ಮಕ್ಕಾ: ಹಜ್ ಯಾತ್ರಿಕರಿಗೆ ಬಿಸಿಲು ಮತ್ತು ತಲೆತಿರುಗುವಿಕೆಯಿಂದ ರಕ್ಷಿಸಲು 24 ಘಂಟೆ ಸನ್ನದ್ಧ ಸೇವೆ

Source: so english | By Arshad Koppa | Published on 2nd September 2016, 9:03 AM | Gulf News |

ಮಕ್ಕಾ, ಸೆ ೨: ಈ ವರ್ಷದ ಹಜ್ ಸಹಾ ಅತೀವ ಬಿಸಿ ಮತ್ತು ಸೆಖೆಯ ದಿನಗಳಲ್ಲಿ ಆಗಮಿಸಿದ್ದು ಈ ಬಿಸಿಲನ್ನು ತಾಳಲಾರದೇ ತಲೆ ತಿರುಗಿ ಬೀಳುವ ಹಜ್ ಯಾತ್ರಿಕರಿಕೆ ತಕ್ಷಣದ ಉಪಚಾರ ಮತ್ತು ಸಾಧ್ಯವಿರುವ ಎಲ್ಲಾ ನೆರವನ್ನು ದಿನದ ಇಪ್ಪತ್ತನ್ನಾಲ್ಕೂ ಘಂಟೆ ಒದಗಿಸಲು ಆರೋಗ್ಯ ಸಚಿವಾಲಯ ಹಲವು ಕ್ರಮಗಳನ್ನ್ ಕೈಗೊಂಡಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಮಕ್ಕಾ, ಮದೀನಾ ಮತ್ತು ಇತರ ಪವಿತ್ರ ಸ್ಥಳಗಳಾದ ಮೀನಾ, ಮುಝ್ದಲಿಫಾ, ಜಮಾರತ್ ಮತ್ತು ಅರಫಾತ್ ಮೈದಾನಗಳಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕ ವ್ಯವಸ್ಥೆಯುಳ್ಳ ಆಂಬ್ಯುಲೆನ್ಸ್ ವಾಹನಗಳನ್ನೂ, ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಮಕ್ಕಾ ಬಳಿಯ ಅಲ್ ಮುಐಸಮ್ ಎಂಬಲ್ಲಿ ತುರ್ತು ಸೇವೆಗಾಗಿಯೇ ಘಟಕವೊಂದನ್ನು ಪ್ರಾರಂಭಿಸಲಾಗಿದ್ದು ಇಲ್ಲಿ 120 ಚಿಕ್ಕ ಆಂಬ್ಯುಲೆನ್ಸ್ ಮತ್ತು 57 ’ಸನಾದ್’ ಎಂಬ ಹೆಸರಿನ ದೊಡ್ಡ ಆಂಬ್ಯುಲೆನ್ಸ್ ವಾಹನಗಳನ್ನು ಹೊಂದಿದೆ. 

ಅರಫಾತ್ ಬಳಿ ಇರುವ ಅರಫಾತ್ ಜನರಲ್ ಆಸ್ಪತ್ರೆಯ ಗೋದಾಮಿನಲ್ಲಿ ಹೆಚ್ಚಿನ ಪ್ರಮಾಣದ ಅಗತ್ಯ ಔಷಧಿಗಳನ್ನು, ವೈದ್ಯಕೀಯ ಉಪಕರಣ, ತುರ್ತು ಪರಿಸ್ಥಿತಿಗಾಗಿ ಅಗತ್ಯವಿರುವ ಇತರ ವಸ್ತುಗಳನ್ನು ದಾಸ್ತಾನು ಇರಿಸಲಾಗಿದ್ದು ಯಾವುದೇ ತುರ್ತು ಸೇವೆಗೆ ತಕ್ಷಣ ಒದಗಿಸಲು ಸಾಧ್ಯವಾಗುವಂತೆ ಜೋಡಿಸಲಾಗಿದ್ದು ಈ ಕೆಲಸಕ್ಕೂ ದಿನದ ಇಪ್ಪತ್ತನಾಲ್ಕೂ ಘಂಟೆ ಸೇವೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಅರಫಾತ್ ಮೈದಾನದಲ್ಲಿ ಯಾವುದೇ ಯಾತ್ರಿಕರಿಗೆ ತೊಂದರೆಯಾದರೂ ತಕ್ಷಣವೇ ಸೇವೆ ಒದಗಿಸಲು ತುರ್ತು ಸೇವಾ ಮೊಬೈಲ್ ಸಂಖ್ಯೆಗಳನ್ನು ಎಲ್ಲೆಡೆ ಪ್ರಕಟಿಸಲಾಗಿದೆ. 

ಗೋದಾಮಿನ ಹೊರತಾಗಿ ಶೀತಲೀಕರಣ ಘಟಕವಿರುವ ವಾಹನಗಳಲ್ಲಿಯೂ ಅಗತ್ಯ ಔಷಧಿ ಮತ್ತು ಉಪಕರಣಗಳನ್ನು ಸಂಗ್ರಹಿಸಲಾಗಿದ್ದು ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಸ್ಥಳಗಳಿಗೆ ಇವುಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಅನುವು ಮಾಡಿ ಇಡಲಾಗಿದೆ. ಮೀನಾ ಅಲ್ ವಾದಿಯಲ್ಲಿರುವ ಆಸ್ಪತ್ರೆಯ ಗೋದಾಮಿನಲ್ಲಿಯೂ ಸಾಕಷ್ಟು ಪ್ರಮಾಣದ ಔಷಧಿಗಳನ್ನು ದಾಸ್ತಾನು ಇರಿಸಲಾಗಿದೆ. 

ಮಕ್ಕಾ ನಗರದಲ್ಲಿ 208 ಹೆಚ್ಚುವರಿ ಫ್ಯಾನ್ ಗಳನ್ನು ಅಳವಡಿಸಲಾಗಿದ್ದು ಹೆಚ್ಚಿನ ಗಾಳಿಯಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೇ ಸ್ವಯಂಸೇವಕರು ನೀರಿನ ಸ್ಪ್ರೇ ಮೂಲಕ ಸಾಧ್ಯವಿದ್ದೆಡೆ ತಿರುಗಿ ಯಾತ್ರಿಕರ ಸೆಖೆಯನ್ನು ಕಡಿಮೆ ಮಾಡಲು ತಮ್ಮ ನೆರವು ನೀಡಲಿದ್ದಾರೆ. ತಣ್ಣನೆಯ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಾಗಿದ್ದು ಯಾವುದೇ ಸ್ಥಳದಲ್ಲಿ ಸುಲಭವಾಗಿ ದೊರಕುವಂತೆ ಮಾಡಲಾಗಿದೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.