ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾದ್ಯಂತ  ಯಶಸ್ವಿಯಾಗಿ ನಡೆದ “ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’’ಅಭಿಯಾನ.

Source: sdpi | By Arshad Koppa | Published on 29th August 2017, 8:19 AM | Coastal News | Guest Editorial |


ಮಂಗಳೂರು: ದೇಶದಾದ್ಯಂತ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತೈಯನ್ನು ಪ್ರತಿರೋಧಿಸೋಣ ಭಾರತದ ನೋವು ಭರಿತ ರಕ್ತ ಸುರಿಯುತ್ತಿದೆ.ಜನತೆಯ  ಅಭಿಯಾನದ ಅಂಗವಾಗಿ ಜಿಲ್ಲಾದ್ಯಂತ ಆಗಸ್ಟ್ 01 - 25 ರವರಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ನರ್ ಮೀಟ್
ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಉದ್ದ ಅಗಲಕ್ಕೂ ಸಂಚರಿಸಿ 160 ಕಡೆಗಳಲ್ಲಿ ಕಾರ್ನರ್ ಮೀಟ್ ನಡೆಸಿ ಸರಿಸುಮಾರು 25000 ಮಂದಿಗೆ ದೇಶದಲ್ಲಿ ಸಂಘಪರಿವಾರದ ಗೋ ರಾಕ್ಷಕರು ನಡೆಸುತ್ತಿರುವ ಗುಂಪು ಹಿಂಸೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
 ಕರ ಪತ್ರ ವಿತರಣೆ
ಜಿಲ್ಲಾದ್ಯಂತ  ಹಲವು ಮೊಹಲ್ಲಾ, ಮಸೀದಿ, ಚರ್ಚ್,ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1ಲಕ್ಷ ಕರ ಪತ್ರವನ್ನು ವಿತರಿಸಿ ವಿವರಿಸಲಾಯಿತು.
 ಸ್ನೇಹ ಕೂಟ
ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಿಂಸೆಯ  ಸಂಪೂರ್ಣ ಮಾಹಿತಿಯ ಕುರಿತು ಜಿಲ್ಲೆಯ  ವಿವಿಧ ಸಂಘ ಸಂಸ್ಥೆ, ರಾಜಕೀಯ, ಮೊಹಲ್ಲಾ, ಮಸೀದಿ  ಮತ್ತು ಪ್ರಗತಿಪರ,ದಲಿತ ನಾಯಕರುಗಳ ಸ್ನೇಹ ಕೂಟವನ್ನು ಜಿಲ್ಲೆಯ 8 ಕಡೆಗಳಲ್ಲಿ (ಸುರತ್ಕಲ್,ಮುಲ್ಕಿ, ಹಳೆಯಂಗಡಿ,ಬಿಸಿರೋಡ್, ಪುತ್ತೂರು,ಕುಂಬ್ರ,ಸವಣೂರು,ಬೆಳ್ಳಾರೆ)ನಡೆಸಿ ದೇಶದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯ ಬಗ್ಗೆ ಚರ್ಚಿಸಲಾಯಿತು.
 
 
ಸಹಿ ಸಂಗ್ರಹ ಅಭಿಯಾನ
 ದೇಶದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯ ಬಗ್ಗೆ ಹಲವು ಚರ್ಚುಗಳಿಗೆ ತೆರಳಿ  ಜಾಗೃತಿಯನ್ನು ಮೂಡಿಸಿ ಸುಮಾರು 2000 ಸಹಿ ಸಂಗ್ರಹಿಸಲಾಯಿತು.
 ಸಾರ್ವಜನಿಕ ಸಭೆ
 ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ (ಸುರತ್ಕಲ್, ಗುರುಪುರ ಕೈಕಂಬ, ಫರಂಗಿಪೇಟೆ,ಪುತ್ತೂರು, ಬೆಳ್ತಂಗಡಿ,ಸುಳ್ಯ,ತೊಕ್ಕೊಟ್ಟು) 7 ಕಡೆಗಳಲ್ಲಿ  ಸುಮಾರು ಎಂಟು ಸಾವಿರಕ್ಕೂ ಮಿಕ್ಕಿ ಜನರ ಸಮ್ಮುಖದಲ್ಲಿ ಸಾರ್ವಜನಿಕ ಸಭೆಯು ಯಶಸ್ವಿಯಾಗಿ ನಡೆಯಿತು.
 ಮಾನವ ಸರಪಳಿ
ಜನತೆಯ ಅಭಿಯಾನದ ಸಮಾರೋಪದ ಅಂಗವಾಗಿ "ಮನೆಯಿಂದ ಹೊರಗೆ ಬನ್ನಿ " ಘೋಷಣೆಯೊಂದಿಗೆ ಆಗಸ್ಟ್ 25 ರಂದು ನಡೆದ ಮಾನವ ಸರಪಳಿ ಕಾರ್ಯಕ್ರಮವು ಜಿಲ್ಲಾದ್ಯಂತ 43 ಕಡೆಗಳಲ್ಲಿ ಸುಮಾರು ಸಾವಿರಾರು  ಸಾರ್ವಜನಿಕರು ಒಟ್ಟಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸೆಯ ವಿರುದ್ಧ ಐಕ್ಯ ಮತವನ್ನು ಪ್ರದರ್ಶಿಸಲಾಯಿತು. ಸಂಘಟನಾತೀತವಾಗಿ,ಪಕ್ಷಾತೀತವಾಗಿ ನಡೆದ ಈ ವಿಭಿನ್ನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳಲ್ಲಿ ವ್ಯಾಪಕ ಜನ ಬೆಂಬಲ ಸಿಕ್ಕಿರುವುದರಿಂದ ಜನರಲ್ಲಿ ಸಂವಿಧಾನ ಬದ್ಧವಾದ ಪ್ರತಿರೋಧ ಶಕ್ತಿ ಜೀವಂತವಾಗಿದೆ ಎಂಬುದಕ್ಕೆ   ಸಾಕ್ಷಿಯಾಯಿತು ಹಾಗೂ ಗುಂಪು ಹಿಂಸೆಯ ಮೂಲಕ ಭಾರತೀಯರನ್ನು ಹತೈಗೈಯುವ ಸಂಘಪರಿವಾರದ ಗೋ ರಾಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿ ತೋರಿಸುವುದರಲ್ಲಿಯು ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಯಿತು.

ಅದೇ ರೀತಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ನಡೆಸಿದ ಜನತೆಯ ಅಭಿಯಾನವಾದ "ಭಾರತದ ಗುಂಪು ಹಿಂಸಾ ಹತೈಯನ್ನು ಪ್ರತಿರೋಧಿಸೋಣ" ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಅದಲ್ಲದೆ ಎಲ್ಲಾ ಕಾರ್ಯಕ್ರಮದಲ್ಲೂ ನಿರೀಕ್ಷೆಗಿಂತ ಹೆಚ್ಚು ಜನ ಬೆಂಬಲವು ಸಿಕ್ಕಿದೆ.ಇದರಿಂದ ಈ ಅಭಿಯಾನವು ಕಾಲದ ಬೇಡಿಕೆ ಆಗಿತ್ತು ಎಂಬುದು ಸ್ಪಷ್ಟವಾಗಿದೆ.ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ಹೋರಾಟದಲ್ಲಿ ಕೈ ಜೋಡಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದೆಯೂ ದೇಶದ ಉಳಿವಿಗಾಗಿ, ಅಮಾಯಕ ಭಾರತೀಯರ ರಕ್ಷಣೆಗಾಗಿ ತಮ್ಮೊಂದಿಗೆ ಕೈ ಜೋಡಿಸ ಬೇಕೆಂದು ಜನತೆಯ ಅಭಿಯಾನದ ಜಿಲ್ಲಾ ಸಂಯೋಜಕರಾದ ಇಕ್ಬಾಲ್ ಬೆಳ್ಳಾರೆ ವಿನಂತಿಸಿರುತ್ತಾರೆ.
 

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...