ಮಂಗಳೂರು-ದುಬೈ ಜೆಟ್ ಏರ್‌ವೇಸ್ ವಿಳಂಬ ಸಾಧ್ಯತೆ; ಪ್ರಯಾಣಿಕರ ಗೊಂದಲ

Source: S O News service | By sub editor | Published on 31st December 2016, 11:15 PM | Coastal News | National News | Gulf News | Don't Miss |

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ 11:25 ಗಂಟೆಗೆ ಮಂಗಳೂರಿನಿಂದ ದುಬೈಗೆ ಹೊರಡಬೇಕಾಗಿದ್ದ ಜೆಟ್ ಏರ್‌ವೇಸ್ ವಿಮಾನ ವಿಳಂಬವಾಗುವ ಸಾಧ್ಯತೆ ಬಗ್ಗೆ ಆತಂಕಗೊಂಡಿರುವ ಪ್ರಯಾಣಿಕರು ಈ ಕುರಿತು ಮುನ್ಸೂಚನೆ ನೀಡದ ಏರ್‌ವೇಸ್ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 11:25ಕ್ಕೆ ಹೊರಡಬೇಕಾಗಿದ್ದ 9ಡಬ್ಲು532 ವಿಮಾನದ ಪ್ರಯಾಣಿಕರು ಮೂರು ಗಂಟೆ ಮುಂಚಿತವಾಗಿಯೇ ಬಂದಿದ್ದು, ವಿಮಾನ ವಿಳಂಬವಾಗುವ ಬಗೆಗಿನ ಮಾಹಿತಿಯಿಂದ ಗಾಬರಿಗೊಂಡಿದ್ದಾರೆ. ವಿಮಾನವು ಹೊರಡಲು ತುಸು ವಿಳಂಬವಾಗಬಹುದು ಇಲ್ಲವೇ ರದ್ದಾಗಬಹುದೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪ್ರಯಾಣಿಕರು ಏರ್‌ವೇಸ್‌ನ ಸಿಬ್ಬಂದಿಯನ್ನು ವಿಚಾರಿಸಲು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

ಇಂದು ದುಬೈಗೆ ಹೊರಡಬೇಕಾದ ವಿಮಾನವು ರದ್ದುಗೊಂಡಲ್ಲಿ ಅದೇ ಪ್ರಯಾಣಿಕರನ್ನು ರವಿವಾರ ಮಧ್ಯಾಹ್ನ 3:15ಕ್ಕೆ ಅಥವಾ ರವಿವಾರ ರಾತ್ರಿ 11:25ಕ್ಕೆ ಹೊರಡುವ ಜೆಟ್ ಏರ್‌ವೇಸ್ ವಿಮಾನದಲ್ಲಿ ಕಳುಹಿಸುವ ಬಗ್ಗೆಯೂ ಹೇಳಲಾಗುತ್ತಿದ್ದು, ಪ್ರಯಾಣಿಕರಲ್ಲಿ ಗೊಂದಲ ಮೂಡಿದೆ.

Read These Next

ಮೋದಿ ಹೆಸರಲ್ಲಿ ಮತಕೇಳದೆ ತನ್ನ ಹೆಸರಿನಲ್ಲಿ ಮತಕೇಳಲಿ ಬಂಡವಾಳ ಹೊರಬರುತ್ತದೆ : ಅಸ್ನೋಟಿಕರ

ಮುಂಡಗೋಡ : ಅನಂತಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟು ತನ್ನ ಹೆಸರಿನಲ್ಲಿ ಮತ ಕೇಳಲಿ ಆಗಲೇ ಈತನ ಬಂಡವಾಳ ಹೊರ ...

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...