ಮಂಗಳೂರು:ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಯುವ ಮೋರ್ಚಾದ ರ್ಯಾಲಿಗಳನ್ನು ನಿಷೇಧಿಸಲು ಎಸ್ ಡಿ ಪಿ ಐ ಆಗ್ರಹ

Source: sdpi | By Arshad Koppa | Published on 3rd September 2017, 8:29 AM | Coastal News | Special Report |

ಮಂಗಳೂರು: ಸೆಪ್ಟಂಬರ್ 7 ರಂದು ಬಿಜೆಪಿ ಯುವ ಮೋರ್ಚಾ ಮಂಗಳೂರಿನಲ್ಲಿ ಹೊರ ಜಿಲ್ಲೆಗಳಿಂದ ಜನರನ್ನು ಬೈಕ್ ರ್ಯಾಲಿಗಳ ಮೂಲಕ ಕರೆಸಿ ನಡೆಸಲುದ್ದೇಶಿಸಿರುವ "ಮಂಗಳೂರು ಚಲೋ"ಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ  ಆಗ್ರಹಿಸುತ್ತದೆ. ಬಿಜೆಪಿ ಯುವ ಮೋರ್ಚಾದ ಬೈಕ್ ರ್ಯಾಲಿ ಬೆಂಗಳೂರು,  ಮೈಸೂರು,  ಶಿವಮೊಗ್ಗ,  ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಿಂದ ಬಂದು ಮಂಗಳೂರಿನಲ್ಲಿ ಸಮಾವೇಶ ನಡೆಯುತ್ತದೆ ಎಂದು ಅದರ ಸಂಘಟಕರು ತಿಳಿಸಿರುವರು.  ಆದರೆ ಕಳೆದ ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ಚೂರಿ ಹಾಕಿದ ಘಟನೆಯಿಂದ ಹಿಡಿದು ಹಲವು ದುಷ್ಕೃತ್ಯಗಳ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರ ನಡೆಸುತ್ತಲೇ ಬಂದಿರುವ ಸಂಘ ಪರಿವಾರ ಸಂಘಟನೆಗಳು ಇದಕ್ಕೆ ಪೂರಕವಾಗಿ ಅಶ್ರಫ್ ಕಲಾಯಿಯವರನ್ನು ಹಾಡುಹಗಲೇ ಬರ್ಬರವಾಗಿ ಕೊಂದು ಹಾಕಿ ತಮ್ಮ ರಕ್ತದಾಹವನ್ನು ತೀರಿಸಿತು. ಅದರ ನಂತರ ಶರತ್ ಶವಯಾತ್ರೆಯ ಸಂದರ್ಭದಲ್ಲೂ ಸಂಘಪರಿವಾರದ ನಾಯಕರೇ ಖುದ್ದಾಗಿ ನೇತೃತ್ವ ನೀಡಿ ಶವಯಾತ್ರೆಯ ಉದ್ದಕ್ಕೂ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲೆಸೆಯುತ್ತಾ, ವಾಹನಗಳನ್ನು ಜಖಂಗೊಳಿಸುತ್ತಾ ಎದುರು ಸಿಕ್ಕವರಿಗೆಲ್ಲಾ ಹಲ್ಲೆ ನಡೆಸುತ್ತಾ ಕ್ರೌರ್ಯವನ್ನು ನಡೆಸಿ ಜಿಲ್ಲೆಯಲ್ಲಿ ಸಂಪೂರ್ಣ ಅಶಾಂತಿಯನ್ನು ಸೃಷ್ಟಿಸಿದ್ದಾರೆ .ಈ ಘಟನೆಯ ಕುರಿತು ಸಂಘಪರಿವಾರದ  ಐವರು ನಾಯಕರ ಮೇಲೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಹೈಕೋರ್ಟಿನಲ್ಲಿ ಅದರ ವಿಚಾರಣೆ ನಡೆಯುತ್ತಿದೆ.
 
ಸಂಘಪರಿವಾರ ಜಿಲ್ಲೆಯಲ್ಲಿ ನಡೆಸಲುದ್ದೇಶಿಸಿದ್ದ  ಅಶಾಂತಿಯ ವಾತಾವರಣ ಪೊಲೀಸರ ದಕ್ಷ ಕ್ರಮಗಳಿಂದಾಗಿ ವಿಫಲವಾಗಿತ್ತು. ಅದಲ್ಲದೆ  ಬಹಳಷ್ಟು ಷಡ್ಯಂತರಗಳ ಮೂಲಕ ಜಿಲ್ಲೆಯಲ್ಲಿ ಗಲಭೆಗೆ ಮುನ್ನುಡಿ ಹಾಕಿ ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವ ತಂತ್ರಗಾರಿಕೆಯೂ ಇದರ ಹಿಂದಿದೆ.  ತಮ್ಮ ರಾಜಕೀಯ ಲಾಭಕ್ಕೋಸ್ಕರ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಇಲಾಖೆಗೆ 23 ಕೊಲೆಯ ಸುಳ್ಳು ವರದಿಯ ಪಟ್ಟಿಯನ್ನು  ರವಾನಿಸಿ ಮುಜುಗರಕ್ಕೀಡಾದ ಅದೇ ಪಟ್ಟಿಯನ್ನು ಮುಂದಿಟ್ಟುಕೊಂಡು ಬಿಜೆಪಿ  ಯುವ ಮೋರ್ಚಾ ಮಂಗಳೂರು ಚಲೋ ನಡೆಸುತ್ತಿದೆ.ಅದೇ ರೀತಿ ಎಸ್ಡಿಪಿಐ ಪಕ್ಷದ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ತಯಾರಿಸಿ ಆ ಮೂಲಕ ಜನರನ್ನು ಉದ್ರೇಕಿಸುವಂತಹ,ಪ್ರಚೋದಿಸುವಂತಹ ಕೆಲಸ ಬಿಜೆಪಿ ಯುವಮೋರ್ಚಾ ಮಾಡುತ್ತಿದೆ.
ಕರಾವಳಿಯಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಬಹಳಷ್ಟು ರಕ್ತಪಾತಗಳನ್ನು ನಡೆಸಿದೆ 23 ಮುಸಲ್ಮಾನರನ್ನು ಮಾತ್ರವಲ್ಲದೆ 13 ಅಮಾಯಕ ಹಿಂದುಗಳನ್ನು(ವಿನಾಯಕ ಬಾಳಿಗ, ಪ್ರವೀಣ್ ಪೂಜಾರಿ,ಹರೀಶ್ ಪೂಜಾರಿ,ಪ್ರತಾಪ್ ಮರೋಳಿ,ಕೃಷ್ಣಯ್ಯ ಪಾಟಾಳಿ,ಭಾಸ್ಕರ್ ಕುಂಭ್ಳೆ,ಶ್ರೀನಿವಾಸ್ ಬಜಾಲ್,ಹರೀಶ್ ಭಂಡಾರಿ ಕುಳಾಯಿ,ಶಿವರಾಜ್ ಕೋಡಿಕೆರೆ,ಪ್ರಕಾಶ್ ಕುಳಾಯಿ,ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್, ಕೇಶವ ಪೂಜಾರಿ ಸೂರಿಂಜೆ) ಬರ್ಬರವಾಗಿ ಹತೈಗೈದಂತಹ ಸಂಘಪರಿವಾರ ಮತ್ತು ಬಿಜೆಪಿಗೆ ಯಾವ ನೈತಿಕತೆ  ಇದೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು. ರಾಜಕೀಯ ಲಾಭಕ್ಕಾಗಿ ಮತ್ತು ಅವರ ಸಿದ್ಧಾಂತವನ್ನು ವಿರೋಧಿಸುವ ಯಾರನ್ನು ಬೇಕಾದರೂ ಹತೈಗೈಯುವ ಬಿಜೆಪಿ ಮತ್ತು ಸಂಘಪರಿವಾರದಿಂದ ಜನರು ದೂರ ಹೋಗುವ ಸಂದರ್ಭದಲ್ಲಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಮತ್ತೆ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಅಮಾಯಕರ ರಕ್ತ ಹೀರುಲು ಯುವಮೋರ್ಚಾ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷ, ,ಮೈಸೂರು ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳಿಕೆಗಳನ್ನು, ಆರೋಪಗಳನ್ನು ನೀಡಿ ಪ್ರಚೋಧನಾತ್ಮಕ ಭಾಷಣಗಳನ್ನು ಮಾಡಿ ಜಿಲ್ಲೆಯ ಮತ್ತು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ.ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕೆಂದು ಎಸ್ಡಿಪಿಐ ಆಗ್ರಹಿಸುತ್ತದೆ.
ಹಲವು ತಿಂಗಳುಗಳ ಕಾಲ ನಿಷೇದಾಜ್ಞೆಯೊಂದಿಗೆ ಕಷ್ಟಕರ ಜೀವನವನ್ನು ಕಳೆದ ಜಿಲ್ಲೆಯ ಜನತೆ ಮತ್ತೊಮ್ಮೆ ಅದನ್ನು ಬಯಸಲಾರರು. ಆದುದರಿಂದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಸಹಜ ಸ್ಥಿತಿಗೆ ಬಂದಿರುವ ಜಿಲ್ಲೆಯ ಶಾಂತಿಯನ್ನು ಕದಡುವ ಬಿಜೆಪಿ  ಯುವ ಮೋರ್ಚಾ ರಾಜಕೀಯ ಲಾಭಕ್ಕಾಗಿ ನಡೆಸುವ ಕಾರ್ಯಕ್ರಮವನ್ನು ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿಷೇಧಿಸಬೇಕೆಂದು ಎಸ್ ಡಿ ಪಿ ಐ ಒತ್ತಾಯಿಸುತ್ತದೆ. ಪರಿಸ್ಥಿತಿಯನ್ನು ಅರ್ಥೈಸದೆ ಇದಕ್ಕೆ ಅವಕಾಶ ನೀಡಿದರೆ ಆ ಮೂಲಕ ಉಂಟಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗುತ್ತಾರೆ ಎಂದು ನಾವು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.
 
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತಿ,
1. ಹನೀಫ್ ಖಾನ್ ಕೊಡಾಜೆ (ಜಿಲ್ಲಾಧ್ಯಕ್ಷರು ಎಸ್ ಡಿ ಪಿ ಐ, ದ.ಕ)
2 .ಎ.ಎಮ್.ಅಥಾವುಲ್ಲಾ (ಜಿಲ್ಲಾ ಪ್ರ. ಕಾರ್ಯದರ್ಶಿ ಎಸ್ ಡಿ ಪಿ ಐ, ದ.ಕ)
3 .ಇಕ್ಬಾಲ್ ಬೆಳ್ಳಾರೆ (ಜಿಲ್ಲಾ ಕಾರ್ಯದರ್ಶಿ ಎಸ್ ಡಿ ಪಿ ಐ, ದ.ಕ)
4. ಆಶ್ರಫ್ ಮಂಚಿ (ಜಿಲ್ಲಾ ಕಾರ್ಯದರ್ಶಿ ಎಸ್ ಡಿ ಪಿ ಐ, ದ.ಕ)
5. ಇಕ್ಬಾಲ್ ಗೂಡಿನಬಳಿ (ಜಿಲ್ಲಾ ಕೋಶಾಧಿಕಾರಿ ಎಸ್ ಡಿ ಪಿ ಐ, ದ.ಕ)
6.ಶಾಹುಲ್ ಹಮೀದ್ (ಜಿಲ್ಲಾ ಸಮಿತಿ ಸದಸ್ಯರು ಎಸ್ ಡಿ ಪಿ ಐ, ದ.ಕ)

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...