ಮಂಗಳೂರು: ಎಸ್.ಡಿ.ಪಿ.ಐ ಪಕ್ಷದ ಮುಖಂಡ ಮಹಮ್ಮದ್ ಅಶ್ರಫ್‍ರವರನ್ನು ಕೊಲೆಗೈದ ಹಂತಕರನ್ನು ಕೂಡಲೇ ಬಂಧಿಸಿ - ಎಸ್.ಡಿ.ಪಿ.ಐ

Source: sdpi | By Arshad Koppa | Published on 24th June 2017, 8:33 AM | State News | Guest Editorial |

ದಿನಾಂಕ 21-6-2017 (ಬುಧವಾರ) ಬೆಳಿಗ್ಗೆ ಸುಮಾರು 11 ಗಂಟೆಯ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಮುಂಜೆ ಗ್ರಾಮದ ಕಲಾಯಿ ಖೈಬರ್ ನಗರ ನಿವಾಸಿ ದಿ.ಶೇಕಬ್ಬ ಎಂಬವರ ಪುತ್ರ ಆಟೋ ಚಾಲಕ ವೃತ್ತಿಯ ಮಹಮ್ಮದ್ ಅಶ್ರಫ್ (33) ಎಂಬವರನ್ನು ದುಷ್ಕರ್ಮಿಗಳು ಕೋಮು ದ್ವೇಷದಿಂದ ಕೊಲೆಗೈದಿರುತ್ತಾರೆ. ಮೃತರು ಪತ್ನಿ ಮತ್ತು ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಕಳೆದುಕೊಂಡಿರುತ್ತಾರೆ. ಇವರು ಎಸ್.ಡಿ.ಪಿ.ಐ ಪಕ್ಷದ ಅಮ್ಮುಂಜೆ ಪ್ರದೇಶದ ವಲಯಾಧ್ಯಕ್ಷರಾಗಿದ್ದು, ಅವರು ಬೀಡಿ ಉದ್ಯಮಿ ಶೀನ ಪೂಜಾರಿ ಎಂಬವರನ್ನು ಆಟೋದಲ್ಲಿ ಎಂದಿನಂತೆ ಬಾಡಿಗೆಗೆ ಕರೆದುಕೊಂಡು ಹೋಗಿದ್ದ ವೇಳೆ ಬೆಂಜನಪದವಿನ ಕರಾವಳಿ ಸೈಟ್‍ನ ರಾಮನಗರ ಎಂಬಲ್ಲಿ ದುಷ್ಕರ್ಮಿಗಳು ಪೂರ್ವ ಯೋಜಿತವಾಗಿ ಕೋಮುದ್ವೇಷದಿಂದ ಮಹಮ್ಮದ್ ಅಶ್ರಫ್‍ರವರನ್ನು ಕೊಲೆಗೈದಿರುತ್ತಾರೆ.


ಮಹಮ್ಮದ್ ಅಶ್ರಫ್‍ರವರು ವಾರಕ್ಕೆ 3 ದಿನ ವಿಕಲಚೇತನರಾಗಿರುವ ಶೀನ ಪೂಜಾರಿಯವರನ್ನು ತನ್ನ ರಿಕ್ಷಾದಲ್ಲಿ ಕರಾವಳಿ ಸೈಟ್‍ನ ರಾಮನಗರ ಎಂಬಲ್ಲಿಗೆ ಕರೆತಂದು ಅದೇ ರಿಕ್ಷಾದಲ್ಲಿ ವಾಪಸ್ಸು ಬರುತ್ತಿದ್ದರು. ಸಮಾಜ ಸೇವಕರು, ಸರ್ವಧರ್ಮ ಭಾಂದವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಶ್ರಫ್‍ರವರನ್ನು ಕೊಂದಿರುವ ಘಟನೆಯು ಇಡೀ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ಭಯ ಹಾಗೂ ಅಭದ್ರತೆಯನ್ನು ಹುಟ್ಟುಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಶೇಷತಃ ಬಂಟ್ವಾಳ ತಾಲೂಕಿನಲ್ಲಿ ಅವ್ಯಹತವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹತ್ಯಾ ಯತ್ನ, ಚೂರಿಇರಿತ, ಕೊಲೆ ಬೆದರಿಕೆ, ಮಸೀದಿಗಳ ಮೇಲೆ ಕಲ್ಲೆಸೆತ ಹಾಗೂ ಥಳಿತ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಜೂನ್ 20ರದು ತುಂಬೆಯಲ್ಲೂ ಮುಸ್ಲಿಂ ಹುಡುಗನೊಬ್ಬನ ಕೊಲೆಯತ್ನ ನಡೆದಿತ್ತು, ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಕರೋಪಾಡಿಯ ಹತ್ಯೆಯು ನಡೆದಿತ್ತು, ಅಲ್ಲದೆ ಸಂಘಪರಿವಾರದ ನಾಯಕರಿಂದ ಕೋಮು ಗಲಭೆಯ ಪ್ರಚೋದನಕಾರಿ ಭಾಷಣಗಳು ಮತ್ತು ಹೇಳಿಕೆಗಳು ನಿರಂತÀರವಾಗಿ ನಡೆಯುತ್ತಲೇ ಬಂದಿರುತ್ತದೆ. 
ಅಶ್ರಫ್ ಕಲಾಯಿಯವರ  ಹತ್ಯೆಯು ಕೂಡ ಸಂಘಪರಿವಾರ ಪ್ರಾಯೋಜಿತ ಕೋಮು ಗಲಭೆ ನಡೆಸುವ ಸಂಚಿನ ಭಾಗವಾಗಿದೆ. ಕಳೆದೊಂದು ವರ್ಷದಲ್ಲಿ ಸುಮಾರು ಆರು ಮಂದಿ ಅಮಾಯಕರನ್ನು ಸಂಘಪರಿವಾರ ಹತ್ಯೆ ನಡೆಸಿದ್ದು ಹಲವು ಮಂದಿಯ ಮೇಲೆ ಹತ್ಯಾ ಯತ್ನದ ದಾಳಿ ನಡೆಸಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಪ್ರಕ್ಷುಬ್ದ ವಾತಾವರಣವನ್ನು ಮತ್ತು ಸಂಘಪರಿವಾರದವರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದರಿಂದ ಈ ಕೊಲೆಯ ನೇರ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕಾಗಿರುತ್ತದೆ. ಅಶ್ರಫ್ ಕಲಾಯಿಯ ಹಂತಕರನ್ನು ಹಾಗೂ ಸಂಚಿನ ರೂವಾರಿಗಳನ್ನು ಕೂಡಲೇ ಬಂಧಿಸಿಸಬೇಕು ಹಾಗೂ ಜಿಲ್ಲಾದ್ಯಂತ ಕೋಮು ಗಲಭೆ ನಡೆಸಲು ಯತ್ನಿಸುವ ಸಂಘಪರಿವಾರದ ಸಂಚನ್ನು ಬಯಲುಗೊಳಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‍ಡಿಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಸರಕಾರದೊಂದಿಗೆ ಆಗ್ರಹಿಸುತ್ತದೆ ಹಾಗೂ ನಮ್ಮ ಪಕ್ಷವು ಈ ಕೊಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಬೇಡಿಕೆಗಳನ್ನು ಸರಕಾರದ ಮುಂದೆ ಇಡುತ್ತಿದೆ. 
    ನಮ್ಮ ಬೇಡಿಕೆಗಳು :
1.    ಮಹಮ್ಮದ್ ಅಶ್ರಫ್‍ರವರ ಕೊಲೆಗೈದ ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು. 
2.    ಮಹಮ್ಮದ್ ಅಶ್ರಫ್‍ರವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನವನ್ನು ಸರಕಾರವು ನೀಡಬೇಕು. 
3.    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಕಾನೂನುಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ  ಕೂಡಲೇ ಸರಕಾರವು ಆರ್.ಎಸ್.ಎಸ್ ಸಂಘಟನೆಯನ್ನು ನಿಷೇಧಿಸಬೇಕು. 
4.    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ವಿಫಲಗೊಂಡಿರುವುದರಿಂದ ಇದರ ನೈತಿಕ ಹೊಣೆಯನ್ನು ಹೊತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜಿನಾಮೆಯನ್ನು ನೀಡಬೇಕು.


ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ :
1.    ಇಲ್ಯಾಸ್ ಮಹಮ್ಮದ್ ತುಂಬೆ (ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಸ್‍ಡಿಪಿಐ)
2.    ಸಿದ್ದೀಕ್ ಪುತ್ತೂರು (ಜಿಲ್ಲಾ ಉಪಾಧ್ಯಕ್ಷರು, ಎಸ್‍ಡಿಪಿಐ, ದ.ಕ. ಜಿಲ್ಲೆ)
3.    ಇಕ್ಬಾಲ್ ಬೆಳ್ಳಾರೆ (ಜಿಲ್ಲಾ ಕಾರ್ಯದರ್ಶಿ, ಎಸ್‍ಡಿಪಿಐ, ದ.ಕ. ಜಿಲ್ಲೆ)
4.    ಇಕ್ಬಾಲ್ ಗೂಡಿನಬಳಿ (ಜಿಲ್ಲಾ ಕೋಶಾಧಿಕಾರಿ, ಎಸ್‍ಡಿಪಿಐ, ದ.ಕ. ಜಿಲ್ಲೆ)
5.    ನಾಸಿರ್ ಸಜಿಪ (ಅಧ್ಯಕ್ಷರು, ಗ್ರಾಮ ಪಂಚಾಯತ್, ಸಜಿಪನಡು)
6.    ಉಮರ್ ಸುಳ್ಯ (ಸದಸ್ಯರು, ನಗರ ಪಂಚಾಯತ್, ಸುಳ್ಯ)
7.    ಮುನೀಶ್ ಬಂಟ್ವಾಳ (ಸದಸ್ಯರು, ಪುರಸಭೆ, ಬಂಟ್ವಾಳ)
8.    ಸಾದಿಕ್ ( ಅಶ್ರಫ್‍ರ ಅಣ್ಣ)


ಧನ್ಯವಾದಗಳೊಂದಿಗೆ, 
ದಿನಾಂಕ    : 22/06/2017 
ಸ್ಥಳ    : ಮಂಗಳೂರು
                                        
ಇಕ್ಬಾಲ್ ಬೆಳ್ಳಾರೆ
ಜಿಲ್ಲಾ ಕಾರ್ಯದರ್ಶಿ
ಎಸ್.ಡಿ.ಪಿ.ಐ, ದ.ಕ. ಜಿಲ್ಲೆ
ಮೊ : 9611695453

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...