ಮಂಗಳೂರು:ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ

Source: sdpi | By Arshad Koppa | Published on 27th August 2017, 9:29 AM | Coastal News | Special Report |

ಮಂಗಳೂರು: ದೇಶದಾದ್ಯಂತ ಮುಸ್ಲಿಮರ, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತೈಯನ್ನು ವಿರೋಧಿಸಿ ಆಗಸ್ಟ್ 25 ಶುಕ್ರವಾರದಂದು "ಮನೆಯಿಂದ ಹೊರಗೆ ಬನ್ನಿ" ಎಂಬ ಘೋಷಣೆಯೊಂದಿಗೆ  ರಾಷ್ಟ್ರಾದ್ಯಂತ ಏಕ ಕಾಲಕ್ಕೆ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಮಿಕ್ಕಿ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.


ಜಿಲ್ಲಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ,ನಗರ ಪ್ರದೇಶಗಳಲ್ಲಿ ಎಲ್ಲಾ ಸಾರ್ವಜನಿಕರು ಒಟ್ಟಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸೆಯ ವಿರುದ್ಧ ಐಕ್ಯ ಮತವನ್ನು ಪ್ರದರ್ಶಿಸಲಾಯಿತು.
20ನಿಮಿಷಗಳ ಕಾಲ ನಡೆದ ಮಾನವ ಸರಪಳಿಯ ಮೂಲಕ ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ ಆಗುವುದನ್ನು ತಡೆಯೋಣ, ಗುಂಪು ಹತೈಯನ್ನು ಕೊನೆಗೊಳಿಸೋಣ, ಅಮಾಯಕರ ಜೀವವನ್ನು ರಕ್ಷಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ ಮತ್ತು ಕಾನೂನು ಪಾಲಕರ ಕರ್ತವ್ಯವನ್ನು ನೆನಪಿಸೋಣ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಜನರು ಗುಂಪು ಹಿಂಸೆಯಿಂದ ಹತೈಯಾದ ಅಮಾಯಕರ ಚಿತ್ರಗಳ ಮುಖವಾಡವನ್ನು ಧರಿಸಿ ಅವರ ಹತೈಯನ್ನು ಮರೆಯುವುದಿಲ್ಲ ಎಂಬ ವಿಚಾರವನ್ನು ಪ್ರದರ್ಶಿಸುವುದರ ಮೂಲಕ ಹಿಂಸಾ ಕೃತ್ಯಕ್ಕೆ ಬಲಿಯಾದವರಿಗೆ ನ್ಯಾಯ ಸಿಗಲು ಜಾಗೃತಿಯನ್ನು ಮೂಡಿಸಿದರು.
ಜಿಲ್ಲಾದ್ಯಂತ 43 ಕಡೆಗಳಲ್ಲಿ ಸಾವಿರಾರು ಜನ ಸೇರಿದ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆದಿದ್ದು,ಸಂಘಟನಾತೀತವಾಗಿ,ಪಕ್ಷಾತೀತವಾಗಿ ನಡೆದ ಈ ವಿಭಿನ್ನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳಲ್ಲಿ ವ್ಯಾಪಕ ಜನ ಬೆಂಬಲ ಸಿಕ್ಕಿರುವುದರಿಂದ ಜನರಲ್ಲಿ ಸಂವಿಧಾನ ಬದ್ಧವಾದ ಪ್ರತಿರೋಧ ಶಕ್ತಿ ಜೀವಂತವಾಗಿದೆ ಎಂಬುದಕ್ಕೆ   ಸಾಕ್ಷಿಯಾಯಿತು ಹಾಗೂ ಗುಂಪು ಹಿಂಸೆಯ ಮೂಲಕ ಭಾರತೀಯರನ್ನು ಹತೈಗೈಯುವ ಸಂಘಪರಿವಾರದ ಗೋ ರಾಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿ ತೋರಿಸುವುದರಲ್ಲಿಯು ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ಹೋರಾಟದಲ್ಲಿ ಕೈ ಜೋಡಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದೆಯೂ ದೇಶದ ಉಳಿವಿಗಾಗಿ, ಅಮಾಯಕ ಭಾರತೀಯರ ರಕ್ಷಣೆಗಾಗಿ ತಮ್ಮೊಂದಿಗೆ ಕೈ ಜೋಡಿಸ ಬೇಕೆಂದು ಜನತೆಯ ಅಭಿಯಾನದ ಜಿಲ್ಲಾ ಸಂಯೋಜಕರಾದ ಇಕ್ಬಾಲ್ ಬೆಳ್ಳಾರೆ ವಿನಂತಿಸಿರುತ್ತಾರೆ.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...