಾಲೆಯಲ್ಲಿ 4ನೇ ತರಗತಿಯವರೆಗೆ ಶಾಲಾ ವ್ಯಾಸಂಗ ನಡೆಸಿದ ಮೌಲಾನರು ನಂತರ ಮೂಡಬಿದ್ರೆಯ ಜೈನ್ ಹೈಸ್ಕೂಲು ಸೇರಿದರು. ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಾಲಾ ಮೈದಾನದಲ್ಲಿ ಆಟದ ವೇಳೆ ಬಿದ್ದು ಕಾಲು ಮುರಿದುಕೊಂಡರು. ಕಾಲಿನ ಗಾಯ ವಾಸಿಯಾಗಲು ಬಹು ದಿನಗಳ ಕಾಲ ಮನೆಯಲ್ಲೇ ಉಳಿದುಕೊಳ್ಳಬೇಕಾಯಿತು. ನಂತರ ಮೌಲಾನರಿಗೆ ಶಾಲೆಗೆ ಹೋಗುವ ಅವಕಾಶ ಲಭ್ಯವಾಗಲಿಲ್ಲ.

ಅವರ ತಂದೆ ಮೌಲಾನಾ ಅಬ್ದುಲ್ಲಾ ವಹ್ಹಾಬ್‍ರು ಕಾರ್ಕಳದ ಆನೆಕೆರೆ ಮಸೀದಿಯಲ್ಲಿ ಇಮಾಮ್ ಆಗಿದ್ದರು. ಬಾಲಕ ಸಯ್ಯದ್ ಯೂಸುಪ್ ರನ್ನು ಅವರ ತಂದೆ ಕಾರ್ಕಳದಲ್ಲಿರುವ ಮೌಲಾನಾ ಸಯ್ಯದ್ ಮುಹಮ್ಮದ್ ಯೂಸುಪ್ ಸಾಹೇಬರ ಮದ್ರಸಕ್ಕೆ ಸೇರಿಸಿದರು. ಅಲ್ಲಿ ಎರಡು ವರ್ಷಗಳ ಮದ್ರಸಾ ಶಿಕ್ಪಣ ಪಡೆದ ಅವರು ತನ್ನ ಗುರುಗಳಾದ ಮೌಲಾನಾ ಸಯ್ಯದ್ ಮುಹಮ್ಮದ್ ಯೂಸುಪ್ ಸಾಹೇಬರು ಕಚ್ಚೀ ಮಸೀದಿಗೆ ಖತೀಬರಾಗಿ ಬಂದಾಗ, ಅವರ ಶಿಷ್ಯ ಸಯ್ಯದ್ ಯೂಸುಪ್ ರೂ ಅವರ ಜತೆ ಬಂದರು.ಆಗ ಅವರಿಗೆ ಹದಿನೇಳು ವರ್ಷ ಪ್ರಾಯವಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಸಿಗುವಾಗ ಸಯ್ಯದ್ ಯೂಸುಪ್ ರು ಮಂಗಳೂರಿನ ಕಚ್ಚೀ ಮದ್ರಸದಲ್ಲಿ ವಿದ್ಯಾರ್ಥಿಯಾಗಿದ್ದರು. ಗುರುವಿನ ಆದರ್ಶ ಶಿಷ್ಯನೊಳಗೆ ಮೊಳಕೆ ಒಡೆಯಿತು. ಅವರು ಹೀಗೆ ಕಚ್ಚೀ ಮಸೀದಿಯ ಮದ್ರಸದಲ್ಲಿ ಎಂಟು ವರ್ಷಗಳ ಕಾಲ ಅಲ್ಲಿ ಅರಬಿ ಮೌಲ್ವಿ ಪಾಝಿಲ್ ಮತ್ತು ಪಾರ್ಸಿಯ ಮುನ್ಶಿ ಪಾಝಿಲ್ ಪಾರಂಗತರಾದರು.

ಇದೇ ಸಂದರ್ಭದಲ್ಲಿ ಅವರು ಜಮಾಅತೆ ಇಸ್ಲಾವಿೂ ಹಿಂದ್‍ನ ಕಾರ್ಯ ಚಟುವಟಿಕೆಗಳಿಂದ ಆಕರ್ಷಿತರಾದರು. ಆ ಬಳಿಕ ಉಡುಪಿಯ ಜಾವಿೂಯ ಮಸೀದಿಗೆ ಇಮಾಮತ್‍ ಹೊಣೆಯನ್ನು ವಹಿಸಿದರು. ಉಡುಪಿಯಲ್ಲಿ ಎಂಟು ತಿಂಗಳ ಸೇವೆ ಸಲ್ಲಿಸಿ ಅವರು ನಂತರ ಕಚ್ಚೀ ಮಸೀದಿಯಲ್ಲಿ ಇಮಾಮರಾಗಿ ಸೇವೆಯನ್ನು ಆರಂಭಿಸಿದರು. ಕಚ್ಚೀ ಮಸೀದಿಯಲ್ಲಿ ಖುತುಬಾ ಮತ್ತು ಭಾಷಣದ ಮೂಲಕ ಮೌಲಾನ ಪ್ರಸಿದ್ದಿ ಪಡೆದರು. ಮೌಲಾನರ ವಿವಾಹ ಮೂಡಬಿದಿರೆಯ ವ್ಯಾಪಾರಿ ಸಯ್ಯದ್ ಉಮರ್ ಸಾಹೇಬರ ಮಗಳು ಬದ್ರುನ್ನಿಸಾರೊಂದಿಗೆ ನಡೆಯಿತು. ಮೂಡಬಿದಿರೆಯ ಕೋಟೆ ಬಾಗಿಲಿನಲ್ಲಿಯೇ ವಾಸಿಸಿ ಮಂಗಳೂರಿನಿಂದ ವಾರಕ್ಕೊಮ್ಮೆ ಅಥವಾ 5 ದಿವಸಗಳಿಗೊಮ್ಮೆ ಊರಿಗೆ ಹೋಗುತ್ತಿದ್ದರು.

ಮೌಲಾನರು ಜಮಾಅತೆ ಇಸ್ಲಾಮಿ ಹಿಂದ್ ನ ನೇತೃತ್ವವನ್ನು ವಹಿಸಿ ಮಂಗಳೂರಿನ ಕುದ್ರೋಳಿ, ಬಿಕರ್ನಕಟ್ಟೆ, ಇತರ ಪ್ರದೇಶಗಳಲ್ಲಿ ಸಮುದಾಯದ ಇತರರ ತೀವ್ರ ವಿರೋಧದ

ನಡುವೆಯೂ ಜಮಾಅತ್ ನ ಕಾರ್ಯ ಚಟುವಟಿಕೆಗಳನ್ನು ವ್ಯಾಪಕಪಡಿಸಿ ಜಮಾಅತೆ ಇಸ್ಲಾಮಿಯನ್ನು ಕಟ್ಟಿ ಬೆಳೆಸಿದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಆರೆಸ್ಸೆಸ್ ಮತ್ತು ಜಮಾಅತ್‍ನ್ನು ನಿಷೇಧಿಸಿತು. ಜಮಾಅತ್ ನ ಸದಸ್ಯರಾಗಿದ್ದ ಸಯ್ಯದ್ ಯೂಸುಪ್ ಸಾಹೇಬರನ್ನು ಬಂಧಿಸಿದರು ಮತ್ತು ಅಝೀಝುದ್ದೀನ್ ರಸ್ತೆಯಲ್ಲಿದ್ದ ಜಮಾಅತ್ ಕಾರ್ಯಾಲಯಕ್ಕೆ ಪೊಲೀಸರು ಬೀಗ ಜಡಿದರು. ೩ ದಿವಸಗಳ ಕಾಲ ಜೈಲಿನಲ್ಲಿಟ್ಟು ಬಿಟ್ಟರು. . ಜೈಲಿನಲ್ಲಿ ಇಸ್ಲಾಮಿನ ಕುರಿತು ಆರೆಸ್ಸೆಸ್ ಮಂದಿಯೊಂದಿಗೆ ಚರ್ಚಿಸುವ ಅವಕಾಶ ಮೌಲಾನರಿಗೆ ಸಿಕ್ಕಿತು.

ಸಂದೇಶ ಪ್ರಚಾರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮೌಲಾನರು ಸಂದೇಶ ಪ್ರಚಾರಕ್ಕಾಗಿ ಸನ್ಮಾರ್ಗ ವಾರ ಪತ್ರಿಕೆ, ಸಾಹಿತ್ಯ ಪ್ರಕಾಶನ, ಇಸ್ಮಿಕ ಅಂಚೆ ವಾಚನಾಲಯ, ಬಡ್ಡಿ ರಹಿತ ಸಾಲ ಸಂಸ್ಥೆ, ಹಿದಾಯತ್ ಸೆಂಟರ್ ಸ್ಥಾಪಕ ಸದಸ್ಯರಲ್ಲಿ ಪ್ರಮುಖರು. ಕನ್ನಡಕ್ಕೆ ಪವಿತ್ರ ಕುರ್ ಆನ್ ಅನುವಾದಿಸುವ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು, ಸಹೀಹುಲ್ ಬುಖಾರಿ ಅನುವಾದಕ ಮಂಡಳಿಯ ಸಂಪಾದಕರಾಗಿದ್ದರು.ಮೂಡಬಿದಿರೆಯ ಕೋಟೆಬಾಗಿಲಿನಲ್ಲಿ ಅಸ್ಸಹಾಬಾ ಜುಮಾ ಮಸೀದಿ, ಪೂರ್ಣ ಅವಧಿಯ ಮದ್ರಸ, ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಯಾ ಸ್ಥಾಪಕ ಅಧ್ಯಕ್ಷರು. ಮೌಲಾನರು ಸನ್ಮಾರ್ಗ, ತಕ್ಲಿದ್, ಇತ್ಯಾದಿ ಕಿರು ಕ್ರತಿಗಳನ್ನು ರಚಿಸಿದ್ದಾರೆ.

ಮೌಲಾನರು ದಕ್ಷಿಣ ಕನ್ನಡ ಕೊಡಗು ಜಿಲ್ಲಾ ಸಂಚಾಲಕರಾಗಿಯೂ, ವಿಭಾಗ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗಿನ ವರೆಗೂ ಕಚ್ಚೀ ಮಸೀದಿಯಲ್ಲಿ ಕುತುಬಾ ಪ್ರವಚನ ನೀಡುತ್ತಿದ್ದರು. ಮೌಲಾನರು ಉತ್ಸಾಹ, ಚಿಲುಮೆ, ವಯೋ ಸಹಜವಾದ ಅನಾರೋಗ್ಯವಿದ್ದರೂ ಅವರು ಸಕ್ರಿಯರಾಗಿದ್ದರು.

87ವರ್ಷದ ಈ ಮೇರು ವ್ಯಕ್ತಿತ್ವವು ನಮ್ಮನ್ನು ಬಿಟ್ಟು ಆಗಲಿದೆ. ಅವರು ಪತ್ನಿ ಬದ್ರುನ್ನಿಸಾ, ಮಕ್ಕಳಲ್ಲಿ ದೊಡ್ಡವರು ಇಫ್ತಿಕಾರ್ ಅನಂತರ ಸಯ್ಯದ್ ಇಹ್ತಿಶಾಮ್, ಅವರ ನಂತರ ಹಫೀಪಾ, ಅನೀಸಾ, ಹವಿೂದ ಮತ್ತು ಸಬೀಹಾ, ನಾಲ್ಕು ಹೆಣ್ಣು ಎರಡು ಗಂಡು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೌಲಾನರ ಈ ಸುದೀರ್ಘ ದೀನಿ ಸೇವೆಯು ನಮಗೆಲ್ಲ ಮಾದರಿಯಾಗಲಿ. ಅವರ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ. ಅವರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ದಯಪಾಲಿಸಲಿ.

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮರನ್ನು ಥಳಿಸಿದ ದುಷ್ಕರ್ಮಿಗಳಿಂದ ಸಂತೃಸ್ತರನ್ನು ರಕ್ಷಿಸಿದ ಹಿಂದೂ ದಂಪತಿ

ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಹೋಟೆಲ್ ಉದ್ಯೋಗಿಯಾಗಿದ್ದು, ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೇಗಂಪುರ ಪ್ರದೇಶದ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...