ಮಂಗಳೂರು: 'ಡ್ರಗ್ಸ್ ದ ಕಿಲ್ಲರ್'  ರಾಜ್ಯ ವ್ಯಾಪ್ತಿ ಮಾದಕ ದ್ರವ್ಯ ವಿರೋಧಿ ಅಭಿಯಾನದ ಸಮಾರೋಪ ಸಮಾರಂಭ

Source: sufiyan | By Arshad Koppa | Published on 18th January 2017, 11:56 PM | Coastal News | Special Report |

ಮಂಗಳೂರು, ಜ ೧೮:ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯವಾಪ್ತಿ ಹಮ್ಮಿಕೊಂಡಂತಹ ಡ್ರಗ್ಸ್ ದ ಕಿಲ್ಲರ್ ಜೀವಕ್ಕೆ ಪ್ರಾಮುಖ್ಯತೆ ನೀಡಿ ಮಾದಕ ದ್ರವ್ಯ ವಿರೋಧಿ ಅಭಿಯಾನದ ಸಮಾರೋಪ ಸಮಾರಂಭವು ಜನವರಿ 16 ರಂದು ನಗರದ ಶಾಂತಿ ನಿಕೇತನ ಕಾಲೇಜಿನಲ್ಲಿ ನಡೆಯಿತು. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಮಾದಕ ದ್ರವ್ಯದ ವಿರುದ್ದ ಕಳೆದರಡು ತಿಂಗಳಿನಿಂದ ರಾಜ್ಯಾದ್ಯಂತ ಪ್ರತೀ ಜಿಲ್ಲೆಯಲ್ಲೂ ಸೆಮಿನಾರ್, ಬೀದಿನಾಟಕ, ಕಿರುಚಿತ್ರ ಪ್ರದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ, ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 06 ರಂದು ಉದ್ಘಾಟನೆಗೊಂಡಂತಹ ರಾಜ್ಯ ಅಭಿಯಾನವು ರಾಮನಗರ ಜಿಲ್ಲೆಯಲ್ಲಿ ಇಂದು ಸಮಾಪ್ತಿಗೊಂಡಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಮಹಮ್ಮದ್ ತುಫೈಲ್ ವಹಿಸಿದ್ದರು ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು  ಇಂದು ಜಗತ್ತಿನಲ್ಲಿ ಅತ್ಯಂತ ಜನಸಂಪನ್ಮೂಲವನ್ನು ಹೊಂದಿರುವಂತಹ ದೇಶವಾಗಿದೆ ಭಾರತ ಇಂದು ದೇಶವನ್ನು ಕಟ್ಟಿ ಬೆಳಸಬೇಕಾದ ಯುವ ಸಮೂಹ ಮಾದಕ ವ್ಯಸನದ ದಾಸರಾಗುತ್ತಿರುವುದು ವಿಪಯರ್ಾಸ. ಮಾದಕ ದ್ರವ್ಯ ವಿರೋಧಿ ಅಪರಾಧ ತಡೆ ಸಮಿತಿಯ ಪ್ರಕಾರ ಇಂದು ನಮ್ಮ ರಾಜ್ಯದಲ್ಲಿ ಶೇ.30 ರಷ್ಟು ಯುವಸಮೂಹ ಮಾದಕ ವ್ಯಸನಿಗಳಾಗಿದ್ದಾರೆ ಇವುಗಳ ಬಗ್ಗೆ ಯುವ ಸಮೂಹಕ್ಕೆ ತಿಳಿ ಹೇಳಿಕೊಡುವುದು ವಿಧ್ಯಾಥರ್ಿಗಳಾದ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು  ಮುಖ್ಯ ಅತಿಥಿಯಾಗಿ ಅಗಮಿಸಿದ ಶಾಂತಿನಿಕೇತನ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಕುಮಾರ ಸ್ವಾಮಿಯವರು ಈ ಒಂದು ಕಾರ್ಯಕ್ರಮದಿಂದ ಯುವಕರು ಮತ್ತು ವಿದ್ಯಾಥರ್ಿಗಳು ಪ್ರೇರಿತರಾಗಿ ಮಾದಕ ದ್ರವ್ಯ ವ್ಯಸನದ ವಿರುದ್ದ ಇಂದಿನಿಂದಲೇ ಹೋರಾಟವನ್ನು ಆರಂಭಿಸಬೇಕು ಮತ್ತು ಇಂದು ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗಿದೆ ಇದರಿಂದ ಕಳ್ಳತನ, ಕೊಲೆಯಂತಹ ಅಪರಾಧಿ ಕೃತ್ಯಗಳು ಹೆಚ್ಚಳವಾಗುತ್ತಿದೆ. ಈ ವಿಚಾಗಳ ಕುರಿತಂತೆ ವಿದ್ಯಾಥರ್ಿಗಳು ಜಾಗೃತರಾಗಬೇಕಾಗಿರುವುದು ಅವಶ್ಯಕವಾಗಿದೆ ಎಂದರು. ಸಂಶೋಧಕರು, ವಿಜ್ಞಾನಿಯು ಆದಂತಹ ಡಾ.ರಾಬಿನ್ ಚಂದ್ರರವರು ಮಾತನಾಡಿ ಸಮಾಜಮುಖಿಯಾದಂತಹ ಇಂತಹ ಜಾಗೃತಿ ಕಾರ್ಯಕ್ರಮಗಳು ಶ್ಲಾಘನೀಯ ಹಾಗು ಅನಿವಾರ್ಯ ಎಂದರು ಆರೋಗ್ಯಾಧಿಕಾರಿಗಳಾದ ಡಾ. ಪೂರ್ಣೀಮಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಡಾ. ದೇವರಾಜ್ ಮಾದಕ ದ್ರವ್ಯದ ಪರಿಣಾಮದ ಬಗ್ಗೆ ಕಾರ್ಯಗಾರ ನಡೆಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ನ ರಾಷ್ಟ್ರೀಯ ಸಮಿತಿ ಸದಸ್ಯ ವಸೀಂ ಶರೀಫ್, ಶಾಂತಿ ನಿಕೇತನ ಪದವಿ ಕಾಲೇಜಿನ ಪ್ರಾಂಶುಪಾಲೆ ಲತಾ ಹೆಚ್.ಡಿ ಕ್ಯಾಂಪಸ್ ಫ್ರಂಟ್ ನ ರಾಜ್ಯ ಪ್ರಧಾನ ಕಾರ್ಯದಶರ್ಿ ಸದಕತುಲ್ಲಾ, ಜಿಲ್ಲಾಧ್ಯಕ್ಷ ಜೌಹರ್, ಜಿಲ್ಲಾ ಉದರ್ು  ಶಿಕ್ಷಣಾ ಸಂಯೋಜನಾಧಿಕಾರಿ ನುಝತ್ ತಬಸ್ಸುಂ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುಂದೆ ಮಾದಕ ದ್ರವ್ಯದ ಪರಿಣಾಮದ ಕುರಿತು ನಾಟಕವನ್ನೂ ಪ್ರದರ್ಶಿಸಲಾಯಿತು   ರಿಯಾಝ್ ರವರು ನಿರೂಪಿಸಿದರು ರಾಜ್ಯ ಕಾರ್ಯದಶರ್ಿ ಮಹಮ್ಮದ್ ತಪ್ಸೀರ್ ವಂದಿಸಿದರು.

ಚಿತ್ರ, ವರದಿ:
ಸುಫಿಯಾನ್
ಮಾಧ್ಯಮ ವಕ್ತಾರರು
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...