ಉಳ್ಳಾಲ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ- ಐವರ ಬಂಧನ

Source: so english | By Arshad Koppa | Published on 12th October 2017, 8:22 AM | Coastal News |

ಮಂಗಳೂರು, ಅಕ್ಟೋಬರ್ 11: ಉಳ್ಳಾಲ ಬಿಜೆಪಿ ಕಾರ್ಯಕರ್ತ ಝುಬೈರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು  ತಲೆ ಮರೆಸಿಕೊಂಡಿದ್ದಾರೆ.


ಅಕ್ಟೋಬರ್ 4 ರಂದು ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಹತ್ಯೆ ನಡೆದಿತ್ತು.
ಬಂಧಿತ ಆರೋಪಿಗಳನ್ನು ಸುಹೈಲ್, ನಿಜಾಮುದ್ದೀನ್, ಮಹಮ್ಮದ್ ಮುಸ್ತಫಾ, ತಾಜವುದ್ದೀನ್, ಆಸಿಫ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೊಲೆಗೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
'ಆರೋಪಿಗಳು ಝುಬೈರ್ ಮೇಲೆ ವೈಯಕ್ತಿಕ ದ್ವೇಷ ಹೊಂದಿದ್ದರು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಅಕ್ಟೋಬರ್ 4ರಂದು ಆರೋಪಿಗಳು ಝುಬೈರ್ ರನ್ನು ಕೊಲೆ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಮೂರು ಮಂದಿ ಆರೋಪಿಗಳು ಭಾಗಿಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ,' ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿ.ಆರ್.
ಸುರೇಶ್ ಹೇಳಿಕೆ ನೀಡಿದ್ದಾರೆ.

Read These Next

ಅಂಜುಮನ್ ಸಂಸ್ಥೆಯ ಪ್ರತಿಷ್ಠಿತ ’ವಕಾರೆ ಅಂಜುಮನ್’ ’ವಕಾರೆ ಇಸ್ಲಾಮಿಯ’ ಪ್ರಶಸ್ತಿ ಪ್ರದಾನ

ಭಟ್ಕಳ: ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆ ಹಾಗೂ ಅಂಜುಮನ್ ಬಾಲಕರ ...