ಮಂಗಳೂರು:ಎ. ಜೆ. ಹಾಸ್ಪಿಟಲ್ ನ ವೈದ್ಯರಿಂದ ಯಶಸ್ವೀ ಶ್ವಾಸಕೋಶದ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸೆ

Source: varthabhavan | By Arshad Koppa | Published on 9th September 2017, 8:22 AM | Coastal News | Special Report |

ಮಂಗಳೂರು, ಸೆಪ್ಟೆಂಬರ್ 6, 2017: ಎ. ಜೆ. ಹಾಸ್ಪಿಟಲ್ ಮತ್ತು ಸಂಶೋಧನಾ ಕೇಂದ್ರವು ಮಂಗಳೂರಿನ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಒಂದು ಪ್ರಮುಖ ರೆಫರಲ್ ಕೇಂದ್ರವಾಗಿದೆ ಹಾಗೂ ಈ ಕೇಂದ್ರವು ವಿಭಿನ್ನ ಅಪರೂಪದ ಚಿಕಿತ್ಸೆಗಳನ್ನು ಮೊತ್ತಮೊದಲ ಬಾರಿಗೆ ಮಾಡಿದ ಕೀರ್ತಿಯನ್ನು ಹೊಂದಿದ್ದು, ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ಮೈಲಿಗಲ್ಲನ್ನು ಸಾಧಿಸಿದೆ.


 48 ಪ್ರಾಯದ ಮಹಿಳೆಯು ಕಫ ಮತ್ತು ಜ್ವರದಿಂದ 6 ತಿಂಗಳ ಕಾಲದಿಂದ ಬಳಲುತ್ತಿದ್ದರು.  ಆಕೆಯು ಶ್ವಾಸಕೋಶ ತಜ್ಞರಾದ ಡಾಕ್ಟರ್ ವಿಷ್ಣು ಶರ್ಮರಿಂದ ಪರಿಶೀಲನೆಗೆ ಒಳ ಪಟ್ಟಿದ್ದು, ಆಕೆಯ ಶ್ವಾಸಕೋಶದ ಎಡಭಾಗದಲ್ಲಿ ಗಡ್ಡೆ ಇರುವುದನ್ನು ಪತ್ತೆಹಚ್ಚಿ ಅದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕೆಂದು ತಿಳಿಸಿದರು.  ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ವಿಡಿಯೋ ನೆರವಿನ ಥೊರಾಕೊಸ್ಕೋಪಿಯಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.  ಆ ಶಸ್ತ್ರಚಿಕಿತ್ಸೆಯಲ್ಲಿ 10 ಎಂಎಂ ಮತ್ತು 5 ಎಂಎಂ ನ ಎರಡು ಛೇದನಗಳನ್ನು ಮಾಡುವುದರ ಮೂಲಕ ಸಂಪೂರ್ಣ ಗಡ್ಡೆಯನ್ನು ತೆಗೆಯಲಾಯಿತು. ಎ. ಜೆ. ಹಾಸ್ಪಿಟಲ್ ನ ವೈದ್ಯರುಗಳು ಅಪರೂಪದ ಮತ್ತು ಈ ಪ್ರಾಂತ್ಯದ ಮೊದಲ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ ಮತ್ತು ರೋಗಿಯು 2 ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. 


ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಕಾರ್ಡಿಯೋ ಥೋರಸಿಕ್ ಹಾಗೂ ವ್ಯಾಸ್ಕ್ಯುಲರ್ ತಜ್ಞರಾದ ಡಾಕ್ಟರ್ ಸಂಭ್ರಮ್ ಶೆಟ್ಟಿ ಯವರು ನಿರ್ವಹಿಸಿದ್ದು, ಡಾಕ್ಟರ್ ಜಯಶಂಕರ್ ಮಾರ್ಲಾ,  ಕಾರ್ಡಿಯೋ ಥೋರಸಿಕ್ ತಜ್ಞ,  ಡಾಕ್ಟರ್ ಗೌರವ್ ಶೆಟ್ಟಿ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಹೃದ್ರೋಗ ಅರಿವಳಿಕೆ ತಜ್ಞ ಡಾಕ್ಟರ್ ಗುರುರಾಜ್ ತಂತ್ರಿಯವರ ಸಹಯೋಗದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 


ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಈ ಪ್ರಾಂತ್ಯದಲ್ಲೇ ಮೊತ್ತ ಮೊದಲಿಗೆ ಮಾಡಿರುವ ಡಾಕ್ಟರ್ ಸಂಭ್ರಮ್ ಶೆಟ್ಟಿಯವರು ಎ. ಜೆ. ಆಸ್ಪತ್ರೆಯಲ್ಲಿ ಸಂದರ್ಶನಕ್ಕೆ ಹಾಗೂ ಚಿಕಿತ್ಸೆಗೆ ಲಭ್ಯರಿರುತ್ತಾರೆ.  ಈ ಶಸ್ತ್ರಚಿಕಿತ್ಸೆಯ ಹೆಚ್ಚಿನ ವಿವರಗಳಿಗೆ ಡಾಕ್ಟರ್ ಸಂಭ್ರಮ್ ಶೆಟ್ಟಿಯವರನ್ನು 7829333430  ಸಂಪರ್ಕಿಸಬಹುದು.

ಡಾಕ್ಟರ್ ಸಂಭ್ರಮ್ ಶೆಟ್ಟಿಯವರೊಂದಿಗೆ ಭೇಟಿ ನಿಗದಿಪಡಿಸಲು ಸಂಪರ್ಕಿಸಿ 0824 -6613282 / 7846802333  


ಡಾ. ಪ್ರಶಾಂತ್ ಮಾರ್ಲ 
ವೈದ್ಯಕೀಯ ನಿರ್ದೇಶಕರು ಮತ್ತು ಕಿಡ್ನಿ ಕಸಿ ತಜ್ಞ  
ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...