ಮಂಗಳೂರು: ಪಿ. ಎ. ತಾಂತ್ರಿಕ ಮಹಾವಿದ್ಯಾಲಯದ ರಾ.ಸೇ.ಯೋ. ಘಟಕ ದ 2016-17 ಚಟುವಟಿಕೆಗಳ ಉದ್ಘಾಟನೆ.

Source: p a college | By Arshad Koppa | Published on 25th September 2016, 9:10 PM | Special Report |

ಮಂಗಳೂರು, ಸೆ ೨೪: ಪಿ. ಎ. ತಾಂತ್ರಿಕ ಮಹಾವಿದ್ಯಾಲಯದ ರಾ.ಸೇ.ಯೋ. ಘಟಕದ 2016-17ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ತಾ.24.09.2016ರಂದು ಕಾಲೇಜಿನಲ್ಲಿ ಜರಗಿತ್ತು. ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಶೇಖರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶೇಷವಾಗಿ ವೃತ್ತಿಪರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮ ಸೇವೆಯನ್ನು ನೀಡುವಂತೆ ಕರೆನೀಡಿದರು ಹಾಗೂ ಸ್ವಚ್ಛಭಾರತದಿಂದ ಸ್ವಸ್ಥ ಭಾರತದ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆನೀಡಿದರು.  ಎ.ಪಿ.ಡಿ. ಫೌಂಡೇಶನ್‍ನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲ ಎ. ರಹಮಾನ್ ಮುಖ್ಯ ಅತಿಥಿಯಾಗಿ ಹಾಜರಿದ್ದರು.  ಸಂಸ್ಥೆಯ ಪ್ರಾಂಶುಪಾಲರಾದ 
ಡಾ. ಅಬ್ದುಲ್ ಶರೀಫ್ ಸಾಂದರ್ಭಿಕವಾಗಿ ಮಾತನಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.  ಯೋಜನಾಧಿಕಾರಿಗಳಾದ ಪ್ರೊ. ಮುಸ್ಥಫಾ ಖಲೀಲ್ ಮತ್ತು ಪ್ರೊ ಮನ್ಸೂರು ಅಹಮದ್ ಕಾರ್ಯಕ್ರಮ ಸಂಘಟಿಸಿದರು. ಪ್ರೊ. ಇಕ್ಬಾಲ್ ಮತ್ತು ಪ್ರೊ ನಬೀಲ್ ಅಹಮದ್ ಸಹಕರಿಸಿದರು. ರಾ.ಸೇ.ಯೋ. ಘಟಕದ ವಿದ್ಯಾರ್ಥಿ ನಾಯಕ ಶಫೀಕ್‍ರವರು ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ ಪ್ರಾರ್ಥನಾ ವಂದನಾರ್ಪಣೆಗೈದರು. ಕುಮಾರಿ ನೀತಿಕ ಕಾರ್ಯಕ್ರಮವನ್ನು ನಿರೂಪಿಸಿದರು. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...