ಮಂಗಳೂರು:ಎಸ್‍ಡಿಪಿಐ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Source: sdpi | By Arshad Koppa | Published on 2nd November 2017, 8:27 AM | Coastal News | Special Report |

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಧ್ವಜಾರೋಹಣ ನಡೆಸುವುದರ ಮೂಲಕ ಚಾಲನೆ ನೀಡಿದರು.


ನಂತರ ಆಕರ್ಷಕ ಬ್ಯಾಂಡ್,ಕನ್ನಡ ಹಾಡು ಮತ್ತು ಕನ್ನಡ ಪರ ಘೋಷಣೆಗಳೊಂದಿಗೆ ಮಂಗಳೂರು ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪಾರ್ಕ್‍ನ ವರೆಗೆ ರ್ಯಾಲಿಯ ಮೂಲಕ ತೆರಳಿ ಗಾಂಧಿ ಪಾರ್ಕ್‍ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ರಾಜ್ಯದ ನೆಲ,ಜಲ,ಗಡಿ ಮತ್ತು ಭಾಷೆಯ ರಕ್ಷಣೆಗಾಗಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಹಲವು ಜೀವಗಳನ್ನು ರಕ್ಷಿಸಿದ ಅಪತ್ಭಾಂದವರಾದ ಮುಳುಗು ತಜÐರ ತಂಡದ 5 ಮಂದಿಗೆ ಸನ್ಮಾನಿಸಲಾಯಿತು.ಖ್ಯಾತ ಹಾಡುಗಾರ ಶರೀಫ್ ಪರ್ಲಿಯ ಕನ್ನಡ ಅಭಿಮಾನದ ಹಾಡನ್ನು ಹಾಡಿ ಅಭಿಮಾನಿಗಳ ಮನಸರೆಗೈದರು. ಮಂಗಳೂರು ವಿಶ್ವ ವಿದ್ಯಾನಿಲಯದ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿ, ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಆಂಟನಿ.ಪಿಡಿ, ಆನಂದ ಮಿತ್ತಬೈಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಎಸ್ ಡಿ ಎ ಯು ರಾಜ್ಯಾಧ್ಯಕರಾದ ಜಲೀಲ್ ಕೃಷ್ಣಾಪುರ, ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಹನೀಫ್ ಕಾಟಿಪಳ್ಳ, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ನವಾಝ್ ಉಳ್ಳಾಲ, ಎಸ್ ಡಿ ಎ ಯು ಮಂಗಳೂರು ವಲಯ ಅಧ್ಯಕ್ಷÀರಾದ ನೌಫಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ಎ.ಎಂ ಅಥಾವುಲ್ಲಾ ಪ್ರಾಸ್ತಾವಿಕವಾಗಿ ನುಡಿದರು.ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ ಸ್ವಾಗತಿಸಿ,ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಮಂಚಿ ಧನ್ಯವಾದವನ್ನು ಅರ್ಪಿಸಿದರು.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.    


ವರದಿ: ಇಕ್ಬಾಲ್ ಬೆಳ್ಳಾರೆ
 ( ಜಿಲ್ಲಾ ಕಾರ್ಯದರ್ಶಿ ಎಸ್.ಡಿ.ಪಿ.ಐ ದ.ಕ)

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...