ಮಂಗಳೂರು: ಭೋಪಾಲ್ ವಿಚಾರಣಾದೀನ ಖೈದಿಗಳ ಎನ್‍ಕೌಂಟರ್ ವಿರುದ್ಧ ನ ೪ ರಂದು ಎಸ್‍ಡಿಪಿಐ ಪ್ರತಿಭಟನೆ

Source: sdpi | By Arshad Koppa | Published on 4th November 2016, 12:15 PM | Editorial |

ಪತ್ರಿಕಾ ಪ್ರಕಟಣೆ:
ಮಂಗಳೂರು:ಮಧ್ಯಪ್ರದೇಶದ ಭೋಪಾಲ್ ಕಾರಾಗೃಹದಿಂದ ಪರಾರಿಯಾಗಿದ್ದಾರೆಂದು ನೆಪವೊಡ್ಡಿ 8 ಮಂದಿ ವಿಚಾರಣಾದೀನ ಯುವಕರನ್ನು ನಕಲಿ ಎನ್‍ಕೌಂಟರ್ ಮೂಲಕ ಕ್ರೂರವಾಗಿ ಹತ್ಯೆಗೈದಿರುವ ವಿಚಾರ ಇಡೀ ದೇಶವು ತಲೆತಗ್ಗಿಸುವಂತೆ ಮಾಡಿದೆ. ಈ ಎನ್‍ಕೌಂಟರ್ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಪೊಲೀಸರು ನೀಡುವ ಹೇಳಿಕೆಗಳು, ಮಧ್ಯಪ್ರದೇಶದ ಗೃಹಮಂತ್ರಿಯ ಮಾತುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕುಗಳನ್ನು ನೋಡುತ್ತಿರುವಾಗ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಸ್ಪಷ್ಟವಾಗುತ್ತಿದೆ. ಆದುದರಿಂದ ಇದರ ಹಿಂದಿರುವ ಸತ್ಯಾಸತ್ಯತೆಯನ್ನು  ಬಯಲಿಗೆಳೆದು 8 ಮಂದಿ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿಕ್ಕಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲೆಯ ವತಿಯಿಂದ 04/11/2016 ರಂದು ಶುಕ್ರವಾರ ಸಂಜೆ 4:00 ಗಂಟೆಗೆ ಸರಿಯಾಗಿ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಬೃಹತ್ ಪ್ರತಿಭಟನಾ ಸಭೆಯನ್ನು ಕೈಗೊಳ್ಳಲಾಗಿದೆ.

Read These Next

ಮತ್ತೆ ಶರಣರ ತಲೆದಂಡವಾಗದಿರಲಿ

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ...