ಜೆಡಿಎಸ್ ಪುಟಗೋಸಿ ಪಕ್ಷ ಎಂದ ಕೇಂದ್ರ ಸಚಿವ ಅನಂತ್ ಕುಮಾರ್ ಗೆ ತಕ್ಕ ಉತ್ತರ ನೀಡಿದ ಜೆ.ಡಿ.ಎಸ್. ಕಾರ್ಯಕರ್ತರು

Source: sonews | By sub editor | Published on 4th June 2018, 11:04 PM | State News | Don't Miss |

ಮಂಡ್ಯ: ಜೆ.ಡಿ.ಎಸ್. ಪಕ್ಷವನ್ನು ಪುಟಗೋಸಿ ಎಂದು ಹೀಯಾಳಿಸಿದ  ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಯನ್ನು ಉಡುಗೋರೆಯಾಗಿ ಕಳುಹಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹೆಗಡೆಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

ಸೋಮವಾರ ಮಂಡ್ಯದ ಪೋಸ್ಟ್ ಆಫೀಸ್ ಬಳಿ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿಗಳನ್ನು ಕೊರಿಯರ್ ಮಾಡಿದ್ದಾರೆ. ಹಿಂದೆ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಜೆಡಿಎಸ್ ಪುಟಗೋಸಿ ಪಕ್ಷ ಅಂತಾ ಲೇವಡಿ ಮಾಡಿದ್ದರು. ಹಿನ್ನೆಲೆಯಲ್ಲಿ ಮಂಡ್ಯದ ಕಾರ್ಯಕರ್ತರ ಕೇಂದ್ರ ಸಚಿವರಿಗೆ ಬಣ್ಣ ಬಣ್ಣದ ಪುಟಗೋಸಿಗಳನ್ನು ರವಾನಿಸಿದ್ದಾರೆ.

ಅನಂತಕುಮಾರ ಹೆಗಡೆ ಅವರು ಕರ್ನಾಟಕದ ಪ್ರಾದೇಶಿಕ ಪಕ್ಷವನ್ನು ಪುಟಗೋಸಿಗೆ ಹೋಲಿಕೆ ಮಾಡಿದ್ದಾರೆ. ಪುಟಗೋಸಿ ಬಳಕೆ ಸಚಿವರಿಗೆ ಗೊತ್ತಿಲ್ಲ ಎಂಬಂತೆ ಕಾಣುತ್ತಿಲ್ಲ. ಎಲ್ಲರೂ ಪುಟಗೋಸಿ ಹಾಕಿಕೊಂಡು ಜೀವನ ಮಾಡುತ್ತಿದ್ದು, ಅದು ಜನರ ಮಾನವನ್ನು ಮುಚ್ಚುತ್ತದೆ. ಕೇಂದ್ರ ಸಚಿವರಾಗಿ ಇಂತಹ ಪದ ಪ್ರಯೋಗ ಮಾಡಬಾರದು. ಇನ್ನು ಮುಂದೆ ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಅಂತಾ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ

Read These Next